Home
ಸುದ್ದಿಜಾಲ

2020ರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಅಪ್ಲಿಕೇಶನ್‌ಗಳು!

ಇನ್ನೇನು ಕೆಲವೇ ದಿನಗಳಲ್ಲಿ 2020ನೇ ವರ್ಷ ಮುಗಿದು 2021 ನೇ ವರ್ಷ ಶುರುವಾಗಲಿದೆ. ಇನ್ನು 2020ನೇ ವರ್ಷದಲ್ಲಿ ಕೊರೊನಾ ಮಹಾಮಾರಿ ಬಂದು ಇಡೀ ಜಗತ್ತೇ ತತ್ತರಿಸಿ ಹೋಗಿತ್ತು. ಇನ್ನು ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿಯೇ ಕಾಲಕಳೆದ ಮಂದಿಗೆ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಉಪಯೋಗವನ್ನು ನೀಡಿವೆ. ಅದರಲ್ಲೂ ಆಪ್‌ ಆಧಾರಿತ ಸೇವೆಗಳು, ಸೊಶೀಯಲ್‌ ಮೀಡಿಯಾ ಆಪ್‌ಗಳು, ವೀಡಿಯೋ ಕಾನ್ಪರೆನ್ಸಿಂಗ್‌ ಆಪ್‌ಗಳು ಸಾಕಷ್ಟು ಅನುಕೂಲಕರವಾದ ಸೇವೆ ನೀಡಿವೆ.

 ಆಪ್

ಹೌದು, 2020ನೇ ವರ್ಷವು ಕೊರೊನಾ ಕಾರಣದಿಂದ ಹೆಚ್ಚು ಸುದ್ದಿಯಾಗಿದೆ. ಅಷ್ಟೇ ಅಲ್ಲ ಇನ್ನು ಕೆಲವು ವರ್ಷಗಳ ಕಾಲ ಕೊರೊನಾ ಕಾರಣಕ್ಕೆ 2020ನೇ ವರ್ಷ ನೆನಪಾಗಲಿದೆ. ಆದರೂ ಈ ವರ್ಷ ಲಾಕ್‌ಡೌನ್‌ ನಂತಹ ಕಠಿಣ ಸನ್ನಿವೇಶದಲ್ಲಿ ಆಪ್‌ ಆಧಾರಿತ ಸೇವೆಗಳು ಬಳಕೆದಾರರ ಕೈ ಹಿಡಿದಿವೆ. ಜೊತೆಗೆ ಮನೆಯಲ್ಲಿಯೇ ಕೆಲಸ ನಿರ್ವಹಿಸುವವರಿಗೆ ಸಾಕಷ್ಟು ಉಪಯೋಗವನ್ನು ಸಹ ನೀಡಿವೆ. ಹಾಗಾದ್ರೆ 2020 ರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟಿಕ್ ಟಾಕ್

ಟಿಕ್ ಟಾಕ್

ಈ ವರ್ಷ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಅಪ್ಲಿಕೇಶನ್‌ಗಳಲ್ಲಿ ಟಿಕ್‌ಟಾಕ್ ಆಪ್‌ ಕೂಡ ಒಂದಾಗಿದೆ. ಟಿಕ್‌ಟಾಕ್‌ ಚೀನಾದ ಜನಪ್ರಿಯ ಶಾರ್ಟ್‌ ವಿಡಿಯೋ ಅಪ್ಲಿಕೇಶನ್ ಆಗಿದ್ದು, ಬೈಟ್‌ಡ್ಯಾನ್ಸ್ ಒಡೆತನದಲ್ಲಿದೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಈಗ ಈ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿದ್ದರೂ, 2020 ರಲ್ಲಿ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

Instagram

Instagram

ಫೇಸ್‌ಬುಕ್ ಒಡೆತನದ ಜನಪ್ರಿಯ ಫೋಟೋ ಶೇರಿಂಗ್‌ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್ ಕೂಡ ಈ ಭಾರಿಯ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇನ್‌ಸ್ಟಾಗ್ರಾಮ್ ಈಗ ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್ ಮತ್ತು ಟ್ವಿಟರ್‌ಗಳನ್ನು ಸೋಲಿಸಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನು ನಿಮ್ಮ ಬ್ರ್ಯಾಂಡ್ ಅಥವಾ ವ್ಯವಹಾರವನ್ನು ಉತ್ತೇಜಿಸಲು ನಿಮಗೆ ಸಹಾಯ ಮಾಡುವ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ Instagram ಒಂದಾಗಿದೆ. ಅಲ್ಲದೆ, ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ಈ ವರ್ಷ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

ZOOM

ZOOM

ಅತಿ ಹೆಚ್ಚು ಜನ್ರಪಿಯ ಅಪ್ಲಿಕೇಶನ್‌ಗಳಲ್ಲಿ ಜೂಮ್ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಕಳೆದ 6 ತಿಂಗಳುಗಳಲ್ಲಿ ಇದರ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಕೊರೊನಾವೈರಸ್ ಅನ್ನು ತಡೆಗಟ್ಟಲು ಮತ್ತು ಪ್ರಪಂಚದಾದ್ಯಂತ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು, ಮನೆಯಿಂದಲೇ ಕೆಲಸ ನಿರ್ವಹಿಸುವ ಸನ್ನಿವೇಶ ಎದುರಾದ ನಂತರ ಇದರ ಜನಪ್ರಿಯತೆ ಇನ್ನು ಹೆಚ್ಚಿದೆ.

