ಭಾರತದ ಮಾರುಕಟ್ಟೆಯಲ್ಲಿ ಮೊಟೊರೊಲಾ ಆಂಫಿಸೌಂಡ್ X200W 5.1 ಸೌಂಡ್‌ಬಾರ್ ಬಿಡುಗಡೆ!
ವಿವಿಧ ಮಾದರಿಯ ಸ್ಮಾರ್ಟ್ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾದ ಮೊಟೊರೊಲಾ ಸಂಸ್ಥೆ ತನ್ನ ಹೊಸ ಆಂಫಿಸೌಂಡ್ ಎಕ್ಸ್ ಸೌಂಡ್‌ಬಾರ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಪ್ಲಿಪ್‌ಕಾರ್ಟ್ ಮೊಟೊರೊಲಾ ಆಂಫಿಸೌಂಡ್ ಎಕ್ಸ್ ಸೌಂಡ್‌ಬಾರ್ ಮತ್ತು ಹೋಮ್ ಥಿಯೇಟರ್‌ಗಳನ್ನು ವಿಸ್ತರಿಸಿದ್ದು, ಕಂಪ್ಲೀಟ್ ವಾಯರ್‌ಲೆಸ್ 200W 5.1 ಸೌಂಡ್‌ಬಾರ್ ಅನ್ನು ಬಿಡುಗಡೆ ಮಾಡಿದೆ. ಜೊತೆಗೆ ಸಬ್ ವೂಫರ್ ಮತ್ತು ಸರೌಂಡ್ ಸೌಂಡ್ ಸ್ಪೀಕರ್‌ಗಳೊಂದಿಗೆ ಮತ್ತು 100W ಸೌಂಡ್‌ಬಾರ್ ಅನ್ನು ಸಹ ಬಿಡುಗಡೆ ಮಾಡಿದೆ.

ಹೌದು, ಮೊಟೊರೊಲಾ ಸಂಸ್ಥೆ ತನ್ನ ಹೊಸ ಮೊಟೊರೊಲಾ ಆಂಫಿಸೌಂಡ್ ಎಕ್ಸ್ ಫುಲ್ ವಾಯರ್‌ಲೆಸ್ 200W ಸೌಂಡ್‌ಬಾರ್ ಅನ್ನು ಪರಿಚಯಿಸಿದೆ. ಇದು 5.1 ಸೌಂಡ್‌ಬಾರ್ ಗ್ಲಾಸ್ ಟಾಪ್ ಟಚ್ ಪ್ಯಾನಲ್ ಮತ್ತು ವಾಯರ್‌ಲೆಸ್ ಸಬ್ ವೂಫರ್‌ನೊಂದಿಗೆ ಬರುತ್ತದೆ. ಇನ್ನು ಆಂಫಿಸೌಂಡ್ X100W ಸೌಂಡ್‌ಬಾರ್ ವೈರ್ಡ್ 50W ಸಬ್ ವೂಫರ್ ಹೊಂದಿರುವ ಅಲ್ಟ್ರಾ-ಪೋರ್ಟಬಲ್ ಡಿವೈಸ್ ಆಗಿ ವಿನ್ಯಾಸಗೊಳಿಸಲಾಗಿದೆ. ಇನ್ನುಳಿದಂತೆ ಈ ಹೊಸ ಸೌಂಡ್‌ಬಾರ್‌ಗಳ ವಿನ್ಯಾಸ ಹೇಗಿದೆ, ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಟೊರೊಲಾ ಆಂಫಿಸೌಂಡ್ X200W 5.1 ಸೌಂಡ್‌ಬಾರ್
ಮೊಟೊರೊಲಾ ಆಂಫಿಸೌಂಡ್ X200W 5.1 ಕಂಪ್ಲೀಟ್ ವಾಯರ್‌ಲೆಸ್ ಸೌಂಡ್‌ಬಾರ್ ಆಗಿದೆ. ಅಲ್ಲದೆ ಇದು ವಾಯರ್‌ಲೆಸ್ ಸಬ್ ವೂಫರ್ ಮತ್ತು ವಾಯರ್‌ಲೆಸ್ ಸರೌಂಡ್-ಸೌಂಡ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಜೊತೆಗೆ ಇದು 72W ಸ್ಪೀಕರ್ ಸಿಸ್ಟಮ್ ಅನ್ನು ಹೊಂದಿದ್ದು, ಇದು 2.75 ಇಂಚುಗಳ ಆರು ಫ್ರಂಟ್-ಫೈರಿಂಗ್ ಡ್ರೈವರ್‌ಗಳನ್ನು ಒಳಗೊಂಡಿದೆ. ಅಲ್ಲದೆ ಈ ಸೌಂಡ್‌ಬಾರ್‌ನಲ್ಲಿ ಡಿಜಿಟಲ್ ಸಿಗ್ನಲ್ ಪ್ರೊಸೆಸರ್ ಜೊತೆಗೆ ಆಂಪ್ಲಿಫೈಯರ್ ಕೂಡ ಇದೆ. ಇದಲ್ಲದೆ, 3 ಇಂಚಿನ ಡ್ರೈವರ್‌ಗಳೊಂದಿಗೆ 24W ಎಡ ಮತ್ತು ಬಲ ವಾಯರ್‌ಲೆಸ್ ಸ್ಯಾಟ್‌ಲೈಟ್‌ಗಳನ್ನ ನೀಡಲಾಗಿದೆ. ಇದು ವಾಯರ್‌ಲೆಸ್ ಸಬ್ ವೂಫರ್ 8 ಇಂಚಿನ ಬಾಸ್ ಡ್ರೈವರ್ ಅನ್ನು ಹೊಂದಿದ್ದು, ಎಚ್‌ಡಿಎಂಐ ಎಆರ್‌ಸಿ ಮತ್ತು ಆಪ್ಟಿಕಲ್ ಆಡಿಯೊ ಪೋರ್ಟ್ ಸೇರಿದಂತೆ ಹಲವಾರು ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.

