ಮೊಟೊ G ಪವರ್ ಮತ್ತು ಮೊಟೊ G ಸ್ಟೈಲಸ್ ಸ್ಮಾರ್ಟ್‌ಫೋನ್ ಬಿಡುಗಡೆ!
ಇದು ಸ್ಮಾರ್ಟ್‌ಫೋನ್‌ಗಳ ಜಮಾನ. ವಿವಿಧ ಮಾದರಿಯ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ಗಳು ಟೆಕ್ ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತಲೇ ಇರುತ್ತವೆ. ಸಾಕಷ್ಟು ಬಗೆಯ ಸ್ಮಾರ್ಟ್‌ಫೋನ್‌ಗಳೂ ಲಭ್ಯವಿದ್ದರೂ ಸ್ಮಾರ್ಟ್‌ಫೋನ್ ಪ್ರಿಯರು ಸದಾ ಹೊಸ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ಗಳ ಕಡೆಗೆ ತಮ್ಮ ಗಮನ ಹರಿಸುತ್ತಾರೆ. ಸದ್ಯ ಇದೀಗ ಮೊಟೊರೊಲಾ ಕಂಪೆನಿ ಎರಡು ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಲಾಂಚ್ ಮಾಡಿದ್ದು, ಟೆಕ್ ವಲಯದಲ್ಲಿ ಸೌಂಡ್ ಮಾಡೋ ಸೂಚನೆ ನೀಡಿದೆ.

ಹೌದು, ಅಮೆರಿಕಾ ಮೂಲದ ಮೊಟೊರೊಲಾ ಕಂಪೆನಿ ಈಗಾಗ್ಲೆ ತನ್ನ ವೈವಿಧ್ಯ ಬಗೆಯ ಸ್ಮಾರ್ಟ್‌ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಇದೀಗ ಇದೇ ತಿಂಗಳು ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ ಸಮ್ಮೇಳನಕ್ಕೂ ಮೊದಲು ತನ್ನ ಹೊಸ ಮೋಟೋ ಜಿ ಪವರ್ ಮತ್ತು ಮೋಟೋ ಜಿ ಸ್ಟೈಲಸ್ ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆ ಯಾಗಿರುವ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಮೊಟೊ ಜಿ ಪವರ್ ಡಿಸ್‌ಪ್ಲೇ
ಮೊಟೊ ಜಿ ಪವರ್ ಸ್ಮಾರ್ಟ್‌ಫೋನ್ 1080 x 2300 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.4-ಇಂಚಿನ ಫುಲ್ ಎಚ್‌ಡಿ ಹೊಂದಿರುವ ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 19.17:9 ಆಸ್ಪೆಕ್ಟ್ ರೆಶಿಯೋ ಹೊಂದಿದ್ದು, 399 ಪಿಪಿ ಪಿಕ್ಸೆಲ್ ಸಾಂದ್ರತೆಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯ ಸ್ಕ್ರೀನ್ ಟು ಬಾಡಿ 88 % ರೆಶಿಯೋ ವನ್ನು ಹೊಂದಿದೆ. ಇದು ಪಂಚ್ ಹೋಲ್ ಕ್ಯಾಮೆರಾ ಡಿಸ್‌ಪ್ಲೇ ವಿನ್ಯಾಸ ಹೊಂದಿರುವುದರಿಂದ ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ.

