ಭಾರತದ ಮಾರುಕಟ್ಟೆಯಲ್ಲಿ 'ಮೊಟೊ ಜಿ6 ಪ್ಲೇ' ಬಿಡುಗಡೆ ದಿನಾಂಕ ಫಿಕ್ಸ್!!

|

ಮೊಟೊ ಜಿ5 ಸರಣಿ ಸ್ಮಾರ್ಟ್‌ಫೋನ್‌ಗಳ ನಂತರ ಭಾರೀ ಕುತೋಹಲ ಹುಟ್ಟಿಸಿರುವ ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೆ ಕಾಲಿಡಲಿವೆ. ಮೊಟೊರೊಲಾ ಕಂಪೆನಿ ಅಧಿಕೃತವಾಗಿ ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಮಾಹಿತಿ ನೀಡಿದೆ.

ಲೆನೊವೊ ಒಡೆತನದ ಮೊಟೊರಾಲಾ ಕಂಪೆನಿ ತನ್ನ ಇಂಡಿಯನ್ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ, ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಶೀಘ್ರವೇ ಕಾಲಿಡಲಿವೆ ಎಂದು ಹೇಳಿದೆ. 14 ಸೆಕೆಂಡುಗಳ ವಿಡಿಯೋವನ್ನು ಬಿಡುಗಡೆ ಮಾಡಿರುವ ಮೊಟೊ ಕಂಪೆನಿ ಮೋಟೋ ಜಿ6 ಮತ್ತು ಮೋಟೋ ಜಿ 6 ಪ್ಲೇಯನ್ನು ದೇಶಕ್ಕೆ ಆಗಮಿಸುವ ಬಗ್ಗೆ ಖಚಿತಪಡಿಸಿದೆ.

 ಭಾರತದ ಮಾರುಕಟ್ಟೆಯಲ್ಲಿ 'ಮೊಟೊ ಜಿ6 ಪ್ಲೇ' ಬಿಡುಗಡೆ ದಿನಾಂಕ ಫಿಕ್ಸ್!!

ಈಗಾಗಲೇ ಬ್ರೆಜಿಲ್‌ನಲ್ಲಿ ಬಿಡುಗಡೆಯಾಗಿರುವ ಮೋಟೋ ಜಿ6 ಬೆಲೆ $ 249 (ಸರಿಸುಮಾರು ರೂ. 16,900) ನಷ್ಟಿದೆ, ಮೋಟೋ ಜಿ6 ಪ್ಲೇ $ 199 (ಸರಿಸುಮಾರು ರೂ 13,500) ಬೆಲೆಯಲ್ಲಿ ಲಭ್ಯವಿದೆ. ಹಾಗಾದರೆ, ಭಾರತಕ್ಕೆ ಕಾಲಿಡುತ್ತಿರುವ ಮೋಟೋ ಜಿ6 ಸರಣಿಯ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಮೊಟೊ ಜಿ6

ಮೊಟೊ ಜಿ6

ಮೊಟೊ ಜಿ6 ಸ್ಮಾರ್ಟ್‌ಫೋನ್ 5.7 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 450 ಚಿಪ್ಸೆಟ್, 3 ಜಿಬಿ/ ಜಿಬಿ ರಾಮ್ ಮತ್ತು 32 ಜಿಬಿ / 64 ಜಿಬಿ ಆಂತರಿಕ ಮೆಮೊರಿ, 12 ಎಂಪಿ + 5 ಎಂಪಿ ರಿಯರ್ ಡ್ಯುಯಲ್ ಕ್ಯಾಮೆರಾಗಳು 16 ಎಂಪಿ ಸೆಲ್ಫಿ ಕ್ಯಾಮೆರಾ ಹಾಗೂ 3,000 mAh ಬ್ಯಾಟರಿ ಫೀಚರ್ಸ್ ಈ ಫೋನಿನಲ್ಲಿರಲಿವೆ.

ಮೊಟೊ ಜಿ6 ಪ್ಲೇ

ಮೊಟೊ ಜಿ6 ಪ್ಲೇ

ಮೊಟೊ ಜಿ6 ಪ್ಲೇ 18: 9 ಆಕಾರ ಅನುಪಾತದ 5.7 ಇಂಚಿನ ಹೆಚ್‌ಡಿ+ (1440x720p) ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ. 4000mAh ದೊಡ್ಡ ಬ್ಯಾಟರಿ, 2 ಜಿಬಿ / 3 ಜಿಬಿ RAM, 16 ಜಿಬಿ / 32 ಜಿಬಿ ಶೇಖರಣಾ ಹಾಗೂ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 427 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಮೊಟೊ ಜಿ6 ಪ್ಲೇ ಸ್ಮಾರ್ಟ್‌ಫೋನ್ ಹೊಂದಿರಲಿದೆ ಎಂದು ಹೇಳಲಾಗಿದೆ.

ಮೊಟೊ ಜಿ6 ಪ್ಲಸ್

ಮೊಟೊ ಜಿ6 ಪ್ಲಸ್

ಮೋಟೋ ಜಿ 6 ಪ್ಲಸ್ 18: 9 ಆಕಾರ ಅನುಪಾತದ 5.93-ಇಂಚಿನ ಪೂರ್ಣ ಹೆಚ್‌ಡಿ+ (2160x1080p) ಡಿಸ್‌ಪ್ಲೇ ಹೊಂದಿರಲಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 630 ಪ್ರೊಸೆಸರ್, 3 ಜಿಬಿ / 4 ಜಿಬಿ / 6 ಜಿಬಿ ರಾಮ್ ಮತ್ತು 32 ಜಿಬಿ / 64 ಜಿಬಿ ಸ್ಟೋರೇಜ್, ಡ್ಯುಯಲ್ 12 ಎಂಪಿ + 5 ಎಂಪಿ ಹಾಗೂ 16 ಎಂಪಿ ಫ್ರಂಟ್ ಕ್ಯಾಮೆರಾ ಮತ್ತು 3,200 mAh ಬ್ಯಾಟರಿಯನ್ನು ಹೊಂದಿರಲಿದೆ.

How to Send a WhatsApp Message Without Saving the Contact in Your Phone - GIZBOT KANNADA
ಬಿಡುಗಡೆ ದಿನಾಂಕ ಪ್ರಕಟವಾಗಿಲ್ಲ.!!

ಬಿಡುಗಡೆ ದಿನಾಂಕ ಪ್ರಕಟವಾಗಿಲ್ಲ.!!

ಭಾರತದಲ್ಲಿ ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಮೊಟೊ ಕಂಪೆನಿ ತಿಳಿಸಿದರೂ ಕೂಡ ಮೊಬೈಲ್‌ಗಳ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ, ಚೀನಾದಲ್ಲಿ ಮೇ 17 ರಂದು ಮೊಟೊ ಜಿ6 ಅನ್ನು ಪ್ರಾರಂಭಿಸಲು ಕಂಪೆನಿ ಸಿದ್ದವಾಗಿರುವುದರಿಂದ ಭಾರತದಲ್ಲಿಯೂ ಬಹು ಬೇಗ ಮೊಬೈಲ್ ಲಾಂಚ್ ಆಗುವ ನಿರೀಕ್ಷೆ ಹೊಂದಬಹುದು.

Best Mobiles in India

Read more about:
English summary
Moto G6 and Moto G6 Play India launch has been teased officially. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X