ಫೆಬ್ರವರಿ 7 ಕ್ಕೆ ಬಿಡುಗಡೆಗೊಳ್ಳಲಿದೆ ಮೊಟೋ ಜಿ7,ಜಿ7 ಪ್ಲಸ್, ಜಿ7 ಪ್ಲೇ ಮತ್ತು ಜಿ7 ಪವರ್
ಮೋಟೊ ಜಿ7 ಸರಣಿಯ ಬಗ್ಗೆ ಸಾಕಷ್ಟು ಮಾತುಕತೆಗಳು, ಸುದ್ದಿಗಳು ಈಗಾಗಲೇ ಹರಿದಾಡಿವೆ. ಜಿ7 ಸರಣಿಯ ಅಡಿಯಲ್ಲಿ ನಾಲ್ಕು ಫೋನ್ ಗಳನ್ನು ಲೆನೊವಾ ಮಾಲೀಕತ್ವದ ಮೊಟೊರೋಲಾ ಸಂಸ್ಥೆ ಬಿಡುಗಡೆಗೊಳಿಸುತ್ತದೆ ಎಂದು ಈಗಾಗಲೇ ಸುದ್ದಿಯಾಗಿತ್ತು. ಅವುಗಳೆಂದರೆ ಮೊಟೋ ಜಿ7, ಮೋಟೋ ಜಿ7 ಪವರ್, ಜಿ7 ಪ್ಲೇ, ಮತ್ತು ಜಿ7 ಪ್ಲಸ್.

ಹಾಗಾದ್ರೆ ಈ ಫೋನ್ ಗಳು ಯಾವಾಗ ಬಿಡುಗಡೆಗೊಳ್ಳುತ್ತದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬ್ರೆಝಿಲ್ ನಲ್ಲಿ ಫೆಬ್ರವರಿ 7 ರಂದು ನಡೆಯುವ ಕಾರ್ಯಕ್ರಮದಲ್ಲಿ ಮೊಟೋ ಜಿ7 ಸರಣಿಯ ಫೋನ್ ಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಬಗ್ಗೆ ಈಗಾಗಲೇ ಮಾಧ್ಯಮ ಆಮಂತ್ರಣ ಸಿಕ್ಕಿದೆ.

ಮಾರ್ಚ್ ನಲ್ಲಿ ಬಿಡುಗಡೆ:
ಅಧಿಕೃತವಾಗಿ ಇದರ ಪ್ರಕಟಣೆ ಸಿಗಬೇಕಿದೆ. ಆದರೆ ಈಗಾಗಲೇ ಸಿಕ್ಕಿರುವ ಆಮಂತ್ರಣವು ಫೋನಿನ ಅಧಿಕೃತ ಬಿಡುಗಡೆಯ ಸೂಚನೆಯಾಗಿದೆ. ಇನ್ನೊಂದು ಸುದ್ದಿಯ ಪ್ರಕಾರ ಮಾರ್ಚ್ ಒಳಗೆ ಮೋಟೋ ಜಿ7 ಸರಣಿ ಫೋನ್ ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಆದರೆ ಈ ಬಗ್ಗೆ ಮೊಟೊರೋಲಾ ಇಂಡಿಯಾ ಕನ್ಫರ್ಮ್ ಮಾಡಬೇಕಿದೆ.

ಆಮಂತ್ರಣ:
ಬೇಸರದ ವಿಚಾರವೇನೆಂದರೆ ಈ ಆಮಂತ್ರಣದಲ್ಲಿ ಮುಂಬರುವ ಮೊಟೋ ಫೋನ್ ಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.ಆದರೆ ರೆಂಡರ್ ಗಳು ಮತ್ತು ಈಗಾಗಲೇ ಲೀಕ್ ಆಗಿರುವ ಮಾಹಿತಿಗಳು ಮೊಟೋ ಜಿ7 ಸರಣಿ ಫೋನ್ ಗಳ ಬಗೆಗಿನ ಮಾಹಿತಿಯನ್ನು ಅಂತರ್ಜಾಲದಲ್ಲಿ ಆಗಾಗ ನೀಡುತ್ತಲೇ ಇದೆ. ಕೆಲವು ಹೊಸ ರೆಂಡರ್ ಗಳು ಇದೀಗ ಮತ್ತೊಂದಿಷ್ಟು ಈ ಫೋನ್ ಗಳ ಎಲ್ಲಾ ಆಂಗಲ್ ನ ಫೋಟೋವನ್ನು ಬಿಡುಗಡೆಗೊಳಿಸಿದ್ದಾರೆ.