ಮೊಟೊ ಜಿ ಪವರ್ ಪ್ರೊಸೆಸರ್
ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್10ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಮೋಟೋ ಜಿ ಪವರ್ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನ ಹೊಂದಿದ್ದು, ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಮೊಟೊ ಜಿ ಪವರ್ ಕ್ಯಾಮೆರಾ
ಮೊಟೊ ಜಿ ಪವರ್ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇನ್ನು ಮೊದಲನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, f/ 1.7 ಲೆನ್ಸ್ ಹೊಂದಿರುವ ಮುಖ್ಯ ಸ್ನ್ಯಾಪರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 11 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, 118 ಡಿಗ್ರಿ ಕ್ಷೇತ್ರ ವೀಕ್ಷಣೆಯ ವೈಡ್-ಆಂಗಲ್ ಲೆನ್ಸ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಮ್ಯಾಕ್ರೋ ಶೂಟರ್ ಲೆನ್ಸ್ ಒಳಗೊಂಡಿದೆ. ಅಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಮೊಟೊ ಜಿ ಪವರ್ ಬ್ಯಾಟರಿ ಮತ್ತು ಇತರೆ
ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಪ್ಯಾಕ್‌ಆಪ್ ಹೊಂದಿದ್ದು, 10W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈ-ಫೈ 802.11, ಬ್ಲೂಟೂತ್ 5.0, ಜಿಪಿಎಸ್, ಎಜಿಪಿಎಸ್, ಎಲ್‌ಟಿಇಪಿಪಿ, ಎಸ್‌ಯುಪಿಎಲ್, ಬೆಂಬಲಿಸಲಿದೆ. ಇದಲ್ಲದೆ ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್, ಸೆನ್ಸರ್ ಹಬ್ ಮತ್ತು ಫಿಂಗರ್‌ಪ್ರಿಂಟ್ ರೀಡರ್ ಸೆನ್ಸಾರ್ ಅನ್ನು ಒಳಗೊಂಡಿದೆ.ಸದ್ಯ ಇದರ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮೊಟೊ ಜಿ ಸ್ಟೈಲಸ್ ಡಿಸ್‌ಪ್ಲೇ
ಮೊಟೊ ಜಿ ಸ್ಟೈಲಸ್ ಸ್ಮಾರ್ಟ್‌ಫೋನ್ 1080 x 2300 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.4-ಇಂಚಿನ ಫುಲ್ ಎಚ್‌ಡಿ ಮ್ಯಾಕ್ಸ್ ವಿಷನ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 399 ಪಿಪಿ ಪಿಕ್ಸೆಲ್ ಸಾಂದ್ರತೆ ಯನ್ನ ಹೊಂದಿದ್ದು,19.17: 9 ಆಸ್ಪೆಕ್ಟ್ ರೆಶೀಯೋವನ್ನು ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇ ಸ್ಕ್ರೀನ್-ಟು-ಬಾಡಿ 89% ರೆಶೀಯೋ ಹೊಂದಿದೆ. ಈ ಡಿಸ್‌ಪ್ಲೇ ವಿನ್ಯಾಸ ಉತ್ತಮವಾಗಿರೊದ್ರಿಂದ ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ.

ಮೊಟೊ ಜಿ ಸ್ಟೈಲಸ್ ಪ್ರೊಸೆಸರ್
ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಸ್ಟಾಕ್ ಫ್ಲೇವರ್‌ಬೆಂಬಲದೊಂದಿಗೆ ಕಾರ್ಯನಿರ್ವಸಲಿದೆ. ಜೊತೆಗೆ ಈ ಸ್ಮಾರ್ಟಫೋನ್ 4GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಮೊಟೊ ಜಿ ಸ್ಟೈಲಸ್ ಕ್ಯಾಮೆರಾ
ಮೊಟೊ ಜಿ ಸ್ಟೈಲಸ್ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಅನ್ನು ಹೊಂದಿದೆ. ಆದರೆ ಮೋಟೋ ಜಿ ಪವರ್ ಸ್ಮಾರ್ಟ್‌ಫೋನ್ ಕ್ಯಾಮೆರಾ ರೆಸಲ್ಯೂಶನ್‌ಗಿಂತ ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ರೆಸಲ್ಯೂಶನ್ ಭಿನ್ನವಾಗಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ f/1.7 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಆಕ್ಷನ್ ಕ್ಯಾಮೆರಾ ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು ಲೇಸರ್ ಆಟೋಫೋಕಸ್ ಮಾಡ್ಯೂಲ್ ಅನ್ನು ಹೊಂದಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಮೊಟೊ ಜಿ ಸ್ಟೈಲಸ್ ಬ್ಯಾಟರಿ ಮತ್ತು ಇತರೆ
ಈ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿ ಪ್ಯಾಕ್‌ಆಪ್ ಹೊಂದಿದ್ದು, ಇದು 10W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE , ವೈ-ಫೈ 802.11, ಬ್ಲೂಟೂತ್ 5.0, ಜಿಪಿಎಸ್, ಎಜಿಪಿಎಸ್, ಎಲ್ ಟಿಇಪಿಪಿ, ಎಸ್‌ಯುಪಿಎಲ್, ಗ್ಲೋನಾಸ್ ಮತ್ತು ಗೆಲಿಲಿಯೊ ವನ್ನು ಬೆಂಬಲಿಸಲಿದೆ. ಇದಲ್ಲದೆ ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್, ಸೆನ್ಸರ್ ಹಬ್ ಮತ್ತು ಫಿಂಗರ್‌ಪ್ರಿಂಟ್ ರೀಡರ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಬೆಲೆ ಏನು ಅನ್ನೊದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








