ಕೈಗೆಟಕುವ ಬೆಲೆಯಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟ ಮೊಟೊ e22s!
ಮೊಟೊರೊಲಾ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ತನ್ನ ಆಕರ್ಷಕ ಡಿಸ್‌ಪ್ಲೇ ವಿನ್ಯಾಸ ಹಾಗೂ ಪ್ಯಾನಲ್ ಡಿಸೈನ್ ಮೂಲಕ ಗ್ರಾಹಕರ ಗಮನಸೆಳೆದಿದೆ. ಇದೀಗ ತನ್ನ ಹೊಸ ಮೊಟೊ e22s ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, ಆತ್ಯಾಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಮೀಡಿಯಾ ಟೆಕ್ Helio G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಮೊಟೊ ಕಂಪೆನಿ ಭಾರತದಲ್ಲಿ ಹೊಸ ಮೊಟೊ e22s ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, 10W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಸ್ಮಾರ್ಟ್‌ಫೋನ್ ಆರ್ಕ್ಟಿಕ್ ಬ್ಲೂ ಮತ್ತು ಇಕೋ ಬ್ಲಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ? ಇದರ ಫಸ್ಟ್ ಸೇಲ್ ಯಾವಾಗ ನಡೆಯಲಿದೆ? ಬೆಲೆ ಎಷ್ಟಿದೆ? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ
ಮೊಟೊ e22s ಸ್ಮಾರ್ಟ್‌ಫೋನ್ 6.5-ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1600x720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 20:9 ರಚನೆಯ ಅನುಪಾತವನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಇದರ ಪಿಕ್ಸೆಲ್ ಸಾಂದ್ರತೆ 268ppiಗೆ ಸೀಮಿತವಾಗಿದೆ. ಇನ್ನು ಈ ಡಿಸ್‌ಪ್ಲೇ ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತ 89.03% ಆಗಿದೆ.

ಪ್ರೊಸೆಸರ್ ಯಾವುದು?
ಮೊಟೊ e22s ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹೆಲಿಯೋ G37 SoC ಪ್ರೊಸೆಸರ್ ಬಲ ಪಡೆದಿದೆ. ಇದು ಆಕ್ಟಾ-ಕೋರ್ CPU ನಿಂದ ನಾಲ್ಕು A53 2.3GHz ಮತ್ತು ನಾಲ್ಕು A53 1.8GHz ಕೋರ್‌ಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯದವನ್ನು 1TBವರೆಗೆ ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಿದೆ.

ಕ್ಯಾಮೆರಾ ಸೆಟ್‌ಅಪ್ ಏನಿದೆ?
ಮೊಟೊ e22s ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪನೋರಮಾ, ನೈಟ್ ಮೋಡ್, ಪ್ರೊ ಮೋಡ್, ಫೇಸ್ ಬ್ಯೂಟಿ ಮತ್ತು ಗೂಗಲ್ ಲೆನ್ಸ್ ಇಂಟಿಗ್ರೇಷನ್ ಅನ್ನು ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ?
ಮೊಟೊ e22s ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಪಡೆದಿದೆ. ಇದು 10W ಚಾರ್ಜಿಂಗ್ ವೇಗವನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಹೆಡ್‌ಫೋನ್ ಜ್ಯಾಕ್, ವೈಫೈ, ಬ್ಲೂಟೂತ್ v5.0, ಮತ್ತು 2.4GHz ಮತ್ತು 5GHz ಡ್ಯುಯಲ್-ಬ್ಯಾಂಡ್ ವೈ-ಫೈ ಅನ್ನು ಸಹ ಬೆಂಬಲಿಸುತ್ತದೆ. ಭದ್ರತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಫೋನ್ ಕರೆಗಳಿಗಾಗಿ ಸಿಂಗಲ್ ಮೈಕ್ರೊಫೋನ್ ಅನ್ನು ಸಹ ಪಡೆಯುತ್ತದೆ.

ಬೆಲೆ ಮತ್ತು ಲಭ್ಯತೆ
ಮೊಟೊ e22s ಸ್ಮಾರ್ಟ್‌ಫೋನ್ ಭಾರತದಲ್ಲಿ 8,999ರೂ. ಬೆಲೆಯಲ್ಲಿ ಎಂಟ್ರಿ ನೀಡಿದೆ. ಇದನ್ನು ಫ್ಲಿಪ್‌ಕಾರ್ಟ್ ಮತ್ತು ಇತರ ರಿಟೇಲ್ ಸ್ಟೋರ್‌ಗಳ ಮೂಲಕ ಇದೇ ಅಕ್ಟೋಬರ್ 22 ರಿಂದ ಮಾರಾಟ ಮಾಡಲಾಗುತ್ತದೆ ಎಂದು ಮೊಟೊ ಕಂಪೆನಿ ಹೇಳಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆರ್ಕ್ಟಿಕ್ ಬ್ಲೂ ಮತ್ತು ಇಕೋ ಬ್ಲಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








