ಮೊಟೊ ಡೇಸ್ ಸೇಲ್‌: ಈ ಮೊಬೈಲ್‌ಗಳಿಗೆ ಈಗ ಆಕರ್ಷಕ ರಿಯಾಯಿತಿ!

|

ಮೊಟೊರೊಲಾ ಮೊಬೈಲ್‌ ಸಂಸ್ಥೆಯು ಇದೀಗ ಗ್ರಾಹಕರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಅದೆನೆಂದರೆ, ಮೊಟೊರೊಲಾ ಸಂಸ್ತೆಯು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ನೊಂದಿಗಿನ ವಿಶೇಷ ಸಹಯೋಗದೊಂದಿಗೆ 'ಮೊಟೊ ಡೇಸ್ ಸೇಲ್‌' ಅನ್ನು ಪ್ರಾರಂಭಿಸಿದೆ. ಈ ವಿಶೇ‍ಷ ಸೇಲ್‌ ನಲ್ಲಿ ಗ್ರಾಹಕರು ತಮ್ಮ ಆಯ್ದ ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳನ್ನು ಭಾರೀ ಡಿಸ್ಕೌಂಟ್‌ ನೊಂದಿಗೆ ಪಡೆಯಬಹುದಾಗಿದೆ.

ಮೊಟೊ ಡೇಸ್ ಸೇಲ್‌: ಈ ಮೊಬೈಲ್‌ಗಳಿಗೆ ಈಗ ಆಕರ್ಷಕ ರಿಯಾಯಿತಿ!

ಹೌದು, ಮೊಟೊರೊಲಾ ಇದೀಗ ಫ್ಲಿಫ್‌ಕಾರ್ಟ್‌ ತಾಣದಲ್ಲಿ ಮೊಟೊ ಡೇಸ್ ಮಾರಾಟ ಮೇಳ ಆಯೋಜಿಸಿದೆ. ಈ ಸೇಲ್‌ನಲ್ಲಿ ಮೊಟೊ ಕಂಪನಿಯ ಆಯ್ದ ಮೊಬೈಲ್‌ಗಳಿಗೆ ಆಕರ್ಷಕ ಕೊಡುಗೆ ಲಭ್ಯ ಇವೆ. ಮುಖ್ಯವಾಗಿ ಮೊಟೊ G, ಮೊಟೊ E ಮತ್ತು ಮೊಟೊ Edge ಸರಣಿ ಫೋನ್‌ಗಳು ಹೆಚ್ಚಿನ ರಿಯಾಯಿತಿ ಬೆಲೆಯಲ್ಲಿ ಲಭ್ಯ ಆಗಲಿವೆ. ಅಂದಹಾಗೇ ಮೊಟೊ ಡೇಸ್ ಸೇಲ್‌ (ಇಂದಿನಿಂದ) ಮೇ 14 ರಿಂದ, ಮೇ 18ರ ವರೆಗೂ ಚಾಲ್ತಿ ಇರಲಿದೆ. ಇನ್ನು ಅತ್ಯುತ್ತಮ ಕೊಡುಗೆ ಪಡೆದ ಆಯ್ದ ಕೆಲವು ಮೊಟೊ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊ G60 ಸ್ಮಾರ್ಟ್‌ಫೋನ್‌
ಮೊಟೊ G60 ಸ್ಮಾರ್ಟ್‌ಫೋನ್‌ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20.5:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732 G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಸೇಲ್‌ನಲ್ಲಿ ಈ ಫೋನ್ 14,999 ರೂ. ಗಳಿಗೆ ಲಭ್ಯ ಆಗಲಿದೆ.

ಮೊಟೊ ಡೇಸ್ ಸೇಲ್‌: ಈ ಮೊಬೈಲ್‌ಗಳಿಗೆ ಈಗ ಆಕರ್ಷಕ ರಿಯಾಯಿತಿ!

ಮೊಟೊ G31 ಸ್ಮಾರ್ಟ್‌ಫೋನ್‌
ಮೊಟೊ G31 ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಫೋರ್ಟ್‌ ಪಡೆದಿದ್ದು, 6.4 ಇಂಚಿನ ಪೂರ್ಣ ಹೆಚ್‌ಡಿ OLED ಡಿಸ್‌ಪ್ಲೇ ಪಡೆದಿದೆ. ಇನ್ನು ಇದು ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್‌ ವೇಗವನ್ನು ಹೊಂದಿದೆ. ಅಲ್ಲದೆ ಆಂಡ್ರಾಯ್ಡ್‌ 11 ಓಎಸ್‌ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ನಲ್ಲಿದೆ. ಹಾಗೆಯೇ ಮೊಟೊ G31 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಸೇಲ್‌ನಲ್ಲಿ ಈ ಫೋನ್ 10,999 ರೂ. ಗಳಿಗೆ ಲಭ್ಯ ಆಗಲಿದೆ.

ಮೊಟೊರೊಲಾ ಎಡ್ಜ್ 20 ಫ್ಯೂಷನ್
ಮೊಟೊರೊಲಾ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ+ ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಮತ್ತು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 800U 5G SoC ಪ್ರೊಸೆಸರ್‌ ಹೊಂದಿದೆ. ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಮೊಟೊ ಡೇಸ್ ನಲ್ಲಿ ಈ ಫೋನ್ 18,999 ರೂ. ಗಳ ಆಫರ್‌ ಬೆಲೆಯಲ್ಲಿ ಲಭ್ಯ ಆಗಲಿದೆ.

ಮೊಟೊ E40 ಸ್ಮಾರ್ಟ್‌ಫೋನ್‌
ಮೊಟೊ E40 ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಮ್ಯಾಕ್ಸ್ ವಿಷನ್ ಹೆಚ್‌ಡಿ+ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಯೂನಿಸೋಕ್ T700 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇನ್ನು ಮೊಟೊ ಡೇಸ್ ನಲ್ಲಿ ಈ ಫೋನ್ 9,999 ರೂ. ಗಳ ಆಫರ್‌ ಬೆಲೆಯಲ್ಲಿ ಲಭ್ಯ ಆಗಲಿದೆ.

Best Mobiles in India

English summary
Moto Days Sale On Flipkart: Attractive Discounts On These Phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X