ಮೊಟೊರೊಲಾ ಆಂಫಿಸೌಂಡ್ X100W ಸೌಂಡ್‌ಬಾರ್
ಮೊಟೊರೊಲಾ ಆಂಫಿಸೌಂಡ್ X100W ಸೌಂಡ್‌ಬಾರ್ 2.25-ಇಂಚಿನ ಫ್ರಂಟ್-ಫೈರಿಂಗ್ ಆಡಿಯೋ ಡ್ರೈವರ್‌ಗಳನ್ನ ಹೊಂದಿದೆ. ಅಲ್ಲದೆ ಇದು 50W ಸಬ್ ವೂಫರ್‌ನೊಂದಿಗೆ 6.5 ಇಂಚಿನ ಬಾಸ್ ಡ್ರೈವರ್ ಹೊಂದಿದೆ. ಇನ್ನು ಈ ಸೌಂಡ್‌ಬಾರ್‌ನಲ್ಲಿ ಇಂಟರ್‌ಬಿಲ್ಟ್ ಡಿಪಿಎಸ್ ಎಂಜಿನ್ ಮತ್ತು ಆಂಪ್ಲಿಫೈಯರ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸೌಂಡ್‌ಬಾರ್‌ನಲ್ಲಿ HDMI ARC, ಆಪ್ಟಿಕಲ್ ಆಡಿಯೊ, ಆಕ್ಸ್ ಇನ್, ಮತ್ತು ಯುಎಸ್‌ಬಿ ಪೋರ್ಟ್‌ಗಳು ಮತ್ತು ಬ್ಲೂಟೂತ್ ವಿ 5.0 ಕನೆಕ್ಟಿವಿಟಿಯನ್ನು ಸಹ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ
ಮೊಟೊರೊಲಾ ಆಂಫಿಸೌಂಡ್ X200W 5.1 ಸೌಂಡ್‌ಬಾರ್ ಬೆಲೆ ರೂ. 14,999 ಆಗಿದ್ದು, ಆಂಫಿಸೌಂಡ್ X100W ಸೌಂಡ್‌ಬಾರ್ 7,499 ರೂ ಬೆಲೆಯನ್ನ ಹೊಂದಿದೆ. ಇನ್ನು ಈ ಎರಡೂ ಹೊಸ ಮಾದರಿಗಳು ಸೆಪ್ಟೆಂಬರ್ 14 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.


Click it and Unblock the Notifications



