Moto: ಹೊಸ ಫೋನ್ ಬರುತ್ತಿದೆ.. ಅಗ್ಗದ ಬೆಲೆ! ಹೇಗಿವೆ ಫೀಚರ್ಸ್
ಮೊಟೊರೊಲಾ (Motorola) ಶೀಘ್ರದಲ್ಲೇ ತನ್ನ ಅಭಿಮಾನಿಗಳಿಗೆ ಭರ್ಜರಿ ಖುಷಿ ಸುದ್ದಿ ನೀಡಲಿದೆ. ಕಂಪನಿಯು ತನ್ನ ಬಹುನಿರೀಕ್ಷಿತ ಮೊಟೊ G15 (Moto G15) ಫೋನನ್ನು ಬಿಡುಗಡೆ ಮಾಡಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಅನ್ನು ಗೀಕ್‌ಬೆಂಚ್‌ನಲ್ಲಿ ಗುರುತಿಸಲಾಗಿದೆ. ಈ ಮೂಲಕ, ಶೀಘ್ರದಲ್ಲೇ ಈ ಫೋನ್ ಲಾಂಚ್ ಆಗುವುದು ಖಚಿತವಾಗಿದೆ. ಕಂಪನಿಯು ಬಜೆಟ್ ವಿಭಾಗದಲ್ಲಿ ಈ ಫೋನನ್ನು ತರುತ್ತಿದೆ. ಇದು, ಉತ್ತಮ ವೈಶಿಷ್ಟ್ಯಗಳೊಂದಿಗೆ, ಅದ್ಭುತ ವಿನ್ಯಾಸವನ್ನು ಹೊಂದಿರಲಿದೆ. ಬನ್ನಿ, ಮುಂಬರುವ ಮೊಟೊ G15 ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ ತಿಳಿಯೋಣ.
ಪ್ರಸ್ತುತ, ಆನ್‌ಲೈನ್‌ನಲ್ಲಿ ಹೊಸ ಮೊಟೊ G15 ಫೋನಿನ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂನೊಂದಿಗೆ ಲಾಂಚ್ ಆಗಲಿದೆ. ಈ ಫೋನ್ ಮಾಲಿ G52 MC2 ಜಿಪಿಯು ಗ್ರಾಫಿಕ್ಸ್ ಕಾರ್ಡ್ ಸೌಲಭ್ಯವನ್ನು ಹೊಂದಿರಲಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್, 50 ಮೆಗಾಪಿಕ್ಸೆಲ್ ಕ್ಯಾಮೆರಾ, 4GB RAM, 6.5 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಮತ್ತು 5000mAh ಬ್ಯಾಟರಿಯೊಂದಿಗೆ ಮೊಟೊ G15 ಫೋನ್ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಮೊಟೊ G15 ಫೋನಿನ ಬೆಲೆ ಎಷ್ಟು?
ಮುಂಬರುವ ಮೊಟೊ G15 ಮೊಬೈಲ್ ಅನ್ನು 10,000 ರೂ.ಗಿಂತ ಬಜೆಟ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಕಂಪನಿಯು ಮೊಟೊ G14 (Moto G14) ಫೋನನ್ನು 9,999 ರೂ.ಗೆ ಲಾಂಚ್ ಮಾಡಿದೆ. ಆದ್ದರಿಂದ, ಭಾರತೀಯ ಮಾರುಕಟ್ಟೆಯಲ್ಲಿ ಮೊಟೊ G15 ಬೆಲೆಯನ್ನು ಇದೇ ವಿಭಾಗದಲ್ಲಿ ಇರಿಸುವ ಸಾಧ್ಯತೆಯಿದೆ. ಮೊಟೊ G14 ಫೋನ್ ಸ್ಕೈ ಬ್ಲೂ ಮತ್ತು ಸ್ಟೀಲ್ ಗ್ರೇ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ.
ಮೊಟೊ G14 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಮೊಟೊ G14 ಫೋನ್ 6.5 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2400 × 1080 ಪಿಕ್ಸೆಲ್ ರೆಸಲ್ಯೂಶನ್, 60Hz ರಿಫ್ರೆಶ್ ದರ, 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು ಪಾಂಡ ಗ್ಲಾಸ್ ರಕ್ಷಣೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಮೊಟೊ G14 ಸ್ಮಾರ್ಟ್‌ಫೋನ್ ಅನ್ನು 2GHz ಯುನಿಸೊಕ್ T616 (UNISOC T616) ಆಕ್ಟಾ ಕೋರ್ 12nm ಪ್ರೊಸೆಸರ್‌ನೊಂದಿಗೆ ಪರಿಚಯಿಸಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ ಮಾಲಿ G57 ಜಿಪಿಯು ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ 4GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಿದೆ. ಹೆಚ್ಚುವರಿ ಮೆಮೊರಿ ವಿಸ್ತರಣೆಗೆ ಬೆಂಬಲವೂ ಇದೆ. ಈ ಫೋನ್ 1TB ವರೆಗೆ ಮೆಮೊರಿ ಕಾರ್ಡ್ ಬಳಸಲು, ಮೈಕ್ರೋ SD ಕಾರ್ಡ್ ಸ್ಲಾಟ್ ಬೆಂಬಲವನ್ನು ಹೊಂದಿದೆ.

ಕ್ಯಾಮೆರಾ ಸೆಟಪ್
ಮೊಟೊ G14 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಲಭ್ಯವಿದೆ. ಈ ಫೋನಿನಲ್ಲಿ ಅದ್ಭುತ ಫೋಟೋಗಳನ್ನು ಸೆರೆಹಿಡಿಯಬಹುದು. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಫೋನ್ 8MP ಕ್ಯಾಮೆರಾದೊಂದಿಗೆ ಬರುತ್ತದೆ. ಇದಲ್ಲದೆ, ಇದು ಎಲ್ಇಡಿ ಫ್ಲ್ಯಾಷ್ ಮತ್ತು ವಿವಿಧ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಈ ಮೊಟೊ G14 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ದೀರ್ಘ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 20W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ
ಇತರೆ ವೈಶಿಷ್ಟ್ಯಗಳು
ಮೊಟೊ G14 ಮೊಬೈಲ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoltE, ವೈ ಫೈ 802.ac, ಬ್ಲೂಟೂತ್ 5.0, ಯುಎಸ್‌ಬಿ ಟೈಪ್ ಸಿ ಪೋರ್ಟ್, ಜಿಪಿಎಸ್ ಸೇರಿದಂತೆ ಹಲವು ವೈಶಿಷ್ಟ್ಯಗನ್ನು ಹೊಂದಿದೆ.


Click it and Unblock the Notifications








