ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಹೆಚ್ಚಿಸುವುದಕ್ಕೆ ಇಲ್ಲಿವೆ ಸುಲಭ ಮಾರ್ಗಗಳು!
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅತ್ಯಗತ್ಯ ಡಿವೈಸ್‌ಗಳಲ್ಲಿ ಒಂದೆನಿಸಿಕೊಂಡಿದೆ. ಸ್ಮಾರ್ಟ್‌ಫೋನ್ ಮೂಲಕ ಹಲವು ಕೆಲಸಗಳು ಸುಲಭವಾಗಿವೆ, ಇದೇ ಕಾರಣಕ್ಕೆ ಮೊಬೈಲ್ ಇಲ್ಲದೆ ಮನೆಯಿಂದ ಹೊರಬರುವುದು ಕೂಡ ಕಷ್ಟ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾಗದಂತೆ ನೋಡಿಕೊಳ್ಳುತ್ತಾರೆ.
ಹೌದು, ಸ್ಮಾರ್ಟ್‌ಫೋನ್ ಬಳಸುವವರಿಗೆ ಅವುಗಳ ಬ್ಯಾಟರಿ ಬ್ಯಾಕಪ್ ಬಗ್ಗೆ ಚಿಂತೆ ಇದ್ದೆ ಇರುತ್ತದೆ. ಪ್ರಾರಂಭದಲ್ಲಿ ಹೆಚ್ಚು ಬ್ಯಾಟರಿ ಬ್ಯಾಕಪ್ ನೀಡುತ್ತಿದ್ದ ಸ್ಮಾರ್ಟ್‌ಫೋನ್‌ಗಳು ದಿನಕಳೆದಂತೆ ಬ್ಯಾಟರಿ ಬ್ಯಾಕಪ್‌ನಲ್ಲಿ ಕುಸಿತ ಅನುಭವಿಸುತ್ತವೆ. ಇದಕ್ಕಿದಂತೆ ಬ್ಯಾಟರಿ ಬಾಳಿಕೆ ಬಹುಬೇಗ ಖಾಲಿಯಾಗುವುದು ಬಳಕೆದಾರರಿಗೆ ಸ್ವಲ್ಪ ಕಿರಿಕಿರಿ ಎನಿಸಿಬಿಡುತ್ತದೆ. ಆದರೆ ಸ್ಮಾರ್ಟ್‌ಫೋನ್ ಬಳಕೆದಾರರು ಕೆಲವು ಅಂಶಗಳನ್ನು ಅನುಸರಿಸಿದರೆ ಅವರ ಮೊಬೈಲ್ ಬ್ಯಾಟರಿ ಬ್ಯಾಕಪ್ ಕಡಿಮೆಯಾಗದಂತೆ ಮಾಡಬಹುದು. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳಣ ಬನ್ನಿರಿ.

ಆಟೋ ಬ್ರೈಟ್‌ನೆಸ್ ಸೆಟ್ ಮಾಡಿ
ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಹೆಚ್ಚಿನ ಅವಧಿ ಇರಬೇಕೆಂದರೆ ಮೊದಲು ಮಾಡಬೇಕಾದ ಕೆಲಸ ಇದಾಗಿದೆ. ನಿಮ್ಮ ಡಿವೈಸ್‌ನಲ್ಲಿ ಬ್ರೈಟ್‌ನೆಸ್ ಕಡಿಮೆ ಮಾಡುವುದು ಇಲ್ಲವೇ ಆಟೋ ಬ್ರೈಟ್‌ನೆಸ್ ಸೆಟ್ ಮಾಡುವುದು ಉತ್ತಮ. ಹೆಚ್ಚಿನ ಬ್ರೈಟ್‌ನೆಸ್ ಇರುವಷ್ಟು ಸಮಯ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತಾ ಹೋಗುತ್ತದೆ.
ಬ್ಯಾಟರಿ ಫುಲ್ ಡೆಡ್ ಆಗುವ ತನಕ ಇರಬೇಡಿ
ನಿಮ್ಮ ಸ್ಮಾರ್ಟ್‌ಫೋನ್‌ಗೆ ಜೀವ ಒದಗಿಸುವ ಬ್ಯಾಟರಿ ಕೂಡ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಆದರಿಂದ ನಿಮ್ಮ ಸ್ಮಾರ್ಟ್‌ಫೋನಿನ ಬ್ಯಾಟರಿ ಕಡಿಮೆ ಇರುವಾಗ ಅದರ ಬಳಕೆಯನ್ನು ಸಹ ಕಡಿಮೆ ಮಾಡಿರಿ. ಬದಲಿಗೆ ನೀವು ಫೋನ್‌ನ ಬ್ಯಾಟರಿ ಸಂಪೂರ್ಣ ಖಾಲಿ ಆಗುವವರೆಗೂ ಬಳಕೆ ಮಾಡುವುದಕ್ಕೆ ಹೋಗಬೇಡಿ. ಇದರಿಂದ ಬ್ಯಾಟರಿ ಲೈಫ್ ಹಾಳಾಗುವ ಸಾಧ್ಯತೆ ಇರಲಿದೆ. ಅದರಲ್ಲೂ ಮೊಬೈಲ್‌ನ ಬ್ಯಾಟರಿ 20% ಗಿಂತ ಕಡಿಮೆ ಇದ್ದಾಗ ಫೋನ್ ಚಾರ್ಜ್ ಮಾಡುವುದು ಲೇಸು.