ವಾಟ್ಸಾಪ್

ವಾಟ್ಸಾಪ್

ವಾಟ್ಸಾಪ್ 2020 ರ ಅತ್ಯಂತ ಜನಪ್ರಿಯ ಜಾಗತಿಕ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ 2 ಬಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಹಲವರು ಸಕ್ರಿಯ ಬಳಕೆದಾರರಲ್ಲದಿದ್ದರೂ, ಎಲ್ಲರಿಗೂ ವಾಟ್ಸಾಪ್ ಪರಿಚಯವಿದೆ. ಅಲ್ಲದೆ ವಾಟ್ಸಾಪ್‌ ಈ ವರ್ಷ ಕೂಡ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್

ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಆಧಾರಿತ ಟಾಪ್ (ಒಟಿಟಿ) ವಿಷಯ ವೇದಿಕೆಯಾಗಿದೆ. ಇದರಲ್ಲಿ ನೀವು ಚಲನಚಿತ್ರಗಳು, ಸರಣಿಗಳು ಮತ್ತು ಹೆಚ್ಚಿನದನ್ನು ವೀಕ್ಷಿಸಬಹುದು. ಇನ್ನು ಏಪ್ರಿಲ್ 2020 ರ ಹೊತ್ತಿಗೆ, ನೆಟ್ಫ್ಲಿಕ್ಸ್ ವಿಶ್ವಾದ್ಯಂತ 183 ಮಿಲಿಯನ್ ಪಾವತಿಸಿದ ಬಳಕೆದಾರರನ್ನು ಹೊಂದಿತ್ತು ಎನ್ನಲಾಗಿದೆ.

ಫೇಸ್‌ಬುಕ್‌

ಫೇಸ್‌ಬುಕ್‌

ಸೊಶೀಯಲ್‌ ಮೀಡಿಯಾ ದೈತ್ಯ ಎನಿಸಿಕೊಂಡಿರುವ ಫೇಸ್‌ಬುಕ್‌ ಈ ಭಾರಿ ಜನಪ್ರಿಯ ಅಪ್ಲಿಕೇಶನ್‌ ಗಳಲ್ಲಿ ಒಂದಾಗಿದೆ. ಇನ್ನು ಕೊರೊನಾ ನಂತರ ಆನ್‌ಲೈನ್ ಆಧಾರಿತ ಬ್ಯುಸಿನೆಶ್‌ ಕೂಡ ಫೇಸ್‌ಬುಕ್‌ನಲ್ಲಿ ಮಾಡಬಹುದಾಗಿದ್ದು, ಈಗ ನಿಮ್ಮ ಉತ್ಪನ್ನಗಳನ್ನು ನೇರವಾಗಿ ಫೇಸ್‌ಬುಕ್ ಲೈವ್ ಮೂಲಕ ಮಾರಾಟ ಮಾಡಬಹುದು.

ಅಮೆಜಾನ್

ಅಮೆಜಾನ್

ಅಮೆಜಾನ್ 2020 ರಲ್ಲಿ ಹೆಚ್ಚು ಬಳಸಿದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ, ಜೊತೆಗೆ ವಿವಿಧ ಸೇವೆಗಳನ್ನು ನೀಡುತ್ತದೆ ಮತ್ತು ಇದು ಬಳಕೆದಾರರಿಗೆ ತನ್ನ 'ಅಮೆಜಾನ್ ಸೆಲ್ಲರ್' ಮೂಲಕ ತಮ್ಮ ವ್ಯವಹಾರವನ್ನು ಬೆಳೆಸಿಕೊಳ್ಳಲು ಸಹ ನೀಡುತ್ತದೆ. ಇನ್ನು ನೆಟ್‌ಫ್ಲಿಕ್ಸ್‌ಗೆ ಪರ್ಯಾಯವಾಗಿರುವ ಅಮೆಜಾನ್ ಪ್ರೈಮ್ ವಿಡಿಯೋ ವಿಶ್ವದಾದ್ಯಂತ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದೆ.

Best Mobiles in India

English summary
here we are enlisting the most popular apps in 2020 and we are relatively familiar with most of these applications.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+