ಕೊನೆ ಕ್ಷಣದಲ್ಲಿ 200MP ಕ್ಯಾಮೆರಾ ಫೋನ್‌ ಲಾಂಚ್‌ ಕ್ಯಾನ್ಸಲ್‌ ಮಾಡಿದ ಮೋಟೋ!

|

ಮೊಟೊರೊಲಾ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಬಿಗ್‌ ಶಾಕ್‌ ನೀಡಿದೆ. ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗಮನಸೆಳೆದಿರುವ ಮೊಟೊರೊಲಾ ಕಂಪೆನಿ ಇಂದು ಕೊನೆ ಕ್ಷಣದಲ್ಲಿ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್‌ ಲಾಂಚ್‌ ಈವೆಂಟ್‌ ಕ್ಯಾನ್ಸಲ್‌ ಮಾಡಿದೆ. ಹಲವು ದಿನಗಳಿಂದ ಟೀಸರ್‌ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಹೊಸ ಫೋನ್‌ಗಳ ಲಾಂಚ್‌ ಈವೆಂಟ್‌ ಕ್ಯಾನ್ಸಲ್‌ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಇದೀಗ ಟೆಕ್‌ ವಲಯದಲ್ಲಿ ಎದ್ದಿದೆ. ಆಗಸ್ಟ್‌ ತಿಂಗಳ ಮೊದಲ ಬಿಗ್‌ ಈವೆಂಟ್‌ ಅನ್ನು ಕೊನೆ ಕ್ಷಣದಲ್ಲಿ ಕ್ಯಾನ್ಸಲ್‌ ಮಾಡಿದ್ದರ ಹಿಂದಿನ ಕಾರಣ ಏನು ಅನ್ನೊ ಪ್ರಶ್ನೆ ಎಲ್ಲೆಡೆ ಮೂಡಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ಇಂದು ತನ್ನ ಹೊಸ ಮೊಟೊರೊಲಾ ರೇಜರ್‌ 2022 ಫೋಲ್ಡಬಲ್ ಮತ್ತು X30 ಪ್ರೊ ಪ್ಲ್ಯಾಗ್‌ಶಿಪ್‌ ಅನ್ನು ಲಾಂಚ್‌ ಮಾಡಬೇಕಿತ್ತು. ಆದರೆ ಬಿಡುಗಡೆಗೆ ಎರಡು ಗಂಟೆಗಳಿಗು ಮುಂಚಿತವಾಗಿ ಈ ಕಾರ್ಯಕ್ರಮವನ್ನು ಕ್ಯಾನ್ಸಲ್‌ ಮಾಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಕಳೆದ ಕೆಲವು ವಾರಗಳಿಂದ ಈ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವುದರ ಬಗ್ಗೆ ಮಾಹಿತಿ ನೀಡಿತ್ತು. ಅದರಂತೆ ಇಂದು ಸಂಜೆ 7:30ಕ್ಕೆ ಚೀನಾದಲ್ಲಿ ಲಾಂಚ್‌ ಈವೆಂಟ್‌ ನಿಗದಿಯಾಗಿತ್ತು. ಆದರೆ ಈವೆಂಟ್‌ ಪ್ರಾರಂಭಿಸಲು ಎರಡು ಗಂಟೆಗಳ ಮೊದಲು ಈವೆಂಟ್‌ ಅನ್ನು ರದ್ದುಗೊಳಿಸಲಾಗಿದೆ ಎಂದು ಕಂಪನಿಯು ಘೋಷಿಸಿದೆ.

