ಫ್ಲಿಪ್‌ಕಾರ್ಟ್ ಮೂಲಕ 2.5 ಮಿಲಿಯನ್ ಮೋಟೋ ಸಾಧನೆ
ಬಜೆಟ್ ಶ್ರೇಣಿಯಲ್ಲಿ ಶ್ಯೋಮಿಯನ್ನು ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಪ್ರಥಮ ಹೆಸರನ್ನಾಗಿ ಪರಿಗಣಿಸಲಾಗಿದೆ. ಇದೇ ಸಾಲಿಗೆ ಮೋಟೋರೋಲಾ ಕೂಡ ಸೇರಿಕೊಂಡಿದ್ದು ಮೋಟೋ ಜಿ ಮತ್ತು ಮೋಟೋ ಇ ಮಾರಾಟದ ಮೂಲಕ ಬಜೆಟ್ ಫೋನ್‌ಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.
ಭಾರತದಲ್ಲಿ ಈ ಎರಡೂ ಫೋನ್‌ಗಳು ಮಾಡಿರುವ ಕಮಾಲನ್ನು ನಾವು ನೋಡಿದ್ದು ಜನಪ್ರಿಯತೆಯ ತುತ್ತತುದಿಗೇರಿದ ಬೆಸ್ಟ್ ಫೋನ್ ಉತ್ಪನ್ನಗಳು ಮೋಟೋರೋಲಾದ ಫೋನ್‌ಗಳಾಗಿವೆ. ಇನ್ನು ಮೋಟೋರೋಲಾದ ಮಾರುಕಟ್ಟೆ ಉತ್ಪನ್ನ ಕೂಡ ಅತ್ಯಂತ ಅಮೂಲಾಗ್ರವಾಗಿದ್ದು ಹೆಚ್ಚಿನ ಮೋಟೋರೋಲಾ ಫೋನ್‌ಗಳು ತಮ್ಮ ಬೇಡಿಕೆಯನ್ನು ಮಾರಾಟವನ್ನು ಹೆಚ್ಚಿಸಿಕೊಂಡಿವೆ ಎಂದೇ ಹೇಳಬಹುದು.

ಇದನ್ನೂ ಓದಿ: ವಿಸ್ಮಯಗೊಳಿಸುವ ಟಾಪ್ 10 ಟೆಕ್ ಸಾಧನೆಗಳು
ಇನ್ನು ಫ್ಲಿಪ್‌ಕಾರ್ಟ್ ಹೇಳುವಂತೆ ಭಾರತದಲ್ಲಿ ಅದು 2.5 ಮಿಲಿಯನ್ ಮೋಟೋರೋಲಾ ಫೋನ್‌ಗಳನ್ನು ಮಾರಾಟ ಮಾಡಿದೆಯಂತೆ. ಈ ಪಟ್ಟಿಯಲ್ಲಿ ಮೋಟೋರೋಲಾ ಸ್ಮಾರ್ಟ್‌ಫೋನ್‌ಗಳು ಅಂದರೆ ಇತ್ತೀಚಿನ ಸೆಕೆಂಡ್ ಜೆನ್ ಮೋಟೋ ಜಿ ಹಾಗೂ ಮೋಟೋ ಎಕ್ಸ್ ಸ್ಮಾರ್ಟ್‌ಫೋನ್‌ಗಳು ಕೂಡ ಸೇರಿಕೊಂಡಿದೆ.
ಇನ್ನು ಈ ಹೊಸ ಮೈಲುಗಲ್ಲನ್ನು ಸಂಭ್ರಮಿಸುವುದಕ್ಕಾಗಿಯೇ, ಫ್ಲಿಪ್‌ಕಾರ್ಟ್ ರೂ 50,000 ವನ್ನು ಗೆಲ್ಲಲು 5 ಅದೃಷ್ಟಶಾಲಿಗಳಿಗೆ ಅವಕಾಶವನ್ನು ಮಾಡಿಕೊಡುತ್ತಿದೆ ಇದರೊಂದಿಗೆ ಇದು 100 ಗ್ರಾಹಕರಿಗೆ 100% ಕ್ಯಾಶ್‌ಬ್ಯಾಕ್ ಅನ್ನು ಒದಗಿಸುತ್ತಿದೆ. ಇದಕ್ಕಾಗಿ ಗ್ರಾಹಕರು ನವೆಂಬರ್ 24 ರಿಂದ ತೊಡಗಿ ಡಿಸೆಂಬರ್ 7 ಒಳಗೆ ಮೋಟೋರೋಲಾ ಸ್ಮಾರ್ಟ್‌ಫೋನ್‌ಗಳನ್ನು ಸ್ಟೋರ್‌ನಿಂದ ಖರೀದಿಸಬೇಕಾಗುತ್ತದೆ.


Click it and Unblock the Notifications