Home
ಸುದ್ದಿಜಾಲ

17,999 ರೂ.ಗೆ ಬಹುನಿರೀಕ್ಷಿತ Moto G86 Power 5G ಫೋನ್ ಬಿಡುಗಡೆ!

ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Moto G86 Power 5G ಸ್ಮಾರ್ಟ್‌ಫೋನ್ ದೇಶದಲ್ಲಿಂದು (ಜುಲೈ 30) ಭರ್ಜರಿಯಾಗಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ, ಈ ಹೊಸ ಫೋನ್ ಬೃಹತ್ 6,720mAh ಬ್ಯಾಟರಿ ಮತ್ತು MediaTek Dimensity 7400 ಚಿಪ್‌ಸೆಟ್‌ನೊಂದಿಗೆ 17,999ರ ಆಕರ್ಷಕ ಬೆಲೆಯಲ್ಲಿ ಪರಿಚಯಗೊಂಡಿದ್ದು, ದೇಶದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗಮನ ಸೆಳೆಯುವಂತಿದೆ. ಹಾಗಾದರೆ, ಹೊಸ Moto G86 Power 5G ಫೋನ್ ಹೇಗಿದೆ?, ಇದರ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Moto G86 Power 5G: ಸಂಪೂರ್ಣ ವೈಶಿಷ್ಟ್ಯಗಳು

ಹೊಸ ಮೋಟೋ G86 ಪವರ್ 5G ಫೋನ್ MIL-STD-810H-ಪ್ರಮಾಣೀಕೃತ ಬಾಳಿಕೆ ಬರುವ ನಿರ್ಮಾಣವನ್ನು ಮತ್ತು 6.7-ಇಂಚಿನ ಸೂಪರ್ HD (1,220x2,712 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು HDR10+ ಬೆಂಬಲವನ್ನು ನೀಡುತ್ತದೆ, ಜೊತೆಗೆ 120Hz ರಿಫ್ರೆಶ್ ರೇಟ್, 4,500 nits ವರೆಗೆ ಗರಿಷ್ಠ ಹೊಳಪು ಮತ್ತು ಗೊರಿಲ್ಲಾ ಗ್ಲಾಸ್ 7i ರಕ್ಷಣೆಯೊಂದಿಗೆ, ಕಡಿಮೆ ನೀಲಿ ಬೆಳಕು ಮತ್ತು ಕಡಿಮೆ ಚಲನೆಯ ಮಸುಕು ಮಾನದಂಡಗಳಿಗಾಗಿ SGS ಪ್ರಮಾಣೀಕರಣಗಳನ್ನು ಹೊಂದಿದೆ.

ಕಾರ್ಯಕ್ಷಮತೆಗೆಗಾಗಿ, ಈ ಮೋಟೋ G86 ಪವರ್ 5G ಫೋನಿನಲ್ಲಿ 4nm ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 SoC ಪ್ರೊಸೆಸರ್ ಇದೆ. ಈ ಪ್ರೊಸೆಸರ್ 8GB LPDDR4X RAM ಮತ್ತು 128GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು. ಇನ್ನು ಈ ಫೋನ್ ಆಂಡ್ರಾಯ್ಡ್ 15-ಆಧಾರಿತ ಹಲೋ UI ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

17,999 ರೂ.ಗೆ ಬಹುನಿರೀಕ್ಷಿತ Moto G86 Power 5G ಫೋನ್ ಬಿಡುಗಡೆ!

