Home
ಸುದ್ದಿಜಾಲ

Moto: 50MP ಕ್ಯಾಮೆರಾ.. 5200mAh ಬ್ಯಾಟರಿ.. ಅಗ್ಗದ ಬೆಲೆ; ಯಾವ ಫೋನ್?

ಮೊಟೊ ಪ್ರಿಯರಿಗೆ ಎರಡು ಸಿಹಿಸುದ್ದಿ ಇದೆ. ಇದೇ ಡಿಸೆಂಬರ್ 10 ರಂದು Moto G35 5G ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನವೇ ಮತ್ತೊಂದು ಹೊಸ ಫೋನಿನ ಮಾಹಿತಿ ಬಹಿರಂಗವಾಗಿದೆ. ಹೌದು, ಮೊಟೊ G15 (Moto G15) ಸಹ ಶೀಘ್ರದಲ್ಲೇ ಅದ್ದೂರಿಯಾಗಿ ರಿಲೀಸ್ ಆಗಿಲಿದೆ. ಕಂಪನಿಯು ಬಜೆಟ್ ವಿಭಾಗದಲ್ಲಿ ಈ ಫೋನನ್ನು ಪರಿಚಯಿಸುತ್ತಿದೆ. ಆನ್‌ಲೈನ್‌ನಲ್ಲಿ ಮುಂಬರುವ ಫೋನಿನ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಇದು ಸ್ಟೈಲಿಶ್ ಲುಕ್ ಹೊಂದಿದೆ. ಬನ್ನಿ, ಮೊಟೊ G15 ಫೋನಿನ ವಿಶೇಷತೆಗಳನ್ನು ತಿಳಿಯೋಣ.

ಮೊಟೊ G15 ಮೊಬೈಲ್ ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದು Moto G14 ಫೋನಿನ ಉತ್ತರಾಧಿಕಾರಿಯಾಗಿ ಬರಲಿದೆ. ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಫೋನಿನಲ್ಲಿ 6.72 ಇಂಚಿನ ಡಿಸ್ಪ್ಲೇ ಲಭ್ಯವಿರಲಿದೆ. ಜೊತೆಗೆ 4GB RAM + 128GB ಸ್ಟೋರೇಜ್, 5200mAh ಬ್ಯಾಟರಿ ಮತ್ತು 18W ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಶೀಘ್ರವೇ Moto G15 ಲಾಂಚ್; ಅಗ್ಗದೆ ಬೆಲೆ.. ವಿಶೇಷತೆಗಳೇನು?

ಮೊಟೊ G15 ಬೆಲೆ (ನಿರೀಕ್ಷಿತ)

ಕಂಪನಿಯು ಮೊಟೊ G15 ಮೊಬೈಲ್ ಅನ್ನು 10,000 ರೂ.ಗಿಂತ ಬಜೆಟ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮೊಟೊ G14 (Moto G14) ಫೋನನ್ನು 9,999 ರೂ.ಗೆ ಲಾಂಚ್ ಮಾಡಲಾಗಿತ್ತು. ಈ ಕಾರಣದಿಂದ ಭಾರತೀಯ ಮಾರುಕಟ್ಟೆಯಲ್ಲಿ ಮೊಟೊ G15 ಬೆಲೆಯು ಇದೇ ವಿಭಾಗದಲ್ಲಿ ಲಭ್ಯವಿರುವ ಸಾಧ್ಯತೆಯಿದೆ. ಮೊಟೊ G14 ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ನೀವು ಸ್ಕೈ ಬ್ಲೂ ಮತ್ತು ಸ್ಟೀಲ್ ಗ್ರೇ ಬಣ್ಣಗಳಲ್ಲಿ ಖರೀದಿಸಬಹುದು.

ಮೊಟೊ G15 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಮೊಟೊ G15 ಫೋನ್ 6.72 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2400 × 1080 ಪಿಕ್ಸೆಲ್‌ ರೆಸಲ್ಯೂಶನ್, 60Hz ರಿಫ್ರೆಶ್ ದರ ಮತ್ತು 450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿರಲಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ 3 ರಕ್ಷಣೆ ಹೊಂದಿರಲಿದೆ. ಮೊಟೊ G14 ಮೊಬೈಲ್ 6.5 ಇಂಚಿನ ಡಿಸ್ಪ್ಲೇ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಮೊಟೊ G15 ಮೊಬೈಲ್ ಮೀಡಿಯಾ ಟೆಕ್ ಹೆಲಿಯೊ G81 ಎಕ್ಸ್‌ಟ್ರೀಮ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಗ್ರಾಫಿಕ್ಸ್‌ಗಾಗಿ ಈ ಫೋನ್ ಮಾಲಿ G52 ಜಿಪಿಯು ಹೊಂದಿದೆ. ಮೊಟೊ G14 ಸ್ಮಾರ್ಟ್‌ಫೋನ್ ಅನ್ನು 2GHz ಯುನಿಸೊಕ್ T616 ಪ್ರೊಸೆಸರ್‌ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ಓಎಸ್‌ನಲ್ಲಿ ಕೆಲಸ ಮಾಡುತ್ತಿದೆ. ಇದು 4GB RAM ಮತ್ತು 128GB ಸ್ಟೋರೇಜ್‌ ಹೊಂದಿದೆ.

ಕ್ಯಾಮೆರಾ ಸೆಟಪ್

ಮೊಟೊ G15 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ. ಮೊಟೊ G14 ಮೊಬೈಲ್ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದ್ದು, ಉಳಿದ ಕ್ಯಾಮೆರಾಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಬ್ಯಾಟರಿ ಮತ್ತು ಚಾರ್ಜಿಂಗ್

ಈ ಮೊಟೊ G15 ಸ್ಮಾರ್ಟ್‌ಫೋನ್ 5200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ಟರ್ಬೋ ಪವರ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಮೊಟೊ G14 ಮೊಬೈಲ್ 5000mAh ಬ್ಯಾಟರಿ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಮೊಟೊ G15 ಮೊಬೈಲ್ 3.5 ಎಂಎಂ ಜ್ಯಾಕ್ ಮತ್ತು ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿರುತ್ತದೆ. ಈ ಮೊಬೈಲ್ IP54 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ 5.4, ಯುಎಸ್‌ಬಿ ಟೈಪ್ ಸಿ ಪೋರ್ಟ್‌, ಜಿಪಿಎಸ್‌ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿರುತ್ತದೆ.

Best Mobiles in India

English summary
Moto G15 Smartphone launch in india soon: full specifications leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+