Subscribe to Gizbot

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು

Posted By:

ಇಂಟರ್‌ನೆಟ್‌ ಬಳಸುವ ಪ್ರತಿಯೊಬ್ಬರಿಗೂ ಅಮೆರಿಕನ್‌ ಕಂಪೆನಿಗಳಾದ ಗೂಗಲ್‌ ಮೈಕ್ರೋಸಾಫ್ಟ್‌,ಒರೆಕಲ್‌,ಅಡೊಬೊ ಪದ ಚಿರಪರಿಚಿತ.ಆದರೆ ಈ ಎಲ್ಲಾ ಸಂಸ್ಥೆಗಳು ವಿಶ್ವದ ದೊಡ್ಡ ಟೆಕ್ ಕಂಪೆನಿಯಾಗಿ ರೂಪುಗೊಳ್ಳುವ ಹಿಂದೆ ಭಾರತೀಯರ ಶ್ರಮವಿದೆ. ಈ ಕಂಪೆನಿಗಳ ಒಂದೊಂದು ಪ್ರೊಡಕ್ಟ್‌ಗಳ ಹಿಂದೆ ಇವರ ಕಠಿಣ ಪರಿಶ್ರಮವಿದೆ. ಹೀಗಾಗಿ ಅಮೆರಿಕದ ಟೆಕ್ ವಲಯದಲ್ಲಿ ಅತ್ಯಂತ ಪ್ರಭಾವ ಬೀರಬಲ್ಲ ಭಾರತೀಯ ವ್ಯಕ್ತಿಗಳ ಕಿರು ಪರಿಚಯ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಯುಗಾದಿ ಹಬ್ಬ- ಟಾಪ್‌ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತಷ್ಟು ಇಳಿಕೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸತ್ಯನಾದೆಳ್ಲ

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಹೈದರಾಬಾದ್‌‌ನವರಾದ ಸತ್ಯ, ಮಣಿಪಾಲ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡಿದ್ದಾರೆ. ಸನ್‌ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಯಾಗಿದ್ದ ಅವರು 1992ರಲ್ಲಿ ಮೈಕ್ರೋಸಾಫ್ಟ್ ಸೇರಿಕೊಂಡಿದ್ದರು. ಮೈಕ್ರೋಸಾಫ್ಟ್‌‌ ಕ್ಲೌಡ್‌ ಮತ್ತು ಎಂಟರ್‌ಪ್ರೈಸ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯ‌ನಿರ್ವ‌ಹಿಸಿದ ಸತ್ಯನಾದೆಳ್ಲ ಪ್ರಸ್ತುತ ಮೈಕ್ರೋಸಾಫ್ಟ್‌‌ನ ಸಿಇಒ ಆಗಿ ನೇಮಕವಾಗಿದ್ದಾರೆ.

 ಗೋಕುಲ್‌ ರಾಜರಾಮ್‌

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಗೂಗಲ್‌ನಲ್ಲಿ AdSense ವಿಭಾಗದಲ್ಲಿ ಪ್ರೊಡಕ್ಟ್‌ ಮ್ಯಾನೇಜರ್‌ ಆಗಿ ಐದು ವರ್ಷ‌ಗಳ ಕಾಲ ಕಾರ್ಯ‌ನಿರ್ವ‌‌ಹಿಸಿದ ಇವರು ಕೆಲಕಾಲ ಫೇಸ್‌‌ಬುಕ್‌ನಲ್ಲಿ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಟ್ವೀಟರ್‌ ಸಂಸ್ಥಾಪಕರಲ್ಲಿ ಒಬ್ಬರಾದ ಜ್ಯಾಕ್ ಡಾರ್ಸೆ ಸ್ಥಾಪಿಸಿದ Square ಕಂಪೆನಿಯಲ್ಲಿ ಪ್ರೊಡಕ್ಟ್‌ ಎಂಜಿನಿಯರ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