ಸ್ಮಾರ್ಟ್‌ಫೋನ್‌

ಇನ್ನೇನು ಕೆಲವೇ ಗಂಟೆಗಳನ್ನು ಬಿಡುಗಡೆಯಾಗಬೇಕಿದ್ದ ಸ್ಮಾರ್ಟ್‌ಫೋನ್‌ ಲಾಂಚ್‌ ಈವೆಂಟ್‌ ಕ್ಯಾನ್ಸಲ್‌ ಆಗಿದ್ದು ಯಾಕೆ? ಇದೊಂದೆ ಪ್ರಶ್ನೆ ಟೆಕ್‌ ವಲಯದಲ್ಲಿ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೆ ಸೂಕ್ತವಾದ ಉತ್ತರವನ್ನು ಮೊಟೊರೊಲಾ ಕಂಪೆನಿ ಇನ್ನು ಕೂಡ ಒದಗಿಸಿಲ್ಲ. ಆದರೆ ಚೀನಾದಲ್ಲಿ ನಿಗಧಿಯಾಗಿದ್ದ ಲಾಂಚ್‌ ಈವೆಂಟ್‌ ಕ್ಯಾನ್ಸಲ್‌ ಮಾಡಿರೋದು ಮಾತ್ರ ಪಕ್ಕಾ ಆಗಿದೆ. ಜಾಗತಿಕ ಮಾರುಕಟ್ಟೆಗೂ ಮುಂಚಿತವಾಗಿ ಚೀನಾದಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಎಲ್ಲವೂ ಉಲ್ಟಾ ಆಗಿದೆ.

ಮೊಟೊರೊಲಾ

ಮೊಟೊರೊಲಾ ಕಂಪೆನಿಯ ಈ ನಿರ್ಧಾರದ ಹಿಂದೆ ಇರುವ ಕಾರಣದ ಬಗ್ಗೆ ಇನ್ನು ನಿಖರವಾದ ಕಾರಣ ತಿಳಿದುಬಂದಿಲ್ಲ. ಮೊಟೊರೊಲಾ ತನ್ನ ಲಾಂಚ್‌ ಈವೆಂಟ್‌ ಕ್ಯಾನ್ಸಲ್‌ ಮಾಡಿರುವುದರ ಬಗ್ಗೆ ಕಾರಣಗಳನ್ನು ಹಂಚಿಕೊಳ್ಳದಿದ್ದರೂ, ಕಳೆದ ಕೆಲವು ದಿನಗಳಲ್ಲಿ ಚೀನಾದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇಂದು ತಡರಾತ್ರಿ ತೈವಾನ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಇದಕ್ಕೆ ಚೀನಾ ಸರ್ಕಾರ ವಿರೋದ ವ್ಯಕ್ತಪಡಿಸಿದೆ. ಅಲ್ಲದೆ ಯುಎಸ್‌ ಈ ಭೇಟಿಗೆ ತಕ್ಕ "ಬೆಲೆ ಪಾವತಿಸುತ್ತದೆ" ಎಂದು ಹೇಳಿದೆ. ಇದೆಲ್ಲದರ ಪರಿಣಾಮವೇ ಯುಎಸ್‌ ಮೂಲದ ಮೊಟೊರೊಲಾ ಕಂಪೆನಿಯ ಲಾಂಚ್‌ ಈವೆಂಟ್‌ ಕ್ಯಾನ್ಸಲ್‌ ಆಗಿದೆ ಎನ್ನಲಾಗಿದೆ.

ಮೊಟೊರೊಲಾ

ಇನ್ನು ಇಂದು ಬಿಡುಗಡೆಯಾಗ ಬೇಕಿದ್ದ ಮೊಟೊರೊಲಾ ರೇಜರ್‌ 2022 ಸ್ಮಾರ್ಟ್‌ಫೋನಿನ ಪ್ರಮೊಷನ್‌ ವೀಡಿಯೋ ಸಾಕಷ್ಟು ಹೈಪ್‌ ಕ್ರಿಯೆಟ್‌ ಮಾಡಿತ್ತು. ಅದರಂತೆ ಈ ಸ್ಮಾರ್ಟ್‌ಫೋನ್‌ ಬಾಕ್ಸರ್, ಚೌಕಾಕಾರದ ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಫೋಲ್ಡಬಲ್ ಫೋನ್ ಕೆಳಭಾಗದಲ್ಲಿ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಫ್ಲಿಪ್‌ ಮಾದರಿಯನ್ನು ಹೊಂದಿದೆ. ಅಲ್ಲದೆ ಈ ಫೋನ್‌ನ ಡಿಸ್‌ಪ್ಲೇಯು ಸೆಲ್ಫಿ ಕ್ಯಾಮೆರಾಕ್ಕಾಗಿ ಕೇಂದ್ರೀಕೃತ ಹೋಲ್‌ ಪಂಚ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಫೋನ್‌ನ ಹೊರಭಾಗದಲ್ಲಿ ಎರಡು ಮುಖ್ಯ ಕ್ಯಾಮೆರಾಗಳನ್ನು ಒಳಗೊಂಡಿದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸೈಡ್-ಮೌಂಟೆಡ್ ಪವರ್ ಬಟನ್‌ಗೆ ಬದಲಾಯಿಸಲಾಗಿದೆ.