ಕ್ಯಾಮೆರಾ ವಿಭಾಗದಲ್ಲಿ, ಈ ಫೋನಿನಲ್ಲಿ 50-ಮೆಗಾಪಿಕ್ಸೆಲ್ ಸೋನಿ LYT-600 ಪ್ರಾಥಮಿಕ ಸಂವೇದಕ, ಮ್ಯಾಕ್ರೋ ಮೋಡ್‌ನೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಮತ್ತು ಹಿಂಭಾಗದಲ್ಲಿ 3-ಇನ್-1 ಫ್ಲಿಕರ್ ಸಂವೇದಕವನ್ನು ಹೊಂದಿದೆ. ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸಂವೇದಕವು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗೆ ಸಹಾಯ ಮಾಡುತ್ತದೆ. ಇದು ಡಾಲ್ಬಿ ಆಡಿಯೊ ಮತ್ತು ಹೈ-ರೆಸ್ ಆಡಿಯೊ ಪ್ರಮಾಣೀಕರಣ ಬೆಂಬಲಿತ ಡ್ಯುಯಲ್ ಸ್ಟೀರಿಯೊ ಸ್ಪೀಕರ್ ಸಿಸ್ಟಮ್ ಅನ್ನು ಹೊಂದಿದೆ.

ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 33W ಟರ್ಬೊಪವರ್ ಬೆಂಬಲದೊಂದಿಗೆ 6,720mAh ಬ್ಯಾಟರಿಯನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್ ನ್ಯಾನೋ ಸಿಮ್, 5G, 4G, Wi-Fi 6, ಬ್ಲೂಟೂತ್ 5.4, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಜೊತೆಗೆ ಧೂಳು ಮತ್ತು ನೀರು-ನಿರೋಧಕ IP68+IP69 ರೇಟಿಂಗ್ ಹೊಂದಿರುವ ಈ ಫೋನ್ 161.21x74.74x8.6mm ಅಳತೆ ಮತ್ತು 198g ತೂಕವನ್ನು ಹೊಂದಿದೆ.

Moto G86 Power 5G: ಬೆಲೆ ಮತ್ತು ಲಭ್ಯತೆ

Moto G86 Power 5G ಫೋನ್ ಏಕೈಕ 8GB RAM ಮತ್ತು 128GB ಮೆಮೊರಿ ಮಾದರಿಯಲ್ಲಿ ಬಿಡುಗಡೆಯಾಗಿದ್ದು, ಮೊದಲೇ ಹೇಳಿದಂತೆ ಇದರ ಬೆಲೆ 17,999 ರೂ.ಗಳಾಗಿವೆ. ಗ್ರಾಹಕರು ಈ ಸ್ಮಾರ್ಟ್‌ಫೋನ್ ಅನ್ನು ಕಾಸ್ಮಿಕ್ ಸ್ಕೈ, ಗೋಲ್ಡನ್ ಸೈಪ್ರೆಸ್, ಮತ್ತು ಸ್ಪೆಲ್‌ಬೌಂಡ್ ಎಂಬ ಮೂರು ವಿಭಿನ್ನ ಬಣ್ಣಗಳಲ್ಲಿ , ಇದೇ ಆಗಸ್ಟ್ 6 ರಿಂದ ಈ Motorola ಇಂಡಿಯಾ ವೆಬ್‌ಸೈಟ್ ಮತ್ತು Flipkart ಮೂಲಕ ಖರೀದಿಸಬಹುದು.

17,999 ರೂ.ಗೆ ಬಹುನಿರೀಕ್ಷಿತ Moto G86 Power 5G ಫೋನ್ ಬಿಡುಗಡೆ!

ಒಟ್ಟಾರೆಯಾಗಿ, ಈ ಹೊಸ Moto G86 Power 5G ಒಂದು ಸಂಪೂರ್ಣ ಪ್ಯಾಕೇಜ್ ಆಗಿ ಬಿಡುಗಡೆಯಾಗಿದ್ದು, ದೊಡ್ಡ ಬ್ಯಾಟರಿ, ಉತ್ತಮ ಪ್ರದರ್ಶನ, ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ಉತ್ತಮ ಕ್ಯಾಮೆರಾ ಸಾಮರ್ಥ್ಯಗಳನ್ನು ಒದಗಿಸುತ್ತದೆ. ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಅನ್ನು ಹುಡುಕುತ್ತಿರುವವರಿಗೆ ಇದು ಖಂಡಿತವಾಗಿ ಉತ್ತಮ ಆಯ್ಕೆಯಾಗಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Moto G86 Power 5G is priced at Rs. 17,999 for the model that includes 8GB of RAM and 128GB of storage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+