Home
ಸುದ್ದಿಜಾಲ

ಮೊಟೋ E5 ಪ್ಲಸ್ ಬಿಡುಗಡೆಯನ್ನು ಲೈವ್‌ನಲ್ಲಿಯೇ ವೀಕ್ಷಿಸಿ..!

By Gizbot Bureau

ಬಹಳ ದಿನಗಳ ಕಾತುರಕ್ಕೆ ಇವತ್ತು ಅಂತಿಮ ತೆರೆ ಬೀಳಲಿದೆ. ಹೌದು ಲೆನೋವೊ ಮಾಲೀಕತ್ವದ ಹೊಸ ಬಜೆಟ್ ಸ್ಮಾರ್ಟ್ ಫೋನ್ ಮೋಟೋ ಈ5 ಪ್ಲಸ್ ಭಾರತದಲ್ಲಿ ಇಂದು ಬಿಡುಗಡೆಗೊಳ್ಳುತ್ತಿದೆ. ಬಿಡುಗಡೆ ಸಮಾರಂಭವನ್ನು ನವದೆಹಲಿಯಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2.30 ಕ್ಕೆ ಆಯೋಜಿಸಲಾಗಿದೆ.

ಎಲ್ಲರೂ ಈ ಮೊಬೈಲ್ ಗಾಗಿ ಕಾತುರರಾಗಿದ್ದಾರೆ ಯಾಕೆಂದರೆ 5000mAh ನ ಬ್ಯಾಟರಿಯನ್ನು ಇದು ಒಳಗೊಂಡಿದ್ದು ಬಹಳ ಬೇಗನೆ ಜಾರ್ಜ್ ಆಗುತ್ತದೆ ಮತ್ತು ಪಾಲಿಮರ್ ಗ್ಲಾಸ್ ನ ಬ್ಯಾಕ್ ಪೆನಲ್ ನ್ನು ಇದು ಹೊಂದಿದೆ. ಕಪ್ಪು, ಬೂದು ಬಣ್ಣ, ಮಿನರಲ್ ನೀಲಿ ಮತ್ತು ಫೈನ್ ಗೋಲ್ಡ್ ಬಣ್ಣದ ವೇರಿಯಂಟ್ ನಲ್ಲಿ ಮಾರುಕಟ್ಟೆಯಲ್ಲಿ ಈ ಮೊಬೈಲ್ ಲಭ್ಯವಾಗಲಿದ್ದು, ನಿಮಗಿಷ್ಟವಾದ ಬಣ್ಣದ ಮೊಬೈಲ್ ಖರೀದಿಸಲು ಅವಕಾಶವಿದೆ.

ಮೊಟೋ E5 ಪ್ಲಸ್ ಬಿಡುಗಡೆಯನ್ನು ಲೈವ್‌ನಲ್ಲಿಯೇ ವೀಕ್ಷಿಸಿ..!

ಮೋಟೋ ಈ5 ನ ಭಾರತೀಯ ಬೆಲೆ, ಮಾರಾಟಕ್ಕೆ ಲಭ್ಯವಾಗುವ ದಿನಾಂಕ ಮತ್ತು ಆಫರ್ ಗಳ ವಿವರಗಳನ್ನು ಇಂದು ಮಧ್ಯಾಹ್ನದ ಕಾರ್ಯಕ್ರಮದಲ್ಲಿ ನೀಡಲಾಗುತ್ತೆ. ಮತ್ತೆ ಪುನಃ ಹೇಳಬೇಕು ಎಂದರೆ ಈ ಡಿವೈಸ್ ವಿಶ್ವದ ಇತರೆಡೆಗಳಲ್ಲಿ ಎಫ್ರಿಲ್ ನಲ್ಲಿ ಬಿಡುಗಡೆಗೊಂಡಿತ್ತು. ಮೋಟೋ ಈ5, ಮೋಟೋ ಈ5 ಪ್ಲೇ ಮತ್ತು ಮೋಟೋ ಜಿ6 ಸಿರೀಸ್ ನ ಮೊಬೈಲ್ ಗಳು ಒಟ್ಟೊಟ್ಟಿಗೆ ಬಿಡುಗಡೆಗೊಂಡಿದ್ದವು.

ಭಾರತೀಯ ಯುನಿಟ್ ನಲ್ಲೂ ಕೂಡ ಮೋಟೋ ಈ5 ನ ವೈಶಿಷ್ಟ್ಯತೆಗಳು ಇತರೆಡೆಗಳಲ್ಲಿ ಇರುವಂತೆಯೇ ಇರಲಿದೆ.ಒಂದು ವೇಳೆ ಯಾವುದೇ ಬದಲಾವಣೆಗಳಿದ್ದಲ್ಲಿ ಅದನ್ನು 2 ಗಂಟೆಯ ನಂತರ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಅಮೇಜಾನ್ ಇಂಡಿಯಾದಲ್ಲಿ ಎಕ್ಸ್ ಕ್ಲೂಸಿವ್ ಆಗಿ ಮಾರಾಟಕ್ಕೆ ಲಭ್ಯವಾದಲಿದೆ ಎಂಬ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇನ್ನು ಮೋಟೋ ಹಬ್ ಸ್ಟೋರ್ ನಲ್ಲಿ ಖಂಡಿತವಾಗಿಯೂ ಆಫ್ ಲೈನ್ ನಲ್ಲಿ ಖರೀದಿಸಬಹುದು. ಅದರಲ್ಲಿ ಯಾವುದೇ ಬದಲಾವಣೆಗಳಿರಲು ಸಾಧ್ಯವಿಲ್ಲ.