ಮಡಿಸಬಹುದಾದ

ಇನ್ನು ಮೊಟೊರೊಲಾ ರೇಜರ್‌ 2022 ಸ್ಮಾರ್ಟ್‌ಫೋನ್‌ 6.7 ಇಂಚಿನ ಮಡಿಸಬಹುದಾದ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ನೀಡಲಿದೆ ಎನ್ನಲಾಗಿದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಸ್ನಾಪ್‌ಡ್ರಾಗನ್‌ 8+ Gen 1 Soc ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ ಎಂದು ಅಂದಾಜಿಸಲಾಗಿದೆ. ಈ ಪ್ರೊಸೆಸರ್ ಅನ್ನು ಒಳಗೊಂಡಿರುವ ವಿಶ್ವದ ಮೊದಲ ಫೊಲ್ಡೆಬಲ್‌ ಸ್ಮಾರ್ಟ್‌ಫೋನ್‌ ಎನ್ನುವ ಖ್ಯಾತಿಯನ್ನು ಕೂಡ ಗಳಿಸಿದೆ. ಹಾಗೆಯೇ 18GB RAM ಮತ್ತು 512GB ಇಂಟರ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಮೊಟೊರೊಲಾ

ಮೊಟೊರೊಲಾ ರೇಜರ್‌ 2022 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿರಲಿದೆ. ಎರಡನೇ ಕ್ಯಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಬಲವನ್ನು ಪಡೆದಿರಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲದೆ ಎಂದು ಅಂದಾಜಿಸಲಾಗಿದೆ. ಜೊತೆಗೆ 3500mAh ಸಾಮರ್ಥ್ಯದ ಡ್ಯುಯಲ್-ಸೆಲ್ ಬ್ಯಾಟರಿಯನ್ನು ಒಳಗೊಂಡಿದೆ. ಇದು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಮಟೊರೊಲಾ

ಇನ್ನು ಮಟೊರೊಲಾ ಕಂಪೆನಿಯ ಮೋಟೋ X30 ಪ್ರೊ ಸ್ಮಾರ್ಟ್‌ಫೋನ್‌ ಕೂಡ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಅದರಂತೆ ಈ ಸ್ಮಾರ್ಟ್‌ಫೋನಿನ ಫೀಚರ್ಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾಗಿತ್ತು. ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ 6.73 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಪಡೆದಿರಲಿದೆ. ಅದರಲ್ಲೂ ಮೊದಲನೇ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದೆ ಅನ್ನೊದು ಪ್ರಮುಖ ಹೈಲೈಟ್‌ ಆಗಿದೆ. ಎರಡನೇ ಕ್ಯಾಮೆರಾ 50-ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದರಿಂದ ಫುಲ್‌ ಇಮೇಜ್ ರೆಸಲ್ಯೂಶನ್ ಅನ್ನು ಕ್ರಾಪ್ ಮಾಡುವ ಅಥವಾ ಸ್ಕೇಲ್ ಮಾಡುವ ಅಗತ್ಯವಿಲ್ಲದೇ 8K ವೀಡಿಯೊಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಿದೆ. ಮೂರನೇ ಕ್ಯಾಮೆರಾ 12-ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ 60 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿರಲಿದೆ ಎನ್ನಲಾಗಿದೆ.

Best Mobiles in India

Read more about:
English summary
Moto Razr 2022, Moto X30 Pro Launch Cancelled For An Unknown Reason

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X