ಅಮೆಜಾನ್ ನಲ್ಲಿ ಮಾರಾಟವಾಗಲಿದೆ ಮೊಟೊ G6 ಸ್ಮಾರ್ಟ್ ಫೋನ್ ಗಳು..!
ಮೊಟೊರೊಲಾ ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಮೊಟೊ G ಸರಣಿಯ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದ್ದು, ಇದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿದೆ. ಮುಂದಿನ ತಿಂಗಳಿನಲ್ಲಿ ಮೊಟೊ G6, G6 ಪ್ಲಸ್ ಮತ್ತು G6 ಪ್ಲೇ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಲಿದ್ದು, ಈ ಮೂರು ಸ್ಮಾರ್ಟ್ ಫೊನ್ ಗಳು ಆನ್ ಲೈನಿನಲ್ಲಿ ದೊರೆಯಲಿದ್ದು, ಅದುವೇ ಅಮೆಜಾನ್ ಎಕ್ಸ್ ಕ್ಲೂಸಿವ್ ಆಗಿ ಮಾರಾಟವಾಗಲಿದೆ ಎನ್ನಲಾಗಿದೆ.

ಈಗಾಗಲೇ ಮೊಟೊ G ಸರಣಿಯ ಸ್ಮಾರ್ಟ್ ಫೋನ್ ಗಳು ಅಮೆಜಾನ್ ನಲ್ಲಿ ಪ್ರೀ ಬುಂಕಿಗ್ ದೊರೆಯಲಿರುವ ಫೋಟೋಗಳು ಲೀಕ್ ಆಗಿದ್ದು, ಈ ಸ್ಮಾರ್ಟ್ ಫೋನ್ ಗಳಲ್ಲಿ ದೊಡ ಸ್ಕ್ರಿನ್ ಸೇರಿದಂತೆ ದೊಡ್ಡ ಬ್ಯಾಟರಿ ಮತ್ತು ಉತ್ತಮ ಆಯ್ಕೆಗಳನ್ನು ಕಾಣಬಹುದಾಗಿದೆ. ಇದಲ್ಲದೇ ಮೊದಲ ಬಾರಿಗೆ ಮೊಟೊ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅವಡಿಸಲು ಮುಂದಾಗಿದೆ.
ಮೊಟೊ G ಸರಣಿಯ ಸ್ಮಾರ್ಟ್ ಫೋನ್ ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಕಾಣಬಹುದಾಗಿದ್ದು, ಇದರೊಂದಿಗೆ ಡ್ಯುಯಲ್ LED ಫ್ಲಾಷ್ ಲೈಟ್ ಅನ್ನು ಸಹ ನೀಡಲಾಗಿದೆ. ಇದರೊಂದಿಗೆ 2.5D ಕರ್ವಡ್ ಗ್ಲಾಸ್ ಅನ್ನು ಡಿಸ್ಪ್ ಪ್ಲೇ ಮೇಲೆ ಅಳಡಿಸಲಾಗಿದೆ. ಜೊತೆಗೆ 3000mAh ಬ್ಯಾಟರಿಯನ್ನು ಈ ಸ್ಮಾರ್ಟ್ ಫೋನ್ ಗಳಲ್ಲಿ ನೋಡಬಹುದಾಗಿದೆ.
ಇದಲ್ಲದೇ ಸದ್ಯ ಲಬ್ಯವಾಗಿರುವ ಮಾಹಿತಿಯ ಪ್ರಕಾರ 5.7 ಇಂಚಿನ FHD + ಗುಣಮಟ್ಟದ ಡಿಸ್ ಪ್ಲೇಯನ್ನು ಈ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದ್ದು, 18:9 ಅನುಪಾತದಿಂದ ಕೂಡಿರಲಿದೆ. ಅಲ್ಲದೇ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನುವ ಮಾಹಿತಿಯೂ ಲಬ್ಯವಾಗಿದೆ.
ಮೊಟೊ G6 ಸ್ಮಾರ್ಟ್ ಫೋನಿನಲ್ಲಿ 12MP ಹಿಂಬದಿ ಕ್ಯಾಮೆರಾವನ್ನು ಹಾಗೂ 5MP ಮುಂಬದಿ ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಇದು ಶಕ್ತವಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ಸ್ಮಾರ್ಟ್ ಪೋನ್ ಬೆಲೆ ರೂ.22000ವಾಗಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಕೊಂಚ ಕಡಿಮೆ ಇರಲಿದೆ.


Click it and Unblock the Notifications








