ಇಂದು Moto G05 ಲಾಂಚ್; ಬೊಂಬಾಟ್ ಕ್ಯಾಮೆರಾ.. ಪವರ್ ಫುಲ್ ಬ್ಯಾಟರಿ.. ಅಗ್ಗದ ಬೆಲೆ!
ಮೊಟೊರೊಲಾ ಭಾರತದಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡಲಿದೆ. ಇದು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಆಗಿದೆ. ಹೌದು, ಕಂಪನಿಯು ಮೊಟೊ G05 (Moto G05) ಫೋನನ್ನು ಇಂದು (ಜನವರಿ 7) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ರಿಲೀಸ್ ಮಾಡಲಿದೆ. ಕಂಪನಿಯು ಮೊಟೊ G05 ಫೋನಿನ ಮೈಕ್ರೋ ಸೈಟ್ ಅನ್ನು ಲೈವ್ ಮಾಡಿದೆ. ಈ ಮೂಲಕ ಫೋನಿನ ಲುಕ್ ಮತ್ತು ಪ್ರಮುಖ ವೈಶೀಷ್ಟ್ಯಗಳನ್ನು ಹಿರಂಗಪಡಿಸಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಮೊಟೊ G05 ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್ ಹೆಲಿಯೊ G81 ಎಕ್ಸ್‌ಟ್ರೀಮ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಜೊತೆಗೆ 4GB RAM + 64GB ಸ್ಟೋರೇಜ್, 5200mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮೊಟೊ G05 ಫೋನಿನ ಬೆಲೆ 10 ಸಾವಿರ ರೂ.ಗಿಂತ ಕಡಿಮೆ ಇರಲಿದೆ.

ಮೊಟೊ G05 ಫೋನಿನ ವೈಶಿಷ್ಟ್ಯಗಳು (ನಿರೀಕ್ಷಿತ)
ಡಿಸ್ಪ್ಲೇ ವಿವರ
ಮೊಟೊ G05 ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 1612 x 720 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ 90Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಸಹ ಹೊಂದಿದೆ. ಇದು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಹೊಸ ಮೊಟೊ G05 ಮೊಬೈಲ್ ಮೀಡಿಯಾ ಟೆಕ್‌ನ ಹೆಲಿಯೊ G81 ಎಕ್ಸ್‌ಟ್ರೀಮ್ ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಗ್ರಾಫಿಕ್ಸ್‌ಗಾಗಿ, ಆರ್ಮ್ ಮಾಲಿ G52 MC2 ಜಿಪಿಯು ಸಹ ಹೊಂದಿದೆ. ಈ ಮೊಬೈಲ್ ಇತ್ತೀಚಿನ ಹೊಸ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಫ್ಲಿಪ್‌ಕಾರ್ಟ್‌ನಲ್ಲಿನ ಮೈಕ್ರೋ ಸೈಟ್ ಪ್ರಕಾರ, ಮೊಟೊ G05 ಫೋನ್ 4GB RAM ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ನೀವು RAM ಬೂಸ್ಟ್ ತಂತ್ರಜ್ಞಾನದ ಮೂಲಕ 12GB RAM ವರೆಗೆ ಹೆಚ್ಚಿಸಬಹುದು. ಇದು 8GB ವರ್ಚುವಲ್ RAM ಹೊಂದಿದೆ. ಈ ಫೋನ್ 64GB ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ.

ಕ್ಯಾಮೆರಾ ಸೆಟಪ್
ಮುಂಬರುವ ಮೊಟೊ G05 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಈ ಮೊಟೊ G05 ಮೊಬೈಲ್ 5,200mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, ಈ ಫೋನ್ 18W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಈ ಬ್ಯಾಟರಿ ಸಂಪೂರ್ಣ ಚಾರ್ಜ್ ಬಳಿಕ ಎರಡು ದಿನ ಬಾಳಿಕೆ ಬರುತ್ತದೆ.
ಇತರೆ ವೈಶಿಷ್ಟ್ಯಗಳು
ಮೊಟೊ G05 ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಇದರೊಂದಿಗೆ ವಾಟರ್ ಟಚ್ ತಂತ್ರಜ್ಞಾನ ಸಹ ಹೊಂದಿದೆ. ಜೊತೆಗೆ ಡ್ಯುಯಲ್ ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್‌ಗಳು ಲಭ್ಯವಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು ಬ್ಲೂಟೂತ್, ವೈ-ಫೈ, ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








