Home
ಸುದ್ದಿಜಾಲ

ಮೋಟೋ G Play (2024) ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಹೊಸ ಕಂಪನ ಶುರು

ಮೊಟೊರೊಲಾ ಕಂಪೆನಿಯ ಡಿವೈಸ್‌ಗಳೆಂದರೆ ಹಾಗೇ ಟೆಕ್‌ ವಲಯದಲ್ಲಿ ಕಂಪನ ಸೃಷ್ಟಿಸೋದು ಸಾಮಾನ್ಯವಾಗಿ ಬಿಟ್ಟಿದೆ. ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಫೋನ್‌ಗಳಿಂದಾನೇ ಮೊಟೊರೊಲಾ ಕಂಪೆನಿಗೆ ಟೆಕ್‌ ವಲಯದಲ್ಲಿ ಸ್ಥಾನ ಗಟ್ಟಿಯಾಗಿದೆ. ಅದೇ ಹಾದಿಯಲ್ಲಿ ಸಾಗಿರುವ ಮೊಟೊರೊಲಾ ಹೊಸದಾಗಿ ಮೋಟೋ G Play (2024) ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಹೌದು, ಮೋಟೋ G Play (2024) ಸ್ನಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ನಡೆದಿದೆ. ಇದು ಮೋಟೋ G Play ಸ್ಮಾರ್ಟ್‌ಫೋನ್‌ನ ಉತ್ತರಾಧಿಕಾರಿಯಾಗಿದೆ. ಸದ್ಯ ಇದೀಗ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸಿಸ್ಟಂ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಹಾಗಾದ್ರೆ ಮೋಟೋ G Play (2024) ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೋಟೋ G Play (2024) ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಹೊಸ ಕಂಪನ ಶುರು

ಮೋಟೋ G Play (2024) ಡಿಸ್‌ಪ್ಲೇ ರಚನೆ
ಮೋಟೋ G Play (2024) ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಬೆಂಬಲದೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಇನ್ನು ಡಿಸ್‌ಪ್ಲೇ ವೀಡಿಯೋ ವೀಕ್ಷಣೆಗೆ ಯೋಗ್ಯವಾದ ಡಿಸೈನ್‌ ಅನ್ನು ಒಳಗೊಂಡಿದೆ.

ಮೋಟೋ G Play (2024) ಪ್ರೊಸೆಸರ್‌ ಯಾವುದು?
ಮೋಟೋ G Play (2024) ಸ್ಮಾರ್ಟ್‌ಫೋನ್‌ 12nm MediaTek Helio G37 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ. ಇದು ಮೆಮೊರಿ ಕಾರ್ಡ್‌ ಬೆಂಬಲಿಸುವ ನಿರೀಕ್ಷೆಯನ್ನು ಇಡಲಾಗಿದೆ. ಆದರೆ ಇದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮೋಟೋ G Play (2024) ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಹೊಸ ಕಂಪನ ಶುರು

ಮೋಟೋ G Play (2024) ಕ್ಯಾಮೆರಾ ಸೆಟಪ್‌ ಏನಿದೆ?
ಮೋಟೋ G Play (2024) ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ನಲ್ಲಿ ಬರಲಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದೆ. ಎರಡು ಹಾಗೂ ಮೂರನೇ ಕ್ಯಾಮೆರಾ ವಿವರಗಳು ಬಹಿರಂಗವಾಗಿಲ್ಲ. ಆದರೆ ಇದರ ಮುಂಭಾಗದ ಕ್ಯಾಮೆರಾ 8MP ಸೆನ್ಸಾರ್‌ ಇರಲಿದೆ ಎಂದು ಅಂದಾಜಿಸಲಾಗಿದೆ.

ಮೋಟೋ G Play (2024) ಬ್ಯಾಟರಿ ಮತ್ತು ಇತರೆ
ಮೋಟೋ G Play (2024) ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಮೋಟೋ G Play (2024) ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಹೊಸ ಕಂಪನ ಶುರು

ಮೋಟೋ G Play (2024) ಬೆಲೆ ಮತ್ತು ಲಭ್ಯತೆ
ಮೋಟೋ G Play (2024) ಸ್ಮಾರ್ಟ್‌ಫೋನ್‌ ಮುಂದಿನ ತಿಂಗಳು ಅನಾವರಣಗೊಳ್ಳಲಿದೆ. ಅದರಂತೆ ಇದರ ಬೇಸ್‌ ಮಾಡೆಲ್‌ $169 (ಸುಮಾರು 14,000ರೂ) ಬೆಲೆಯೊಂದಿಗೆ ಅಧಿಕೃತವಾಗಲಿದೆ. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಕರ್ಷಕ ಆಯ್ಕೆಯಾಗಿರಲಿದೆ. ಇದರ ಕಲರ್‌ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಇನ್ನು ಮೊಟೊರೊಲಾ ಕಂಪೆನಿ ಇತ್ತೀಚಿಗೆ ಮೋಟೋ G34 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 6-ಸರಣಿ ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
Moto G Play (2024) Specifications Leak Online; Expected Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+