 ವಿನೋದ್‌ ಖೋಸ್ಲಾ

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಸನ್‌ ಮೈಕ್ರೋಸಿಸ್ಟಂನ ಸಹ ಸಂಸ್ಥಾಪಕರಾಗಿದ್ದ ವಿನೋದ್‌ ಖೋಸ್ಲಾ 2004 ಖೋಸ್ಲಾ ವೆಂಚರ್ಸ್ ಕಂಪೆನಿಯನ್ನು ಆರಂಭಿಸಿದ್ದಾರೆ. ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಖೋಸ್ಲಾ ಅವರ ಕಂಪನಿಯಲ್ಲಿ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ.ಫೋರ್ಬ್ಸ‌ ಮ್ಯಾಗಜಿನ್‌‌ನ ವಿಶ್ವದ100 ಜನ ಯಶಸ್ವಿ ವೆಂಚರ್ಸ್ಉದ್ಯಮಿಗಳ 2014ರ ಪಟ್ಟಿಯಲ್ಲಿ ವಿನೋದ್‌ ಖೋಸ್ಲಾ 63ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

 ಸುಂದರ್‌ ಪಿಚಾಯ್‌

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಸುಂದರ್ ಪಿಚಾಯ್‌ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್‌ ಎಂಜಿನಿಯರ್. ಮೂಲತಃ ಚೆನ್ನೈರವರಾದ ಸುಂದರ್‌ ಇಲ್ಲಿಯವರಗೆ ಗೂಗಲ್‌ ಕ್ರೋಮ್,ಆಂಡ್ರಾಯ್ಡ್ ಅಪ್ಲಿಕೇಶನ್‌, ಮತ್ತು ಗೂಗಲ್ ಡ್ರೈವ್‌ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‌ಗೆ ಸೇರಿದ ಪಿಚಾಯ್‌, ಖರಗ್‌ಪುರ್ ಐಐಟಿಯಿಂದ ಬಿ.ಟೆಕ್ ಪದವಿ,ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಎಂಎಸ್‌ ಪದವಿಗಳಿಸಿದ್ದಾರೆ. ಪ್ರಸ್ತುತ ಆಂಡ್ರಾಯ್ಡ್‌ ವಿಭಾಗದ ಮುಖ್ಯಸ್ಥರಾಗಿ ಸುಂದರ್‌ ಪಿಚಾಯ್‌ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ

 ನೀರಜ್ ಅರೋರಾ :

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ವಾಟ್ಸ್‌ ಆಪ್‌ ವಿಶ್ವದೆಲ್ಲೆಡೆ ಜನಪ್ರಿಯವಾಗಲು ವಾಟ್ಸ್‌ಆಪ್‌‌ನಲ್ಲಿರುವ ನೀರಜ್ ಅರೋರಾ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ದೆಹಲಿ ಮೂಲದ ನೀರಜ್ ಅರೋರಾ ವಾಟ್ಸ್ ಅ್ಯಪ್ ಸಂಸ್ಥೆಗೆ ಉದ್ಯೋಗಿಯಾಗಿ ಸೇರ್ಪಡೆಯಾಗಿದ್ದು 2011ರ ನವೆಂಬರ್‌ನಲ್ಲಿ.ವಾಟ್ಸ್‌ಆಪ್‌ ಉದ್ಯೋಗಿಯಾಗುವ ಮೊದಲು ಗೂಗಲ್‌ನಲ್ಲಿ ನಾಲ್ಕು ವರ್ಷ‌,ಭಾರತದ ‌ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌‌ನಲ್ಲಿ ಕೆಲಕಾಲದ ನೀರಜ್ ಅರೋರಾ ಉದ್ಯೋಗಿಯಾಗಿದ್ದರು.ದಿಲ್ಲಿ ಐಐಟಿಯ ಪದವೀಧರರಾಗಿರುವ ಅರೋರಾ ವಾಟ್ಸ್‌ಆಪ್‌ ಕಂಪೆನಿಯ ಎಂಜಿನಿಯರಿಂಗ್‌ ವಿಭಾಗದ ಹೊರತಾದ ಬಿಸಿನೆಸ್‌,ಹಣಕಾಸು,ಮಾರುಕಟ್ಟೆ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ.

