ಇಂಟರ್ನೆಟ್‌ನಲ್ಲಿ ಗದ್ದಲವೆಬ್ಬಿಸಿದ ಟಾಪ್ ಕ್ರಿಯಾತ್ಮಕ ಅನ್ವೇಷಣೆಗಳು
ವಿಶ್ವದಲ್ಲಿ ನಿಯಮಿತವಾಗಿ ಹಲವಾರು ಅನ್ವೇಷಣೆಗಳು ನಡೆಯುತ್ತಲೇ ಇರುತ್ತದೆ. ಇದು ನಿಮಗೆ ಪ್ರಯೋಜನಕಾರಿಯಾಗಿರುವುದರಿಂದಲೇ ಇಂತಹ ಅನ್ವೇಷಣೆಗಳು ಜನಸಾಮಾನ್ಯರ ಜೀವನದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತಿದೆ. ಇಂದಿನ ಲೇಖನದಲ್ಲಿ ವಿಶ್ವದಲ್ಲೇ ನಡೆದ ಟೆಕ್ ಅನ್ವೇಷಣೆಗಳ ಪಟ್ಟಿಯನ್ನು ನಾವು ನಿಮಗೆ ನೀಡುತ್ತಿದ್ದು ಇದು ನಿಮ್ಮ ಬಾಯಿಯಲ್ಲಿ ವಾಹ್ ಎಂಬ ಉದ್ಗಾರವನ್ನು ಮೂಡಿಸುವುದು ಖಂಡಿತ.
ಬನ್ನಿ ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಇಂತಹ ಅಭೂತಪೂರ್ವ ಅನ್ವೇಷಣೆಗಳ ವಿವರಗಳನ್ನು ಅರಿತುಕೊಳ್ಳೋಣ.

#1
ಕೆನ್ ಕವಾಮೊಟೊ ಸಾಫ್ಟ್‌ವೇರ್ ಇಂಜಿನಿಯರ್ ಟೆಂಪ್ ಸ್ಕೋಪ್ ಅನ್ನು ಆವಿಷ್ಕರಿಸಿದ್ದಾರೆ. ನಾಳೆಯ ಹವಾಮಾನವನ್ನು ಈ ಡಿವೈಸ್ ತೋರಿಸುತ್ತದೆ.

#2
ಜಪಾನ್‌ನ ವಿನ್ಯಾಸ ತಂಡವೊಂದು ಡಿ ಬ್ರೊಸ್ ಟೀ ಕಪ್‌ಗಳ ಸೆಟ್‌ನೊಂದಿಗೆ ಬಂದಿದ್ದು ತಮ್ಮ ಸಾಸರ್‌ಗಳ ವಿನ್ಯಾಸವನ್ನು ಈ ಕಪ್‌ಗಳು ಪ್ರದರ್ಶಿಸುತ್ತವೆ.

#3
ಮಕ್ಕಳಿಗೆ ತಂದೆಯ ಹೆಗಲ ಮೇಲೆ ಕುಳಿತುಕೊಳ್ಳಲು ಅನುಕೂಲಕರವಾಗಿದೆ ಈ ಸ್ಯಾಡಲ್. ಇದರಿಂದ ತಂದೆಯು ಕೈ ಬಿಟ್ಟೇ ಮಗು ಬೀಳುತ್ತದೆ ಎಂಬ ಭಯವಿಲ್ಲದೆ ನಡೆದಾಡಬಹುದಾಗಿದೆ.

#4
ಟಾನ್ಯಾ ಹೀತ್ ಈ ಹೀಲ್ಸ್‌ಗಳನ್ನು ಅಭಿವೃದ್ಧಿಪಡಿಸಿದ್ದು ನಿಮಗೆ ಬೇಡವೆಂದಾದಾಗ ಈ ಶೂಗಳ ಹೀಲ್ಸ್ ಅನ್ನು ಬಿಚ್ಚಿಡಬಹುದಾಗಿದೆ.

#5
ಲಂಡನ್ ಮೂಲದ ವಿನ್ಯಾಸಕಾರ ಸಿಮಿನ್ ಕ್ಯೂ ಈ ಟ್ಯಾಪ್ ಅನ್ನು ಅನ್ವೇಷಿಸಿದ್ದು 15% ದಷ್ಟು ನೀರನ್ನು ಈ ಟ್ಯಾಪ್ ಉಳಿಸುತ್ತದೆ.

#6
ವಿನ್ಯಾಸಕಾರರಾದ ಕೊಲಿನ್ ಜೋರ್ಡನ್ ಹೂಗಳಿಂದ ಆವೃತವಾಗಿರುವ ಪೆಂಡೆಂಟ್ ಅನ್ನು ತಯಾರಿಸಿದ್ದಾರೆ.

#7
ರಷ್ಯಾದ ವಿನ್ಯಾಸಕಾರರಾದ ಅಲೆಕ್ಸಾಂಡರ್ ಜುಕೊವಿಸ್ಕಿ ಈ ಟಬ್ ಅನ್ನು ರೂಪಿಸಿದ್ದಾರೆ.

#8
ಈ ಏಣಿಯನ್ನು ಬಳಸಿ ಯಾವುದೇ ಮರವನ್ನು ಹತ್ತಬಹುದಾಗಿದೆ.

#9
ನಿಜಕ್ಕೂ ಅದ್ಭುತವಾಗಿರುವ ರಚನೆ ಇದಾಗಿದೆ.

#10
ನೀವು ಇದುವರೆಗೆ ನೋಡೇ ಇಲ್ಲದ ಗಡಿಯಾರಗಳು ಇಲ್ಲಿವೆ.


Click it and Unblock the Notifications








