Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಟ್ಟ ಮೋಟೋ g24 ಪವರ್ ಸ್ಮಾರ್ಟ್‌ಫೋನ್‌: ಆರಂಭಿಕ ಬೆಲೆ 8,999ರೂ ಮಾತ್ರ!

ಬಹು ನಿರೀಕ್ಷಿತ ಮೋಟೋ g24 ಪವರ್ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಬಜೆಟ್‌ ಸ್ನೇಹಿ ಆಗಿದ್ದು, ಅತ್ಯಾಕರ್ಷಕ ಫೀಚರ್ಸ್‌ಗಳೊಂದಿಗೆ ಎಂಟ್ರಿ ನೀಡಿದೆ. ಇದು ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 6000mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಹೌದು, ಮೊಟೊರೊಲಾ ಕಂಪೆನಿ ಭಾರತದಲ್ಲಿ ಹೊಸ ಮೋಟೋ g24 ಪವರ್ (moto g24 Power) ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇನ್ನು ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಟ್ಟ ಮೋಟೋ g24 ಪವರ್ ಫೋನ್‌: ಆರಂಭಿಕ ಬೆಲೆ 8,999ರೂ ಮಾತ್ರ!

ಮೋಟೋ g24 ಪವರ್ ಡಿಸ್‌ಪ್ಲೇ ರಚನೆ
ಮೋಟೋ g24 ಪವರ್ ಸ್ಮಾರ್ಟ್‌ಫೋನ್‌ 6.65 ಇಂಚಿನ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಆಯ್ಕೆಯನ್ನು ಪಡೆದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದ್ದು, 90Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಜೊತೆಗೆ ಡಿಸ್‌ಪ್ಲೇ 500 ನಿಟ್ಸ್‌ ವರೆಗೆ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ.

ಮೋಟೋ g24 ಪವರ್ ಪ್ರೊಸೆಸರ್‌ ಯಾವುದು?
ಮೋಟೋ g24 ಪವರ್ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ರನ್‌ ಆಗಲಿದೆ. ಇದಲ್ಲದೆ ಕಂಪನಿಯ ಫೋನ್‌ಗೆ 3 ವರ್ಷಗಳ ಭದ್ರತಾ ನವೀಕರಣಗಳನ್ನು ದೃಢಪಡಿಸಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಜೊತೆಗೆ 8GB ವರ್ಚುವಲ್ RAM ಅನ್ನು ಸಹ ವಿಸ್ತರಿಸುವ ಆಯ್ಕೆ ನೀಡಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಮೋಟೋ g24 ಪವರ್ ಫೋನ್‌: ಆರಂಭಿಕ ಬೆಲೆ 8,999ರೂ ಮಾತ್ರ!

ಮೋಟೋ g24 ಪವರ್ ಕ್ಯಾಮೆರಾ ಸೆಟಪ್‌
ಮೋಟೋ g24 ಪವರ್ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಮೋಟೋ g24 ಪವರ್ ಬ್ಯಾಟರಿ ಮತ್ತು ಇತರೆ
ಮೋಟೋ g24 ಪವರ್ ಸ್ಮಾರ್ಟ್‌ಫೋನ್‌ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ ಬರಲಿದ್ದು, ಬಾಕ್ಸ್‌ನಲ್ಲಿ 33W ಚಾರ್ಜರ್‌ನೊಂದಿಗೆ ಬರುತ್ತದೆ. ಈ ಫೋನ್‌ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಹಾಗೂ 3.5mm ಆಡಿಯೋ ಜಾಕ್, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, FM ರೇಡಿಯೋ ಅನ್ನು ಬೆಂಬಲಿಸಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಮೋಟೋ g24 ಪವರ್ ಫೋನ್‌: ಆರಂಭಿಕ ಬೆಲೆ 8,999ರೂ ಮಾತ್ರ!

ಮೋಟೋ g24 ಪವರ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಮೋಟೋ g24 ಪವರ್ ಸ್ಮಾರ್ಟ್‌ಫೋನ್‌ 4GB RAM + 128GB ಮಾದರಿಯ ಆಯ್ಕೆಗೆ 8,999ರೂ ಬೆಲೆಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಫೋನ್‌ 8GB RAM + 128GB ಮಾದರಿಯ ಆಯ್ಕೆಯು 9,999ರೂ ಬೆಲೆಯಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 750ರೂ ಹೆಚ್ಚುವರಿ ರಿಯಾಯಿತಿ ಕೂಡ ಸಿಗಲಿದೆ. ಇನ್ನು ಸ್ಮಾರ್ಟ್‌ಫೋನ್‌ ಗ್ಲೇಸಿಯರ್ ಬ್ಲೂ ಮತ್ತು ಇಂಕ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
moto g24 Power with 6000mAh battery launched in India: Price starting at Rs 8999
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+