ಮೋಟೋ ಈ5 ಪ್ಲಸ್ ನ ಬಿಡುಗಡೆಯ ನೇರ ಪ್ರಸಾರವನ್ನು ಎಲ್ಲಿ ನೋಡಬಹುದು?



ಮೋಟೋ ಈ5 ಪ್ಲಸ್ ಭಾರತದಲ್ಲಿ ಬಿಡುಗಡೆಗೊಳ್ಳುವ ಸಮಾರಂಭವನ್ನು ಯುಟ್ಯೂಬ್ ನಲ್ಲಿ ನೇರಪ್ರಸಾರದಲ್ಲಿ ನೋಡಲು ದೇಶದ ಎಲ್ಲಾ ಮೋಟೋ ಅಭಿಮಾನಿಗಳಿಗೂ ಅವಕಾಶವಿದೆ. ಈ ಕೆಳಗೆ ನೀಡಲಾಗಿರುವ ವೀಡಿಯೋವನ್ನು ಮಧ್ಯಾಹ್ನ 2.30 ಕ್ಕೆ ಹಿಟ್ ಮಾಡಿದರೆ, ನೀವು ಭಾರತದಲ್ಲಿ ಮೋಟೋ ಈ5 ಬಿಡುಗಡೆಗೊಳ್ಳುವ ಸಮಾರಂಭದ ನೇರಪ್ರಸಾರವನ್ನು ವೀಕ್ಷಣೆ ಮಾಡಬಹುದು.

ಮೋಟೋ ಈ5 ನ ವೈಶಿಷ್ಟ್ಯೆತಗಳು:

ಮೋಟೋ ಈ4 ಆಂಡ್ರಾಯ್ಡ್ 8.0 ಓರಿಯೋ ಔಟ್-ಆಫ್- ದಿ- ಬಾಕ್ಸ್ ನಲ್ಲಿ ರನ್ ಆಗಲಿದೆ ಮತ್ತು 6-ಇಂಚಿನ HD+ (720x1440 ಪಿಕ್ಸಲ್) IPS LCD ಡಿಸ್ಪ್ಲೇ ಜೊತೆಗೆ 18:9 ಅನುಪಾತವನ್ನು ಹೊಂದಿರಲಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 435 ಸಾಕೆಟ್ ನಲ್ಲಿ ಇದು ಕೆಲಸ ಮಾಡುತ್ತದೆ ಮತ್ತು 3ಜಿಬಿ ಮೆಮೊರಿ ಮತ್ತು 32ಜಿಬಿ ಸ್ಟೋರೇಜ್ ಅವಕಾಶವನ್ನು ಹೊಂದಿರುತ್ತದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 ಜಿಬಿ ವರೆಗೂ ಸ್ಟೋರೇಜ್ ವ್ಯವಸ್ಥೆಯನ್ನು ಹಿಗ್ಗಿಸಿಕೊಳ್ಳಲು ಇದರಲ್ಲಿ ಅವಕಾಶವಿರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದರ ವೈಶಿಷ್ಟ್ಯೆತೆಯೆಂದರೆ 5000mAh ಬ್ಯಾಟರಿ ಸೌಲಭ್ಯವಿರಲಿದ್ದು, ಟರ್ಬೋ ಪವರ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಹಾಗಾಗಿ ಮೊಬೈಲ್ ಬೇಗನೆ ಚಾರ್ಜ್ ಆಗುತ್ತದೆ.

ಕ್ಯಾಮರಾ ವಿಚಾರವನ್ನು ಪ್ರಸ್ತಾಪಿಸುವುದಾದರೆ,ಮೋಟೋ ಈ 5 ನಲ್ಲಿ 12 ಮೆಗಾಪಿಕ್ಸಲ್ ನ ಹಿಂಭಾಗದ ಕ್ಯಾಮರಾ ವಿರಲಿದ್ದು ಅದರ ದ್ಯುತಿರಂಧ್ರ f/2.0 ಆಗಿರಲಿದೆ, ಲೇಸರ್ ಆಟೋಫೋಕಸ್, PDAF ಮತ್ತು ಎಲ್ಇಡಿ ಫ್ಲ್ಯಾಶ್ ಅವಕಾಶವು ಇದರಲ್ಲಿ ಇರಲಿದೆ. ಮುಂಭಾಗದಲ್ಲಿ 8-ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾ ಲಭ್ಯವಿರಲಿದ್ದು ಅದರ ದ್ಯುತಿರಂಧ್ರ f/2.2 ಆಗಿರಲಿದೆ ಜೊತೆಗೆ ಸೆಲ್ಫೀ ಲೈಟ್ ಕೂಡ ಇರಲಿದೆ.

ಕನೆಕ್ಟಿವಿಟಿ ವಿಚಾರದಲ್ಲಿ ಮೋಟೋ ಈ5 ನಲ್ಲಿ 4G VoLTE, ಡುಯಲ್ ಬ್ಯಾಂಡ್ ವೈ-ಫೈ 802.11 a/b/g/n ಜೊತೆಗೆ ಹಾಟ್ ಸ್ಪಾಟ್,ಬ್ಲೂಟೂತ್ 4.2 LE, ಜಿಪಿಎಸ್/ ಎ-ಜಿಪಿಎಸ್, GLONASS, ಎಫ್ಎಂ ರೇಡಿಯೋ, ಮತ್ತು 3.5ಎಂಎಂ ನ ಹೆಡ್ ಫೋನ್ ಜಾಕ್ ಮತ್ತು ಮೈಕ್ರೋ USB ಇರಲಿದೆ..

Best Mobiles in India

English summary
Moto E5 Plus India Launch Set for Today: How to Watch Live Stream. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+