ವಿಕ್‌ ಗುಂಡತ್ರಾ

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಮುಂಬೈ ಐಐಟಿಯ ಪದವಿಧರ ವಿಕ್‌ ಗುಂಡತ್ರಾ ಗೂಗಲ್‌ ಸೇರುವ ಮೊದಲು ಮೈಕ್ರೋಸಾಫ್ಟ್‌ ಜನರಲ್‌ ಮ್ಯಾನೇಜರ್‌ ಆಗಿ ಕಾರ್ಯ‌ನಿರ್ವ‌ಹಿಸಿದ್ದರು. 2007ರಲ್ಲಿ ಗೂಗಲ್‌ ಸೇರಿಕೊಂಡಿದ್ದ ಗುಂಡತ್ರಾ,ಗೂಗಲ್‌ ಪ್ಲಸ್‌ ಯಶಸ್ಸಿನ ಹಿಂದಿರುವ ವ್ಯಕ್ತಿ.ಸದ್ಯ ಗೂಗಲ್‌ ಪ್ಲಸ್‌‌ ಸೇರಿದಂತೆ ಸೋಶಿಯಲ್‌ ವಿಭಾಗ ಉಪಾಧ್ಯಕ್ಷರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

 ಅರತಿ ರಾಮಮೂರ್ತಿ‌:

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಮೈಕ್ರೋಸಾಫ್ಟ್‌ ವಿಶ್ಯೂವಲ್‌ ಸ್ಟುಡಿಯೋ ಮತ್ತು ಎಕ್ಸ್‌ಬಾಕ್ಸ್‌ ಲೈವ್‌‌ನಲ್ಲಿ ಆರು ವರ್ಷ‌ಗಳ ಕಾಲ ಕಾರ್ಯ‌ನಿರ್ವ‌ಹಿಸಿದ ಆರತಿ ರಾಮಮೂರ್ತಿ ಪ್ರಸ್ತುತ ಫೋಟೋಗ್ರಫಿ ಉತ್ಪನ್ನಗಳ ಮಾರಾಟ ಮಾಡುವ Lumoid ವೆಬ್‌ಸೈಟ್‌ನ್ನು ಸ್ಥಾಪಿಸಿದ್ದಾರೆ.

 ನಿಕಿಶ್‌ ಅರೋರಾ.

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ವಾರಣಾಸಿ ಐಐಟಿಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ 1989ರಲ್ಲಿ ಪದವಿ ಪಡೆದ ಅರೋರಾ ಬೋಸ್ಟನ್ ನಾರ್ಥ್‌ಇಸ್ಟರ್ನ್‌ ವಿವಿಯಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ. 2004ರಲ್ಲಿ ಗೂಗಲ್‌ ಸೇರಿದ ಅರೋರಾ ಗೂಗಲ್‌ ಯುರೋಪ್‌‌,ಮಧ್ಯಪ್ರಾಚ್ಯ,ಆಫ್ರಿಕಾ ದೇಶಗಳ ಗೂಗಲ್‌‌ ಮಾರುಕಟ್ಟೆ ವಿಭಾಗದ ಅಧ್ಯಕ್ಷರಾಗಿ ಕಾರ್ಯ‌ನಿರ್ವ‌ಹಿಸಿದ್ದಾರೆ. ಸದ್ಯಕ್ಕೆ ಗೂಗಲ್‌ನ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಬುಸಿನೆಸ್‌ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

 ಶಂತನು ನಾರಾಯಣ್:

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಅಮೆರಿಕನ್ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪೆನಿ ಅಡೋಬ್‌ ಸಿಇಒ ಬ್ರೂಸ್ ಚಿಜೆನ್ 2007ರಲ್ಲಿ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನಕ್ಕೆ ಆಯ್ಕೆಯಾದ ವ್ಯಕ್ತಿ.ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ 2011ರಲ್ಲಿ ಶಂತನು ನಾರಾಯಣ್‌ರನ್ನುಆಡಳಿತ ಸಲಹಾ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.

