ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಮೋಟೋ G51 5G ಸ್ಮಾರ್ಟ್‌ಫೋನ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳಲ್ಲಿ ಮೊಟೊರೊಲಾ ಕಂಪೆನಿ ಕೂಡ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಹೊಸ ಮೋಟೋ G51 5G ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಮೋಟೋ G51 5G ಅನ್ನು 'ಸೈಪ್ರಸ್ 5G' ಎಂದು ಕೋಡ್‌ನೇಮ್‌ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ನವೆಂಬರ್‌ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ಹೊಸ ಸ್ಮಾರ್ಟ್‌ಫೋನ್‌ ಮೋಟೋ G51 5G ಫೀಚರ್ಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ ಮುಂದಿನ ತಿಂಗಳು ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ವಿಶೇಷತೆ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೋಟೋ G51 5G

ಮೋಟೋ G51 5G ಸ್ಮಾರ್ಟ್‌ಫೋನ್‌ ಫುಲ್-ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ ಎಂದು ಹೇಳಲಾಗಿದೆ. ಆದರೆ ಡಿಸ್‌ಪ್ಲೇ ಗಾತ್ರ ಮತ್ತು ರಿಫ್ರೆಶ್ ರೇಟ್‌ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು 'ಸೈಪ್ರಸ್ 5G' ಎಂಬ ಕೋಡ್‌ನೇಮ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ವರದಿಯ ಪ್ರಕಾರ ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G SoC ಪ್ರೊಸೆಸರ್‌ ಹೊಂದಿರಲಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಹೊಂದಿರಲಿದೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದರಿಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸೆನ್ಸರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಒಳಗೊಂಡಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದೆ. ಇದರ ಬ್ಯಾಟರಿ ಹಾಗೂ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮೊಟೊರೊಲಾ

ಇದಲ್ಲದೆ ಮೊಟೊರೊಲಾ ಸ್ಮಾರ್ಟ್‌ಫೋನ್‌ ಅನ್ನು ಯುಎಸ್ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ಪ್ರಮಾಣೀಕರಣದೊಂದಿಗೆ ಗುರುತಿಸಲ್ಪಟ್ಟಿದೆ. ಎಫ್‌ಸಿಸಿ ಪಟ್ಟಿಯಲ್ಲಿ ಮೋಟೋರೋಲಾ ಸ್ಮಾರ್ಟ್‌ಫೋನ್ ಅನ್ನು XT2169-1 ಮಾಡೆಲ್‌ ನಂಬರ್‌ ಮೂಲಕ ಗುರುತಿಸಲಾಗಿದೆ. ಇದನ್ನು ಮೋಟೋ G71 5G ಎಂದು ನಂಬಲಾಗಿದೆ. ಈ ಸ್ಮಾರ್ಟ್‌ಫೋನ್ 5G ಮತ್ತು NFC ಸಂಪರ್ಕವನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್‌ ಎಂಸಿ 300 ಸರಣಿ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್‌ ಅನ್ನು "ಕಾರ್ಫು" ಎಂಬ ಕೋಡ್‌ನೇಮ್‌ನಿಂದ ಹೆಸರಿಸಲಾಗಿದೆ.

ಮೊಟೊರೊಲಾ

ಇನ್ನು ಮೊಟೊರೊಲಾ ಕಂಪೆನಿ ಇತ್ತೀಚಿಗಷ್ಟೇ ಭಾರತದಲ್ಲಿ ಹೊಸ ಮೋಟೋ E40 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಮ್ಯಾಕ್ಸ್ ವಿಷನ್ ಹೆಚ್‌ಡಿ+ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಯೂನಿಸೋಕ್ T700 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್‌ ಬಳಸಿ ಸಂಗ್ರಹ ಸಾಮರ್ಥ್ಯವನ್ನು 1TB ವರೆಗೆ ವಿಸ್ತರಿಸಬಹುದಾಗಿದೆ.ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಮೋಟೋ E40 ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭಾರತದಲ್ಲಿ ಮೊಟೊರೊಲಾ ಮೋಟೋ E40 ಸ್ಮಾರ್ಟ್‌ಫೋನ್‌ 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 9,499.ರೂ ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಕಾರ್ಬನ್ ಗ್ರೇ ಮತ್ತು ಪಿಂಕ್ ಕ್ಲೇ ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

Read more about:
English summary
Motorola is expected to soon introduce another smartphone in its G lineup, called Motorola Moto G51.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X