ಆಂಡ್ರಾಯ್ಡ್ ಪ್ಯೂರ್ ವೆಬ್ ನೀಡುವ ಮಾಹಿತಿ:
ಆಂಡ್ರಾಯ್ಡ್ ಪ್ಯೂರ್ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಮೊಟೋ ಜಿ7 ಫೋನ್ ಗಳು ವಾಟರ್ ಡ್ರಾಪ್ ನಾಚ್ ನ್ನು ಹೊಂದಿರುತ್ತದೆ. ಬಹಳ ಸ್ಲಿಮ್ ಆಗಿರ ಬೆಝಲ್ ಹೊಂದಿದ್ದು ಮೊಟೋ ಜಿ6 ಗಿಂತ ಇದು ತೆಳುವಾಗಿರುತ್ತದೆ. ಇತರೆ ಮೂರು ಬದಿಗಳಿಗಿಂತ ಚಿನ್ ಭಾಗವು ಹೆಚ್ಚು ತೆಳುವಾಗಿರುತ್ತದೆ. ಚಿನ್ ನಲ್ಲಿ ಮೊಟೋರೊಲಾ ಬ್ರ್ಯಾಂಡ್ ನ ಲೋಗೋ ಕೂಡ ಇರುತ್ತದೆ. ಒಂದು ಸಿಹಿಸುದ್ದಿ ಏನೆಂದರೆ ಮೊಟೊರೋಲಾ 3.5ಎಂಎಂ ನ ಹೆಡ್ ಫೋನ್ ಜ್ಯಾಕ್ ನ್ನು ಇತರೆ ಕಂಪೆನಿಗಳು ಇರಿಸುವಂತೆ ಇಟ್ಟಿದೆ.
ಹಿಂಭಾಗದ ಪೆನಲ್ ನಲ್ಲಿ ಮೊಟೋ ಜಿ7 ಡುಯಲ್ ಕ್ಯಾಮರಾ ಸೆಟ್ ಅಪ್ ಜೊತೆಗೆ ಫ್ಲ್ಯಾಶ್ ಇರಲಿದೆ. ಕಡಿಮೆ ಬೆಳಕಿನ ಪ್ರದೇಶದಲ್ಲಿ ಉತ್ತಮ ಫೋಟೋಗ್ರಫಿಗೆ ಇದು ನೆರವು ನೀಡುತ್ತದೆ. ಫ್ಲ್ಯಾಶ್ ಸರ್ಕ್ಯುಲರ್ ಸೆಕ್ಷನ್ ನ ಒಳಗೇ ಜೋಡಿಸಲಾಗಿದೆ.ಲಂಬವಾದ ಫ್ಯಾಷನ್ ನಲ್ಲಿ ಫ್ಲ್ಯಾಶ್ ಜೊತೆಗೆ ಎರಡು ಕ್ಯಾಮರಾವು ಸರ್ಕ್ಯುಲರ್ ನ ಒಳಗೆ ಇರುತ್ತದೆ. ಡುಯಲ್ ಕ್ಯಾಮರಾ ಸೆಟ್ ಅಪ್ ನ ಕೆಳಗೆ ಫಿಂಗರ್ ಪ್ರಿಂಟ್ ಸೆನ್ಸರ್ ಇರಲಿದೆ. ಇದು ಈಗಲೂ ಫಿಸಿಕಲ್ ಫಿಂಗರ್ ಪ್ರಿಂಟ್ ಸೆನ್ಸರ್ ನ್ನೇ ನೀಡುತ್ತಿದೆ.
ಮೋಟೊ ಜಿ7 ನ ವೈಶಿಷ್ಟ್ಯತೆಗಳು :
ಫೋಟೋಗಳ ಜೊತೆಗೆ ರೆಂಡರ್ ಇನ್ನಿತರೆ ಕೆಲವು ವೈಶಿಷ್ಟ್ಯತೆಗಳ ಬಗ್ಗೆ ಕೂಡ ತಿಳಿಸಿದ್ದಾರೆ. ಈಗಾಗಲೇ ಬಹಿರಂಗಗೊಂಡಿರುವ ಮಾಹಿತಿಯ ಅನುಸಾರ ಮೊಟೋ ಜಿ7 ಸರಣಿ ಫೋನ್ 6.24-ಇಂಚಿನ ಫುಲ್ HD+ ಡಿಸ್ಪ್ಲೇ ಮತ್ತು ಸ್ನ್ಯಾಪ್ ಡ್ರ್ಯಾಗನ್ 632 ಪ್ರೊಸೆಸರ್ ನ್ನು ಹೊಂದಿದ್ದು ಅದು 1.8GHz ಆಗಿರುತ್ತದೆ. ಫೋನ್ ನಲ್ಲಿ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ನಲ್ಲಿ ಇದು ರನ್ ಆಗಲಿದೆ.
ಕ್ಯಾಮರಾ ವ್ಯವಸ್ಥೆ ಮತ್ತು ಇತರೆ ವೈಶಿಷ್ಟ್ಯತೆಗಳು:
ಎರಡು ಕ್ಯಾಮರಾವನ್ನು ಹೊಂದಿರುವ ಇದು ಹಿಂಭಾಗದ ಪೆನಲ್ ನಲ್ಲಿ ಎರಡು ಮತ್ತು ಮುಂಭಾಗದಲ್ಲಿ ಒಂದು ಎನ್ನಲಾಗಿದೆ.ಹಿಂಭಾಗದ ಪ್ರೈಮರಿ ಸೆನ್ಸರ್ 12MP ಜೊತೆಗೆ f/1.8 ಅಪರ್ಚರ್ ನ್ನು ಹೊಂದಿದೆ ಮತ್ತು ಸೆಕೆಂಡರಿ ಸೆನ್ಸರ್ 5MP ಜೊತೆಗೆ f/2.2 ಅಪರ್ಚರ್ ನ್ನು ಹೊಂದಿದೆ. ಮುಂಭಾಗದಲ್ಲಿ 8MP ಸೆಲ್ಫೀ ಶೂಟರ್ ಇದ್ದು f/2.2 ಅಪರ್ಚರ್ ಹೊಂದಿರುತ್ತದೆ. ಫೋನ್ ನಲ್ಲಿ 3,000 mAh ಬ್ಯಾಟರಿ ಜೊತೆಗೆ ಟರ್ಬೋ ಪವರ್ ಚಾರ್ಜಿಂಗ್ ವ್ಯವಸ್ಥೆ ಇರುತ್ತದೆ.


Click it and Unblock the Notifications