ಬ್ಯಾಕ್‌ಗ್ರೌಂಡ್ ಆಪ್ಸ್ ಆಫ್ ಮಾಡಿ
ಸ್ಮಾರ್ಟ್‌ಫೋನ್ ಸ್ಕ್ರೀನ್ ಆಫ್ ಇರುವಾಗಲೂ ಸಹ ಬ್ಯಾಕ್‌ಗ್ರೌಂಡ್‌ನಲ್ಲಿ ಹಲವು ಆ್ಯಪ್‌ಗಳು ರನ್ ಆಗುತ್ತಿರುತ್ತವೆ. ಈ ರೀತಿಯ ಬ್ಯಾಕ್‌ಗ್ರೌಂಡ್ ಆ್ಯಪ್‌ಗಳಿಂದ ಬ್ಯಾಟರಿ ಬಾಳಿಕೆಯ ದಕ್ಷತೆ ಕಡಿಮೆ ಆಗುತ್ತಾ ಬರಲಿದೆ. ಆದರಿಂದ ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುವ ಆ್ಯಪ್‌ಗಳನ್ನು ಆಫ್ ಮಾಡಿರಿ. ಅಗತ್ಯವಿಲ್ಲದಿದ್ದರೆ ಅಂತಹ ಆ್ಯಪ್‌ಗಳನ್ನು ಡಿಲೀಟ್ ಮಾಡುವುದು ಕೂಡ ಉತ್ತಮವಾಗಿದೆ.
ಡಾರ್ಕ್ ಮೋಡ್ ಅನ್ನು ಬಳಸಿರಿ
ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ಸಂರಕ್ಷಿಸಲು ಸಹಾಯ ಮಾಡಲು ಅನೇಕ ಅಪ್ಲಿಕೇಶನ್‌ಗಳು ಹೊಸದಾಗಿ ಡಾರ್ಕ್ ಮೋಡ್ ಅನ್ನು ಹೊರತಂದಿವೆ. ನಿಮ್ಮ ಡಿವೈಸ್‌ನಲ್ಲಿ ಡಾರ್ಕ್ ಥೀಮ್ ಅನ್ನು ಅನ್ವಯಿಸುವುದರಿಂದ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಇತ್ಯಾದಿಗಳಂತಹ ವೈಶಿಷ್ಟ್ಯಗಳು ಲಭ್ಯವಿರುವ ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡಿ.

ಮೊಬೈಲ್ ಚಾರ್ಜ್ ಮಾಡುವಾಗ ಈ ನಿಯಮ ಅನುಸರಿಸಿ
ಸಾಮಾನ್ಯವಾಗಿ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರೆಲ್ಲರೂ 100% ಪರ್ಸೆಂಟ್ ಆಗುವವರೆಗೂ ಚಾರ್ಜ್ ತೆಗೆಯುವುದೇ ಇಲ್ಲ. ಆದರೆ ಬ್ಯಾಟಿ ದಕ್ಷತೆಯ ದೃಷ್ಟಿಯಿಂದ ಇದು ಸೂಕ್ತವಲ್ಲ. ನಿಮ್ಮ ಮೊಬೈಲ್ ಅನ್ನು 100% ಚಾರ್ಜ್ ಮಾಡಲೇಬಾರದು, ಬದಲಿಗೆ 90% ಪರ್ಸೆಂಟ್ ದಾಟಿದ್ದರೇ ಸಾಕು ಮೊಬೈಲ್ ಚಾರ್ಜ್ ಮಾಡುವುದನ್ನು ಸ್ಟಾಪ್ ಮಾಡಿರಿ.
ರಿಫ್ರೆಶ್ ರೇಟ್ ಅನ್ನು 60Hz ಗೆ ಕಡಿಮೆ ಮಾಡಿ
ಇಂದಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ರಿಫ್ರೆಶ್ ರೇಟ್ ಡಿಸ್‌ಪ್ಲೇಯೊಂದಿಗೆ ಬರುತ್ತವೆ. ಇವುಗಳು 165Hz ರಿಫ್ರೆಶ್ ರೇಟ್ ವರೆಗೆ ಹೋಗಬಹುದು. ಆದರೆ, ಫೋನ್‌ಗಳು ರಿಫ್ರೆಶ್ ದರವನ್ನು 60Hz ಗೆ ಸೀಮಿತಗೊಳಿಸುವ ಆಯ್ಕೆಯನ್ನು ಹೊಂದಿವೆ. ಅಲ್ಲದೆ, ಕೆಲವು ಫೋನ್‌ಗಳು LTPO ತಂತ್ರಜ್ಞಾನದೊಂದಿಗೆ ಬರುತ್ತವೆ. ಆದ್ದರಿಂದ, ಲಭ್ಯವಿರುವ ಆಯ್ಕೆಯನ್ನು ಆಧರಿಸಿ, ಬ್ಯಾಟರಿ ಬ್ಯಾಕ್‌ಅಪ್ ಹೆಚ್ಚಿಸಲು ನಿಮ್ಮ ಫೋನ್‌ನ ಡಿಸ್‌ಪ್ಲೇಯ ರಿಫ್ರೆಶ್ ರೇಟ್ ಅನ್ನು 60Hzಗೆ ಕಡಿಮೆ ಮಾಡಿಕೊಳ್ಳುವುದು ಸೂಕ್ತವಾಗಿದೆ.

ಪವರ್ ಸೇವ್ ಮೋಡ್ ಸಕ್ರಿಯಗೊಳಿಸಿ
ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪವರ್-ಸೇವ್ ಮೋಡ್‌ಗಳನ್ನು ಬಳಸುವುದು ಬ್ಯಾಟರಿ ಬಾಳಿಕೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.


Click it and Unblock the Notifications








