2020 ರಲ್ಲಿ ಭಾರತ ಬ್ಯಾನ್ ಮಾಡಿದ ಚೀನಾದ ಪ್ರಮುಖ ಆಪ್ ಗಳು!

|

2020 ಅನ್ನು ನೆನಪು ಮಾಡಿಕೊಂಡರೆ ಮೊದಲು ನೆನಾಪಾಗೋದೆ ಕೊರೊನಾ ವೈರಸ್‌ನ ಹಾವಳಿ. ಆದರೆ ಭಾರತದಲ್ಲಿ ಕೊರೊನಾ ಜೊತೆಗೆ ಇನ್ನು ಹೆಚ್ಚು ಸದ್ದು ಮಾಡಿದ್ದು ಚೀನಾದ ಪ್ರಮುಖ ಆಪ್‌ಗಳನ್ನು ಬ್ಯಾನ್‌ ಮಾಡಿದ ವಿಚಾರ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಭಾರತದ ಲಡಾಖ್‌ ಗಡಿಯಲ್ಲಿ ಚೀನಾ ತಗಾದೆ ನಂತರ ಚೀನಾದ ವಸ್ತುಗಳನ್ನ ಬಾಯ್ಕಾಟ್‌ ಮಾಡಿ ಅಭಿಯಾನ ದೇಶದಲ್ಲಿ ಜೋರಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಭಾರತ ಸರ್ಕಾರವು ಮೊದಲು 59 ಚೀನೀ ಆಪ್‌ಗಳನ್ನ ನಂತರ ಹಂತಹಂತವಾಗಿ ಹಲವು ಆಪ್‌ಗಳನ್ನ ಬ್ಯಾನ್‌ ಮಾಡಿದ ಸರ್ಕಾರ ಇಲ್ಲಿಯವರೆಗೆ ಚೀನಾದ 267 ಆಪ್‌ಗಳನ್ನ ನಿಷೇದಿಸಿದೆ.

ಸರ್ಕಾರ

ಹೌದು, ಭಾರತ ಸರ್ಕಾರ ದೇಶದ ಸಾರ್ವಭೌಮತೆ, ಭದ್ರತೆಗೆ ದಕ್ಕೆ ಹೆಸರಿನಲ್ಲಿ ಚೀನಾದ ಆಪ್‌ಗಳನ್ನ ಬ್ಯಾನ್‌ ಮಾಡಿದೆ. ತನ್ನ ಆಪ್‌ಗಳ ಮೂಲಕ ಭಾರತದಲ್ಲಿ ಇರುವ ಸರ್ವರ್‌ಗಳಲ್ಲಿ ತಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ ಎಂದು ಆರೋಪಿಸಲಾಗಿದೆ. ಇನ್ನು ಈ ವರ್ಷ ಬ್ಯಾನ್‌ ಮಾಡಲಾದ ಆಪ್‌ಗಳಲ್ಲಿ ಹಲವು ಆಪ್‌ಗಳು ಭಾರತದಲ್ಲಿ ಅತಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದವು, ಅದರಲ್ಲಿ ಟಿಕ್‌ಟಾಕ್‌ ಕೂಡ ಒಂದಾಗಿದೆ. ಇನ್ನು ಈ ವರ್ಷ ಬ್ಯಾನ್‌ ಆದ ಚೀನಾದ ಆಪ್‌ಗಳಲ್ಲಿ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟಿಕ್ ಟಾಕ್

ಟಿಕ್ ಟಾಕ್

ಶಾರ್ಟ್‌-ವಿಡಿಯೋ ಸ್ಟ್ರೀಮಿಂಗ್‌ ಆಪ್‌ ಟಿಕ್‌ಟಾಕ್‌ ಭಾರತದಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಚೀನಾದ ಆಪ್‌ ಆಗಿತ್ತು. 15 ಸೆಕೆಂಡುಗಳ ವೀಡಿಯೊಗಳನ್ನು ಕ್ರಿಯೆಟ್‌ ಮಾಡುವ ಮತ್ತು ಹಲವು ಟಿಕ್‌ಟಾಕ್‌ ಸ್ಟಾರ್‌ಗಳ ಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ ಟಿಕ್‌ಟಾಕ್‌ ತನ್ನ ಪ್ಲಾಟ್‌ಫಾರ್ಮ್‌ ದೇಶದ ಭದ್ರತೆಗೆ ದಕ್ಕೆ ಎಂದು ನಿಷೇದಿಸಲಾಗಿದೆ. ಇನ್ನು ಈ ಅಪ್ಲಿಕೇಶನ್‌ ಅನ್ನು ನೀಷೇದಿಸಿದ ನಂತರ ಇದಕ್ಕೆ ಪರ್ಯಾಯವಾಗಿ ಜೋಶ್, MX ಟಕಾಟಕ್ ಮತ್ತು ಚಿಂಗರಿಯಂತಹ ಅನೇಕ ರೀತಿಯ ಅಪ್ಲಿಕೇಶನ್‌ಗಳು ಬಿಡುಗಡೆ ಆಗಿವೆ. ಆದರೂ ಟಿಕ್‌ಟಾಕ್‌ಗಿದ್ದ ಜನಪ್ರಿಯತೆಯನ್ನು ಪಡೆಯುವಲ್ಲಿ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ.