ಅಮಿತ್ ಸಿಂಘಾಲ್

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಐಐಟಿ ರೂರ್ಕಿಯಿಂದ ಕಂಪ್ಯೂಟರ್‍ ಸೈನ್ಸ್‌ನಲ್ಲಿ ಪದವಿ ಪಡೆದ ಇವರು ಆರಂಭದಲ್ಲಿ AT&T Labs ಕಂಪೆನಿಯಲ್ಲಿ ಉದ್ಯೋಗಆರಂಭಿಸಿ,ಗೂಗಲ್‌ ಸೇರಿದ್ದು 2000 ಇಸ್ವಿಯಲ್ಲಿ. ಬಳಕೆದಾರರ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ಬರುವಂತೆ ಗೂಗಲ್‌ ಸರ್ಚ್‌ ಹೀಗೆ ಇರಬೇಕು ಎಂದು ಸಚ್‌‌ ಎಂಜಿನ್‌ ಕೋಡ್‌ ಬರೆದು ರೂಪಿಸಿದ್ದುಅಮಿತ್ ಸಿಂಘಾಲ್ ನೇತೃತ್ವದ ತಂಡ. ಗೂಗಲ್‌ನ "ranking algorithm"ನ ಪಂಡಿತ ಎಂದು ನ್ಯೂಯಾರ್ಕ್‌ ಟೈಮ್ಸ್‌ ಅಮಿತ್‌ ಸಿಂಘಾಲ್‌ರನ್ನು ಹೊಗಳಿದೆ.

 ಪದ್ಮಶ್ರೀ ವಾರಿಯರ್‌

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು

ಅಂತರಾಷ್ಟೀಯ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿಯಾದ ಮಹಿಳೆ ಪದ್ಮಶ್ರೀ ವಾರಿಯರ್‌.ಪಾನ್ ಏಶಿಯನ್‌ ಪ್ರಶಸ್ತಿ, ವೈಎಂಸಿಎ ಪ್ರಶಸ್ತಿ ಪಡೆದಿದ್ದಾರೆ. ಅಂತರಾಷ್ಟೀಯ ಮಟ್ಟದಲ್ಲಿ 2007ರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಾಲ್‌ಆಫ್‌ ಫೇಮ್‌ ಲಿಸ್ಟ್‌ಗೆ ಆಯ್ಕೆ. ಐಐಟಿಯಲ್ಲಿ ಕೆಮಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ,ಕಾರ್ನಲ್‌ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್‌ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಮೋಟರೋಲಾ ಕಂಪೆನಿಯಲ್ಲಿ 23 ವರ್ಷ‌ಗಳ ಕಾಲ ಉದ್ಯೋಗದಲ್ಲಿದ್ದಇವರು ಪ್ರಸ್ತುತ ಸಿಸ್ಕೋ ಸಿಸ್ಟಂನ ಮುಖ್ಯ ತಂತ್ರಜ್ಞಾನ ಮತ್ತು ಕಾರ್ಯತಂತ್ರ ಅಧಿಕಾರಿಯಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

