Home
ಸುದ್ದಿಜಾಲ

ಮೋಟೋ E40 ಮತ್ತು ಮೋಟೋ G ಪ್ಯೂರ್ ಸ್ಮಾರ್ಟ್‌ಫೋನ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ಮೊಟೊರೊಲಾ ಕಂಪೆನಿ ಕೂಡ ಸೇರಿದೆ. ಈಗಾಗಲೇ ಹಲವು ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಬಹು ನಿರೀಕ್ಷಿತ ಮೋಟೋ E40 ಮತ್ತು ಮೋಟೋ G ಪ್ಯೂರ್ ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಇದರಲ್ಲಿ ಮೋಟೋ E40 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಆದರೆ ಮೋಟೋ G ಪ್ಯೂರ್ ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ಮೋಟೋ E40 ಮತ್ತು ಮೋಟೋ G ಪ್ಯೂರ್ ಸ್ಮಾರ್ಟ್‌ಫೋನ್‌ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇನ್ನು ಮೋಟೋ E40 ಫೋನ್‌ ಅನ್ನು ಯುರೋಪ್‌ನಲ್ಲಿ ಅನಾವರಣಗೊಳಿಸಿದೆ, ಆದರೆ ಮೋಟೋ ಜಿ ಪ್ಯೂರ್ ಅನ್ನು ಯುಎಸ್‌ನಲ್ಲಿ ಪರಿಚಯಿಸಿದೆ. ಇದರಲ್ಲಿ ಮೋಟೋ E40 ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಹಾಗೆಯೇ ಮೋಟೋ G ಪ್ಯೂರ್‌ 4,000mAh ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೋಟೋ E40 ಸ್ಮಾರ್ಟ್‌ಫೋನ್‌

ಮೋಟೋ E40 ಸ್ಮಾರ್ಟ್‌ಫೋನ್‌

ಮೋಟೋ E40 ಸ್ಮಾರ್ಟ್‌ಫೋನ್‌ 6.5 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಹೊಂದಿದೆ. ಇದು ಯುನಿಸೊಕ್ ಟಿ 700 ಆಕ್ಟಾ-ಕೋರ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆಯನ್ನು ಸಹ ಒಳಗೊಂಡಿದೆ. ಇನ್ನು ಈ ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಇದು ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಹೊಂದಿದ್ದು, ನೈಟ್‌ ಫೋಟೋಗ್ರಫೀಗೆ ಅನುಕೂಲವಾಗಲಿದೆ. ಜೊತೆಗೆ ಈ ಫೋನ್‌‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 40 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ.

ಮೋಟೋ G ಪ್ಯೂರ್ ಸ್ಮಾರ್ಟ್‌ಫೋನ್‌

ಮೋಟೋ G ಪ್ಯೂರ್ ಸ್ಮಾರ್ಟ್‌ಫೋನ್‌

ಮೋಟೋ G ಪ್ಯೂರ್ ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G25 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ ಎಂದು ಪಟ್ಟಿ ಮಾಡಲಾಗಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಲಾಗಿದೆ. ಈ ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೋಟೋ E40 ಸ್ಮಾರ್ಟ್‌ಫೋನ್‌ ಬೆಲೆ ಯುರೋ 149 (ಅಂದಾಜು 12,900ರೂ)ಹೊಂದಿದೆ. ಇದನ್ನು ಚಾರ್ಕೋಲ್ ಗ್ರೇ ಮತ್ತು ಕ್ಲೇ ಪಿಂಕ್ ಕಲರ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಇನ್ನು ಮೋಟೋ ಜಿ ಪ್ಯೂರ್‌ ಸ್ಮಾರ್ಟ್‌ಫೋನ್‌ ಬೆಲೆ $ 159.99 (ಅಂದಾಜು 12,000ರೂ)ಆಗಿದೆ. ಇದು ಬೆಸ್ಟ್ ಬೈ, ವಾಲ್‌ಮಾರ್ಟ್, ಬಿ & ಎಚ್ ಫೋಟೋ, ಅಮೆಜಾನ್, ಮತ್ತು ಮೊಟೊರೊಲಾ.ಕಾಮ್‌ನಲ್ಲಿ ಪ್ರೀ ಆರ್ಡರ್‌ಗೆ ಲಭ್ಯವಿದೆ. ಅಲ್ಲದೆ ಇದೇ ಅಕ್ಟೋಬರ್ 14 ರಿಂದ ಫೋನ್ ವೆರಿಜೋನ್ ನಲ್ಲಿ ಮಾರಾಟಕ್ಕೆ ಬರಲಿದೆ. ಮುಂದಿನ ತಿಂಗಳುಗಳಲ್ಲಿ ಟಿ-ಮೊಬೈಲ್, ಎಟಿ & ಟಿ, ಕ್ರಿಕೆಟ್, ಯುಎಸ್ ಸೆಲ್ಯುಲಾರ್, ಗ್ರಾಹಕ ಸೆಲ್ಯುಲಾರ್, ಬೂಸ್ಟ್ ಮೊಬೈಲ್, ಎಕ್ಸ್ ಫಿನಿಟಿ ಮೊಬೈಲ್, ಸ್ಪೆಕ್ಟ್ರಮ್ ಮೊಬೈಲ್ ಮತ್ತು ರಿಪಬ್ಲಿಕ್ ವೈರ್ ಲೆಸ್ ಹ್ಯಾಂಡ್ ಸೆಟ್ ನೀಡಲಿದೆ. ಇದು ಒಂದೇ ಡೀಪ್ ಇಂಡಿಗೊ ಬಣ್ಣದ ಆಯ್ಕೆಯಲ್ಲಿ ಬರುತ್ತದೆ. ಇನ್ನು ಮೋಟೋ E40 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಇದೇ ಅಕ್ಟೋಬರ್ 12 ರಂದು ಬಿಡುಗಡೆಗೊಳ್ಳಲಿದೆ.

Best Mobiles in India

English summary
Moto E40 and Moto G Pure smartphones have gone official.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+