ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ಇಂದು ನಾವೆಲ್ಲ ಇಂಟರ್‌ನೆಟ್ ಲೋಕದಲ್ಲಿದ್ದೇವೆ. ಏನೇ ಮಾಹಿತಿ ಬೇಕಾದ್ರೂ ನಾವು ಇಂಟರ್‌ನೆಟ್‌ನಲ್ಲಿ ಪಡೆಯಬಹುದು. ಹಾಗಾಗಿ ಇಂಟರ್‌ನೆಟ್ ಈ ರೀತಿ ಪ್ರಸಿದ್ಧವಾಗಲು ಕಾರಣವಾದ ಅಂಶಗಳೇನು ಎಂಬುದನ್ನು ನಾವು ತಿಳಿಯಬೇಕಲ್ಲವೆ. ಅದಕ್ಕಾಗಿ ಗಿಜ್ಬಾಟ್ ಇಂದು ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತಾದ ವರ್ಷಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ : 1998
ಲಾರಿ ಪೇಜ್ ಮತ್ತು ಸೆರ್ಜಿ ಬ್ರಿನ್ ಸ್ನೇಹಿತರು 1998ರಲ್ಲಿ ಗೂಗಲ್‌ನ್ನು ಆರಂಭಿಸಿದರು. ಸದ್ಯ ಸರ್ಚ್ ಇಂಜಿನ್, ಕ್ಲೌಡ್ ಕಂಪ್ಯೂಟಿಂಗ್,ಯೂಟ್ಯೂಬ್ ಸೇರಿದಂತೆ ಹಲವಾರು ವಿವಿಧ ಸೇವೆಗಳನ್ನು ನೀಡುತ್ತಿವೆ.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ: 2000
ಸಾಗರದಡಿಯಲ್ಲಿ ಸಬ್ ಮೆರೀನ್ ಕೇಬಲ್ ತಂತ್ರಜ್ಞಾನ 2000ದ ಹೆಚ್ಚು ಪ್ರಸಿದ್ದವಾಯಿತು. 1850ರಲ್ಲೇ ಈ ತಂತ್ರಜ್ಞಾನವನ್ನು ದೂರವಾಣಿ ಸಂಪರ್ಕಕ್ಕೆ ಉಪಯೋಗಿಸಲಾಗುತ್ತಿತ್ತು. ಈಗ ಆಪ್ಟಿಕಲ್ ಫೈಬರ್ ಕೇಬಲ್‌ನ್ನು ಸಾಗರದಡಿಯಲ್ಲಿ ಸಂವಹನ ಸಂಪರ್ಕಕ್ಕಾಗಿ ಹಾಕಲಾಗಿದೆ. ಟೆಲಿಫೋನ್, ಇಂಟರ್‌ನೆಟ್ ಸಂಪರ್ಕ ಇಂದು ಇಷ್ಟು ಹೆಚ್ಚಾಗಿ ಶಕ್ತಿಶಾಲಿಯಾಗಲು ಇವುಗಳು ಒಂದು ಕಾರಣ.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ:2001
ಯಾವುದೇ ಆರ್ಥಿಕ ಲಾಭವಿಲ್ಲದೇ ಹುಟ್ಟಿಕೊಂಡ ವಿಕಿಪೀಡಿಯಾ ಇಂದು 285 ಭಾಷೆಗಳಲ್ಲಿ ಜ್ಞಾನ ಪ್ರಸಾರ ಮಾಡುತ್ತಿದೆ.ವಿಶ್ವದಾದ್ಯಂತ ಪ್ರತಿ ತಿಂಗಳು ಸುಮಾರು 4೦೦ ದಶಲಕ್ಷ ಮಂದಿ ವಿಕಿಪೀಡಿಯಾಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ : 2001
ಡಿಜಿಟಲ್ ಚಿತ್ರ ಮತ್ತು ಸಣ್ಣ ಗಾತ್ರದ ವೀಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ಶೇರ್ ಮಾಡುವ ಪ್ರಕ್ರಿಯೆ 2001ರಿಂದ ಆರಂಭಯಿತು.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ : 2003
