ನವೆಂಬರ್ 13ಕ್ಕೆ ಮೊಟೊ X4 ಸ್ಮಾರ್ಟ್ ಫೋನ್ ಲಾಂಚ್
ಲಿನೊವೊ ಒಡೆತನಕ್ಕೆಸೇರಿರುವ ಮೊಟೊರೊಲಾ ಕಂಪನಿಯು ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್ ಫೋನ್ ಲಾಂಚ್ ಮಾಡುವ ಸನಿಹದಲ್ಲಿದೆ ನವೆಂಬರ್ 13 ರಂದು ಮೊಟೊ X4 ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ದೊರೆಯಲಿದೆ.

ಈ ಹಿಂದೆಯೂ ಮೊಟೊ ಸ್ಮಾರ್ಟ್ ಫೋನ್ ಗಳು ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಸೇಲ್ ಆಗುತ್ತಿತ್ತು. ಇದೇ ಮಾದರಿಯಲ್ಲಿ ಮೊಟೊ X4 ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟಿನಲ್ಲಿಯೇ ದೊರೆಯಲಿದೆ. ಈ ಸ್ಮಾರ್ಟ್ ಫೋನ್ ನವೆಂಬರ್ 13ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಈಗಾಗಲೇ ಹಲವು ಮೊಟೊ ಮೊಬೈಲ್ ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿರುವ ಫ್ಲಿಪ್ ಕಾರ್ಟ್ ಈ ಬಾರಿ ಸಹ ಮೊಟೊ X4 ಸ್ಮಾರ್ಟ್ ಫೋನ್ ಅನ್ನು ಗ್ರಾಹಕರ ಕೈಗೆ ನೀಡಲು ವೇದಿಕೆಯನ್ನು ಸಿದ್ಧ ಪಡಿಸಿದೆ. ಇದಲ್ಲದೇ ಮೊಟೊ X4 ಸ್ಮಾರ್ಟ್ ಫೋನ್ ನೊಂದಿಗೆ ವಿವಿಧ ಆಫರ್ ಗಳನ್ನು ಘೋಷಣೆ ಮಾಡುವ ಸಾಧ್ಯತೆ ಸಹ ಇದೆ.
ಮೊಟೊ X4 ಸ್ಮಾರ್ಟ್ ಫೋನ್ 5.2 ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಪಡೆದುಕೊಂಡಿದೆ. 2.2GHz ವೇಗದ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 630 ಆಕ್ಟಾ ಕೋರ್ ಪ್ರೋಸೆಸರ್ 3GB RAM ಹಾಗೂ 3000mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಈ ಫೋನ್ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾಣಬಹುದಾಗಿದೆ.
ಮೊಟೊ X4 ಸ್ಮಾರ್ಟ್ ಫೋನ್ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿ ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸ್ ವನ್ನು ಕಾಣಬಹುದಾಗಿದೆ. ಹಿಂಭಾಗದಲ್ಲಿ 12 MP + 8 MP ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್, ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದೆ. ಬೆಲೆಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