PUBG ಮೊಬೈಲ್

PUBG ಮೊಬೈಲ್

ಇನ್ನು ಭಾರತೀಯರನ್ನು ಹೆಚ್ಚು ಆಕರ್ಷಿಸಿದ್ದ ಅಪ್ಲಿಕೇಶನ್ ಈ ಬ್ಯಾಟಲ್ ರಾಯಲ್ ಗೇಮ್‌ ಆಗಿದೆ. ಪಬ್‌ಜೀ ಮೊಬೈಲ್‌ ಗೇಮ್‌ ಅನ್ನು ಭಾರತದಲ್ಲಿ ನಿಷೇದ ಮಾಡಿದ್ದು, ಹಲವು ಗೇಮ್‌ಪ್ರಿಯರಿಗೆ ಶಾಕ್‌ ನೀಡಿತ್ತು. ಆದರೆ ಟೆನ್ಸೆಂಟ್ ಗೇಮ್ಸ್ ಅಂದಿನಿಂದಲೂ ಭಾರತೀಯ ಮಾರುಕಟ್ಟೆಯನ್ನು ಮತ್ತೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ. ಸದ್ಯ ಈ ಕಂಪನಿಯು ಚೀನಾದ ಕಂಪೆನಿಗಳೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಬಿಟ್ಟಿದೆ ಮತ್ತು ಪುನರಾಗಮನಕ್ಕಾಗಿ ಭಾರತೀಯ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತದೆ.

ಶೇರ್‌ ಇಟ್‌

ಶೇರ್‌ ಇಟ್‌

ಶೇರ್‌ಇಟ್ ಗೋ-ಟು ಫೈಲ್ ವರ್ಗಾವಣೆ ಅಪ್ಲಿಕೇಶನ್ ಆಗಿದ್ದು, ಇದು ಐಒಎಸ್ ಮತ್ತು ಆಂಡ್ರಾಯ್ಡ್‌ನಂತಹ ವಿಭಿನ್ನ ಆಪರೇಟಿಂಗ್ ಸಿಸ್ಟಮ್‌ಗಳ ನಡುವೆ ಫೈಲ್ ವರ್ಗಾವಣೆಯನ್ನು ಇದು ತುಂಬಾ ಸರಳಗೊಳಿಸಿತ್ತು. ಆದರೆ ಈ ಅಪ್ಲಿಕೇಶನ್‌ ಕೂಡ ಬ್ಯಾನ್‌ ಆಗಿದ್ದು, ಇದಕ್ಕೆ ಪರ್ಯಾಯ ಅಪ್ಲಿಕೇಶನ್‌ಗಳತ್ತ ಭಾರತೀಯರು ಈಗಾಲೇ ಮುಖಮಾಡಿದ್ದು, ಈ ಅಪ್ಲಿಕೇಶನ್‌ ಪುನರಾಗಮನ ಮಾಡುವುದು ಸುಲಭವಲ್ಲ.

ಕ್ಯಾಮ್ ಸ್ಕ್ಯಾನರ್

ಕ್ಯಾಮ್ ಸ್ಕ್ಯಾನರ್

ಸಂಯೋಜಿತ ಒಸಿಆರ್ ತಂತ್ರಜ್ಞಾನದೊಂದಿಗೆ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಲು ಈ ಅಪ್ಲಿಕೇಶನ್‌ ಉತ್ತಮ ಆಪ್‌ ಆಗಿತ್ತು. ಆದರೆ ಈ ಅಪ್ಲಿಕೇಶನ್‌ ವೈಯುಕ್ತಿಕ ಮಾಹಿತಿಗಳನ್ನು ಸೊರಿಕೆ ಮಾಡುತ್ತಿದೆ ಎಂಬ ಅಪಾದನೆ ಕೂಡ ಇತ್ತು. ಸದ್ಯ ಭಾರತ ಸರ್ಕಾರ ಈ ಅಪ್‌ ಅನ್ನು ಕೂಡ ನೀಷೆಧಿಸಿದೆ. ಇನ್ನು ಇದಕ್ಕೆ ಪರ್ಯಾಯವಾಗಿ ಅಡೋಬ್ ಸ್ಕ್ಯಾನ್, ಮೈಕ್ರೋಸಾಫ್ಟ್ ಆಫೀಸ್ ಲೆನ್ಸ್ ಮತ್ತು ಗೂಗಲ್ ಡ್ರೈವ್ ಸೇರಿದಂತೆ ಕೆಲವು ಉತ್ತಮ ಅಪ್ಲಿಕೇಶನ್‌ಗಳು ಲಭ್ಯವಿವೆ.

ಯುಸಿ ಬ್ರೌಸರ್

ಯುಸಿ ಬ್ರೌಸರ್

50 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿರುವ ಜನಪ್ರಿಯ ಬ್ರೌಸರ್‌ಗಳಲ್ಲಿ ಯುಸಿ ಬ್ರೌಸರ್‌ ಕೂಡ ಒಂದಾಗಿತ್ತು. ಆದರೆ ಭಾರತ ಸರ್ಕಾರ ಈ ಆಪ್‌ ಅನ್ನು ಕೂಡ ನೀಷೇದ ಮಾಡಿದೆ. ಭಾರತದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಬ್ರೌಸರ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು ಮತ್ತು ಸರಳ ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ನೀಡಿತು. ಸದ್ಯ ಇದಕ್ಕೆ ಪರ್ಯಾಯವಾಗಿ ಭಾರತ್ ಬ್ರೌಸರ್, ಜಿಯೋ ಬ್ರೌಸರ್ ಮತ್ತು ಓಮಿಗೊದಂತಹ ಬ್ರೌಸರ್‌ಗಳು ಲಭ್ಯವಿವೆ.

Best Mobiles in India

English summary
most popular apps with a huge Indian userbase that got banned this year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X