 ಶ್ರೀಧರ್‌ ರಾಮಸ್ವಾಮಿ

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಮದ್ರಾಸ್‌ ಐಐಟಿಯಿಂದ ಕಂಪ್ಯೂಟರ್‍ ಸೈನ್ಸ್‌ ವಿಭಾಗದಲ್ಲಿ ಪದವಿ ಪಡೆದಿರುವ ಶ್ರೀಧರ್‌ ರಾಮಸ್ವಾಮಿ, ಗೂಗಲ್‌ ಸೇರಿದ್ದು 2003ರಲ್ಲಿ.ಗೂಗಲ್‌ನ ಆದಾಯದ ಮೂಲ AdWords ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡೇಟಾ ಬೇಸ್‌ ಸಿಸ್ಟಂ ಮತ್ತು ಡೇಟಾಬೇಸ್ ಸಿದ್ಧಾಂತ ಬಗ್ಗೆ ನೂರಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಬರದಿದ್ದಾರೆ.

 ಕೃಷ್ಣಾ ಭರತ್‌

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು

ಮೂಲತ ಬೆಂಗಳೂರಿನವರಾದ ಕೃಷ್ಣಾ ಭರತ್‌ ಐಐಟಿ ಮದ್ರಾಸ್‌ನಲ್ಲಿ ಪದವಿ ಗಳಿಸಿದ ಇವರು ಅಮೆರಿಕದ ಜಾರ್ಜಿಯಾ ಟೆಕ್ ವಿವಿಯಿಂದ ಪಿಎಚ್‌ಡಿ ಪದವಿಗಳಿಸಿದ್ದಾರೆ.
1999ರಲ್ಲಿ ಗೂಗಲ್‌‌ ಸೇರಿದ್ದ ಭರತ್‌ ಅವರಿಗೆ ಗೂಗಲ್‌ ನ್ಯೂಸ್‌ ಉತ್ಪನ್ನವನ್ನು ತಯಾರಿಸಿದ ಕೀರ್ತಿ‌ ಸಲ್ಲುತ್ತದೆ. ತನ್ನನ್ನು ತಾನೇ news guy ಎಂದು ಕರೆಯುತ್ತಿರುವ ಕೃಷ್ಣಾ ಭರತ್‌ ಗೂಗಲ್‌ ನ್ಯೂಸ್‌ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದಾರೆ.

 ಲಲಿತೇಶ್ ಕತ್ರಗಡ್ಡ

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಬಾಂಬೆ ಐಐಟಿ ಹಳೇ ವಿದ್ಯಾರ್ಥಿ‌ಯಾಗಿರುವ ಲಲಿತೇಶ್ ಕತ್ರಗಡ್ಡ ಅವರಿಗೆ ಗೂಗಲ್‌ನ ಮ್ಯಾಪ್‌‌ನ್ನು ಸೃಷ್ಟಿಸಿದ ಕೀರ್ತಿ‌ ಸಲ್ಲುತ್ತದೆ.2002 ರಿಂದ ಗೂಗಲ್‌ನಲ್ಲಿ ಉದ್ಯೋಗಿಯಾಗಿರುವ ಲಲಿತೇಶ್ ಪ್ರಸ್ತತ ಮ್ಯಾಪ್‌ ವಿಭಾಗ ಮತ್ತು ಗೂಗಲ್‌ ಲಿಪ್ಯಂತರಣ(Transliteration) ವಿಭಾಗದಲ್ಲಿ ಕಾರ್ಯ‌ ನಿರ್ವ‌ಹಿಸುತ್ತಿದ್ದಾರೆ.

 ಮನಿಕ್‌ ಗುಪ್ತ

ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು


ಈ ಹಿಂದೆ ಬೆಂಗಳೂರಿನಲ್ಲಿ ಭಾರತದ ಗೂಗಲ್‌ ಮ್ಯಾಪ್‌ ವಿಭಾಗದಲ್ಲಿ ಉದ್ಯೋಗದಲ್ಲಿದ್ದ ಮನಿಕ್‌ ಗುಪ್ತ ಸದ್ಯ ಗೂಗಲ್‌ನ ವಿಶ್ವ ಮ್ಯಾಪ್‌‌ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯ‌‌‌‌‌ನಿರ್ವ‌ಹಿಸುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot