Home
ಸುದ್ದಿಜಾಲ

ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ ಲಾಂಚ್‌! ಹೆಸರಿನಷ್ಟೇ ಪವರ್‌ಫುಲ್‌ ಫೀಚರ್ಸ್‌!

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಮೊಟೊರೊಲಾ ಕಂಪೆನಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ. ತನ್ನ ಹೊಸ ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಮೂಲಕ ಹೊಸ ಬಿರುಗಾಳಿಯನ್ನು ಎಬ್ಬಿಸಿದೆ. ಈ ಸ್ಮಾರ್ಟ್‌ಫೋನ್‌ ಹೊಸ ಮೀಡಿಯಾಟೆಕ್‌ ಡೈಮೆನ್ಸಿಟಿ 930 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಮೊಟೊರೊಲಾ ಕಂಪೆನಿ ತನ್ನ ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ ಲಾಂಚ್‌! ಹೆಸರಿನಷ್ಟೇ ಪವರ್‌ಫುಲ್‌ ಫೀಚರ್ಸ್‌!

ಮೊಟೊ G ಪವರ್‌ 5G ಡಿಸ್‌ಪ್ಲೇ ಹೇಗಿದೆ?

ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ಮೊಟೊ G ಪವರ್‌ 5G ಪ್ರೊಸೆಸರ್‌ ಯಾವುದು?

ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 930 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ ಲಾಂಚ್‌! ಹೆಸರಿನಷ್ಟೇ ಪವರ್‌ಫುಲ್‌ ಫೀಚರ್ಸ್‌!

ಮೊಟೊ G ಪವರ್‌ 5G ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡ್ಯುಯಲ್ ಕ್ಯಾಪ್ಚರ್, ಸ್ಪಾಟ್ ಕಲರ್, ಟೈಮ್ ಲ್ಯಾಪ್ಸ್ ಛಾಯಾಚಿತ್ರ ಮತ್ತು ಸ್ಲೋ ಮೋಷನ್ ಅನ್ನು ಹೊಂದಿದೆ.

ಮೊಟೊ G ಪವರ್‌ 5G ಬ್ಯಾಟರಿ ಯಾವುದು?

ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಸಿಂಗಲ್‌ ಚಾರ್ಜ್‌ನಲ್ಲಿ 38 ಗಂಟೆಗಳ ಬ್ಯಾಟರಿ ಬಳಕೆಯನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11 a/b/g/n/ac, ಬ್ಲೂಟೂತ್ 5.3, GPS/ A-GPS, ಗ್ಲೋನಾಸ್, ಗೆಲಿಲಿಯೋ, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್ ಹೊಂದಿದೆ.

ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ ಲಾಂಚ್‌! ಹೆಸರಿನಷ್ಟೇ ಪವರ್‌ಫುಲ್‌ ಫೀಚರ್ಸ್‌!

ಮೊಟೊ G ಪವರ್‌ 5G ಬೆಲೆ ಮತ್ತು ಲಭ್ಯತೆ

ಮೊಟೊ G ಪವರ್‌ 5G ಸ್ಮಾರ್ಟ್‌ಫೋನ್‌ 6GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ $299.99 (ಅಂದಾಜು 24,500ರೂ) ಬೆಲೆಯನ್ನು ಹೊಂದಿದೆ. ಈ ಫೋನ್‌ ಯುಎಸ್‌ನಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಇದೇ ಏಪ್ರಿಲ್ 13 ರಿಂದ ಮೊಟೊರೊಲಾ.ಕಾಮ್‌, ಅಮೆಜಾನ್‌ ಮತ್ತು ಬೆಸ್ಟ್‌ಬೈ ಮೂಲಕ ಸೇಲ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಭಾರತಕ್ಕೆ ಯಾವಾಗ ಬಿಡುಗಡೆಯಾಗಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

Best Mobiles in India

English summary
Moto G Power 5G features a hole-punch display with 120Hz refresh rate and has a triple camera setup at the back with a 50-megapixel main sensor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+