Home
ಸುದ್ದಿಜಾಲ

ಮೊಟೊ G6 ಬಗ್ಗೆ ಮಾಹಿತಿ ಬಿಚ್ಚಿಟ್ಟ ಅಮೆಜಾನ್ ವೆಬ್ ಸೈಟ್..!

By Lekhaka

ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿರುವ, ಮೊಟೊರೊಲಾ ಬಿಡುಗಡೆ ಮಾಡಲಿರುವ ಮೊಟೊ G6 ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಮತ್ತೊಂದು ಮಾಹಿತಿಯು ಲಭ್ಯವಾಗಿದ್ದು, ಮೊಟೊ G6 ಸ್ಮಾರ್ಟ್ ಫೋನ್ ಅಮೆಜಾನ್ ನಲ್ಲಿ ಮಾರಾಟವಾಗಲಿದ್ದು, ಅಲ್ಲಿಯೇ ಮೊಟೊ G6 ವಿಶೇಷತೆಯ ಕುರಿತ ಮಾಹಿತಿಗಳು ಲೀಕ್ ಆಗಿದೆ.

ಮೊಟೊ G6 ಬಗ್ಗೆ ಮಾಹಿತಿ ಬಿಚ್ಚಿಟ್ಟ ಅಮೆಜಾನ್ ವೆಬ್ ಸೈಟ್..!


ಮೊಟೊ G6 ವಿಶೇಷತೆ ಕುರಿತ ಮಾಹಿತಿಯೂ ಕೆನೆಡಾದ ಅಮೆಜಾನ್ ವೆಬ್ ಸೈಟಿನಲ್ಲಿ ಸೋರಿಕೆಯಾಗಿದೆ. ಏಪ್ರಿಲ್ 19ರಂದು ಮೊಟೊ G6 ಬ್ರೆಜಿಲ್ ನಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯೂ ತಿಳಿದುಬಂದಿದೆ. ಮೊಟೊ G6 ಸ್ಮಾರ್ಟ್ ಫೋನಿನಲ್ಲಿ 5.7 ಇಂಚಿನ FHD+ ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ.

ಫುಲ್ ಸ್ಕ್ರಿನ್ ಡಿಸ್ ಪ್ಲೇ:

ಮೊಟೊ G6 ಸ್ಮಾರ್ಟ್ ಫೋನಿನಲ್ಲಿ 18:9 ಅನುಪಾತದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಅಲ್ಲದೇ 3D ಗ್ಲಾಸ್ ವಿನ್ಯಾಸವನ್ನು ಮಾಡಲಾಗಿದೆ. ಅಲ್ಲದೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಅಲ್ಲದೇ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ನೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಎರಡು ಆವೃತ್ತಿ;

ಮೊಟೊ G6 ಸ್ಮಾರ್ಟ್ ಪೋನ್ 3GB RAM ಮತ್ತು 32GB ಆವೃತ್ತಿಯೊಂದಿಗೆ ಕಾಣಿಸಿಕೊಳ್ಳಲಿದ್ದು, ಇದರೊಂದಿಗೆ 4GB RAM ಮತ್ತು 64 GB ಆವೃತ್ತಿಯ ಮತ್ತೊಂದು ಫೋನ್ ಸಹ ದೊರೆಯಲಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಮೊಟೊ G6 ಸ್ಮಾರ್ಟ್ ಪೋನ್ ಹಿಂಭಾಗದಲ್ಲಿ 12 MP + 5 MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ 3000mAh ಬ್ಯಾಟರಿಯನ್ನು ನೀಡಲಾಗಿದೆ.

ಬೆಲೆ:

ಮೊಟೊ G6 ಸ್ಮಾರ್ಟ್ ಪೋನ್ ಬೆಲೆಯೂ ರೂ.16,200 ಇರಲಿದೆ ಎಂದು ಅಂದಾಜು ಮಾಡಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಇನಷ್ಟು ಕಡಿಮೆ ಇರುವ ಸಾಧ್ಯತೆ ಇದೆ.

Source

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
Best Mobiles in India

English summary
Motorola Moto G6 has been spotted on Amazon Canada's website ahead of the launch. The website listing doesn't reveal any images or pictures of the smartphone, but it does reveal some of the key specs of Moto G6. According to Amazon Canada's listing, the Moto G6 has a 5.7-inch full HD+ display with the screen resolution of 1080x2160 pixels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+