Motorola:ಹೊಸ ಸ್ಮಾರ್ಟ್‌ಫೋನ್ ಮೂಲಕ ಧೂಳೆಬ್ಬಿಸಿದ ಮೊಟೊರೊಲಾ! ಫೀಚರ್ಸ್ ಹೇಗಿದೆ?
ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾದ ಮೊಟೊರೊಲಾ ಕಂಪೆನಿ ಹೊಸ ಫೋನ್ ಲಾಂಚ್ ಮಾಡಿದೆ. ಇದನ್ನು Moto G Stylus 5G (2023) ಸ್ಮಾರ್ಟ್‌ಫೋನ್ ಎಂದು ಹೆಸರಿಸಲಾಗಿದೆ. ಇದರ 4G ಆವೃತ್ತಿ ಈಗಾಗಲೇ ಬಿಡುಗಡೆಯಾಗಿತ್ತು ಅನ್ನೊದು ಗಮನಿಸಬೇಕಾದ ವಿಚಾರವಾಗಿದೆ.
ಹೌದು, ಮೊಟೊರೊಲಾ G ಸ್ಟೈಲಸ್ 5G (2023) ಫೋನ್ ಲಾಂಚ್ ಆಗಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 Gen 1 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಟೊರೊಲಾ G ಸ್ಟೈಲಸ್ 5G (2023) ಡಿಸ್‌ಪ್ಲೇ ವಿವರ: ಮೊಟೊರೊಲಾ G ಸ್ಟೈಲಸ್ 5G (2023) ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ.
ಮೊಟೊರೊಲಾ G ಸ್ಟೈಲಸ್ 5G (2023) ಪ್ರೊಸೆಸರ್ ಯಾವುದು: ಮೊಟೊರೊಲಾ G ಸ್ಟೈಲಸ್ 5G (2023) ಸ್ಮಾರ್ಟ್‌ಫೋನ್ 4nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 6 Gen 1 5G SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಮೈ UX ಜೊತೆಗೆ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು 2TB ವರೆಗೆ ವಿಸ್ತರಿಸಲು ಅವಕಾಶ ನೀಡಲಿದೆ.

ಮೊಟೊರೊಲಾ G ಸ್ಟೈಲಸ್ 5G (2023) ಕ್ಯಾಮೆರಾ ಸೆಟ್‌ಅಪ್: ಮೊಟೊರೊಲಾ G ಸ್ಟೈಲಸ್ 5G (2023) ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಜೊತೆಗೆ LED ಫ್ಲ್ಯಾಷ್ ಅನ್ನು ಕೂಡ ನೀಡಲಾಗಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.
ಮೊಟೊರೊಲಾ G ಸ್ಟೈಲಸ್ 5G (2023) ಬ್ಯಾಟರಿ ಸಾಮರ್ಥ್ಯ: ಮೊಟೊರೊಲಾ G ಸ್ಟೈಲಸ್ 5G (2023) ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 20W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಆಡಿಯೋ ಜ್ಯಾಕ್, USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ , ಡಾಲ್ಬಿ ಅಟ್ಮಾಸ್-ಬೆಂಬಲಿತ ಸ್ಟಿರಿಯೊ ಸ್ಪೀಕರ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ಅನ್ನು ಹೊಂದಿದೆ.

ಮೊಟೊರೊಲಾ G ಸ್ಟೈಲಸ್ 5G (2023) ಬೆಲೆ ಮತ್ತು ಲಭ್ಯತೆ: ಮೊಟೊರೊಲಾ G ಸ್ಟೈಲಸ್ 5G (2023) ಸ್ಮಾರ್ಟ್‌ಫೋನ್ US ನಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರಿಂದ ಈ ಸ್ಮಾರ್ಟ್‌ಫೋನ್ 6GB + 256GB ರೂಪಾಂತರದ ಆಯ್ಕೆಗೆ $399.99 (ಅಂದಾಜು 33,100ರೂ)ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಯುಎಸ್‌ನಲ್ಲಿ ಇದೇ ಜೂನ್ 2 ರಂದು ಮಾರಾಟಕ್ಕೆ ಬರಲಿದೆ. ಇನ್ನು ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಬಗ್ಗೆ ಯಾವುದೇ ವಿಚಾರ ಬಹಿರಂಗವಾಗಿಲ್ಲ.


Click it and Unblock the Notifications