ಇಂಟರ್‌ನೆಟ್‌ನಲ್ಲಿ ಕುಳಿತುಕೊಂಡು ದೂರವಾಣಿಗಿಂತ ಕಡಿಮೆ ಬೆಲೆಯಲ್ಲಿ ಮಾತನಾಡಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟ ಸಂಸ್ಥೆ ಸ್ಕೈಪಿ, ಸದ್ಯ ವಿಶ್ವದಲ್ಲಿ600 ಮಿಲಿಯನ್ ಗ್ರಾಹಕರು ಉಪಯೋಗಿಸುತ್ತಿದ್ದಾರೆ,2011ರಲ್ಲಿ 8.5 ಬಿಲಿಯನ್ ನೀಡಿ ಮೈಕ್ರೋಸಾಫ್ಟ್ ಸ್ಕೈಪ್‌ನ್ನು ಖರೀದಿಸಿತು.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ : 2004
ವೀಡಿಯೋ ಶೇರಿಂಗ್ ವೆಬ್‌ಸೈಟ್ ಯೂಟ್ಯೂಬ್ ಪೇ ಪೋಲ್ ಕಂಪೆನಿ ಮೂವರು ಸ್ನೇಹಿತರು ಆರಂಭಿಸಿದರು.ಇಂದಿಗೂ ವಿಶ್ವದ ನಂ .1 ವೀಡಿಯೋ ವೆಬ್‌ಸೈಟ್ ಎಂಬ ಪ್ರಖ್ಯಾತಿ ಯೂ ಟ್ಯೂಬ್‌ಗೆ ಇದೆ.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ : 2006
ಟಿವಿ ಕಾರ್ಯಕ್ರಮವನ್ನು ಇಂಟರ್‌ನೆಟ್ ಸಹಾಯದಿಂದ ಕಂಪ್ಯೂಟರ್‌ನಲ್ಲಿ ನೋಡುವಂತೆ ತಂತ್ರಜ್ಞಾನ ರೂಪಿಸಿದ ಕಂಪೆನಿ ನೆಟ್‌ಫ್ಲಿಕ್ಸ್. ಇದರಿಂದಾಗಿ ಟಿವಿ ಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನೋಡುವಂತಾಯಿತು.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ :2009
ಫೇಸ್‌ಬುಕ್ 250 ದಶಲಕ್ಷ ಬಳಕೆದಾರರನ್ನು ತಲುಪಿದ ವರ್ಷ. ಸದ್ಯ ವಿಶ್ವದ ನಂಬರ್ ಒನ್ ಸೋಶಿಯಲ್ ವೆಬ್‌ಸೈಟ್ ಎಂದೇ ಹೆಸರುವಾಸಿಯಾಗಿರುವ ಫೇಸ್‌ಬುಕ್‌ನಲ್ಲಿ ಪ್ರತಿದಿನ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನ ಬಳಸುತ್ತಿದ್ದಾರೆ.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ: 2010
ಮೊದಲ ಐ ಪ್ಯಾಡ್ ಬಿಡುಗಡೆಯಾದ ವರ್ಷ. ಆಪಲ್ ಕಂಪೆನಿ 2010ರ ಏಪ್ರಿಲ್ 3 ರಂದು ಮೊದಲ ಐಪ್ಯಾಡ್‌ನ್ನು ಬಿಡುಗಡೆಗೊಳಿಸಿತು. ಐ ಪಾಡ್ ಮಿನಿಯನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಆಪಲ್ ಬಿಡುಗಡೆ ಮಾಡಿದೆ.

ಇಂಟರ್‌ನೆಟ್ ಲೋಕದ ಮಹತ್ವದ ಹೆಜ್ಜೆ ಗುರುತುಗಳಿವು
ವರ್ಷ: 2012
ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳು ಇದುವರೆಗೆ ಡೌನ್‌ಲೋಡ್ ಆದ ಸಂಖ್ಯೆ 40 ಬಿಲಿಯನ್‌ಗಿಂತಲೂ ಅಧಿಕ. ಅಪ್ಲಿಕೇಶನ್ ಸಾಫ್ಟ್ ವೇರ್‌ಗೆ ಉದಾಹರಣೆಗೆ : ಎಂಟರ್‌ಪ್ರೈಸಸ್ ಸಾಫ್ಟ್‌ವೇರ್,ಗ್ರಾಫಿಕ್ ಸಾಫ್ಟ್ ವೇರ್, ಮೀಡಿಯಾ ಪ್ಲೇಯರ್.


Click it and Unblock the Notifications








