ಬಂದೇಬಿಡ್ತು ಸ್ಯಾಟ್‌ಲೈಟ್ ಮೆಸೇಜ್ ಬೆಂಬಲಿಸುವ ಸ್ಮಾರ್ಟ್‌ಫೋನ್! ಟೆಕ್ ವಲಯದಲ್ಲಿ ಭಾರಿ ಕಂಪನ!
ಮೊಟೊರೊಲಾ ಕಂಪೆನಿ ಸ್ಯಾಟ್‌ಲೈಟ್ ಮೆಸೇಜಿಂಗ್ ಸಾಮರ್ಥ್ಯ ಒಳಗೊಂಡ ರಗಡ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಎಂಟ್ರಿಯಲ್ಲೇ ಹಲ್‌ಚಲ್ ಎಬ್ಬಿಸಿರುವ ಈ ಸ್ಮಾರ್ಟ್‌ಫೋನ್ ಅನ್ನು ಮೊಟೊರಲಾ ಡೆಫೈ 2 ಎಂದು ಹೆಸರಿಸಲಾಗಿದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಅನ್ನು MWC 2023ರಲ್ಲಿ ಅನಾವರಣ ಮಾಡಲಾಗಿದೆ.
ಹೌದು, ಮೊಟೊರೊಲಾ ಕಂಪೆನಿ ಹೊಸದಾಗಿ ಮೊಟೊರೊಲಾ ಡೆಫೈ 2 ( Motorola Defy 2) ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಉಪಗ್ರಹ ಆಧಾರಿತ ಸಂದೇಶ ಕಳುಹಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಇದು 5G ಸಂಪರ್ಕಕ್ಕೆ ಬೆಂಬಲವನ್ನು ಸಹ ನೀಡುತ್ತದೆ ಎನ್ನಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ಮೊಟೊರೊಲಾ ಡೆಫೈ ಸ್ಯಾಟ್‌ಲೈಟ್ ಲಿಂಕ್?
ಮೊಟೊರೊಲಾ ಡೆಫೈ ಅನ್ನೊದು ಸ್ಯಾಟ್‌ಲೈಟ್ ಲಿಂಕ್ ಬ್ಲೂಟೂತ್ ಟೂಲ್ಸ್ ಆಗಿದೆ. ಇದು ಆಂಡ್ರಾಯ್ಡ್ 10 ಮತ್ತು iOS 14 ನಂತರದ ಸ್ಮಾರ್ಟ್‌ಫೋನ್‌ಗಳಿಗೆ ಬೆಂಬಲಿಸಲಿದೆ. ಇದನ್ನು ಬಳಸಿಕೊಂಡು ಸ್ಯಾಟ್‌ಲೈಟ್ ಸಂದೇಶಗಳನ್ನು ಕಳುಹಿಸಬಹುದಾಗಿದೆ. ಡಿವೈಸ್‌ಗೆ ಕನೆಕ್ಟ್ ಮಾಡಲಾದ ಸ್ಮಾರ್ಟ್‌ಫೋನ್‌ನಲ್ಲಿ ದ್ವಿಮುಖ ಸ್ಯಾಟ್‌ಲೈಟ್ ಮೆಸೇಜ್ ಸೆಂಡಿಂಗ್, ಲೋಕೇಶನ್ ಶೇರ್ ಮತ್ತು SOS ಅಸಿಸ್ಟ್ ಫೀಚರ್ಸ್ ಪ್ರವೇಶಿಸಲು ಬುಲ್ಲಿಟ್ ಸ್ಯಾಟಲೈಟ್ ಮೆಸೆಂಜರ್ ಸೇವೆಯನ್ನು ಪ್ರವೇಶಿಸಬಹುದಾಗಿದೆ.
ಮೊಟೊರೊಲಾ ಡೆಫೈ 2 (Motorola Defy 2) ಫೀಚರ್ಸ್ ಹೇಗಿದೆ?
ಮೊಟೊರೊಲಾ ಡೆಫೈ 2 ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ವರೆಗಿನ ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 930 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಐದು ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳೊಂದಿಗೆ ಆಂಡ್ರಾಯ್ಡ್ 13 ಮತ್ತು ಆಂಡ್ರಾಯ್ಡ್ 14 ಗೆ ಅಪ್ಡೇಟ್‌ಗಳನ್ನು ಕೂಡ ಸ್ವೀಕರಿಸಲಿದೆ ಎಂದು ಮೊಟೊರೊಲಾ ಹೇಳಿದೆ.

ಮೊಟೊರೊಲಾ ಡೆಫೈ 2 ಸ್ಟೋರೇಜ್ ಮತ್ತು ಕ್ಯಾಮೆರಾ ಕ್ಯಾಪಸಿಟಿ ಏನು?
ಇನ್ನು ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಕೂಡ ನೀಡಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.
ಮೊಟೊರೊಲಾ ಡೆಫೈ 2 ಬ್ಯಾಟರಿ ಬ್ಯಾಕ್‌ಅಪ್ ಏನಿದೆ?
ಮೊಟೊರೊಲಾ ಡೆಫೈ 2 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 15W ಚಾರ್ಜಿಂಗ್ ಮತ್ತು Qi ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 5 ಜಿ, 4 ಜಿ, ಬ್ಲೂಟೂತ್ ಮತ್ತು ಸ್ಯಾಟ್‌ಲೈಟ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ.

ಮೊಟೊರೊಲಾ ಡೆಫೈ 2 ಬೆಲೆ ಎಷ್ಟು?
ಮೊಟೊರೊಲಾ ಡೆಫೈ 2 ಸ್ಮಾರ್ಟ್‌ಫೋನ್ ಬೆಲೆ $599 (ಅಂದಾಜು 49,600ರೂ)ಗಳಿಗೆ ನಿಗದಿಪಡಿಸಲಾಗಿದೆ. ಇದನ್ನು ಖರೀದಿಸುವವರು 12 ತಿಂಗಳ SOS ಅಸಿಸ್ಟ್‌ಗೆ ಪ್ರವೇಶವನ್ನು ಹೊಂದಿರುತ್ತಾರೆ. ಆದರೆ ಸ್ಯಾಟ್‌ಲೈಟ್ ಮೆಸೇಜ್ ಸೆಂಡ್ ಪ್ಲಾನ್‌ಗಳು ತಿಂಗಳಿಗೆ $4.99 (ಅಂದಾಜು 400ರೂ) ಗಳಿಂದ ಪ್ರಾರಂಭವಾಗುತ್ತವೆ.
ಇನ್ನು ಸ್ಯಾಟ್‌ಲಿಂಕ್ ನೀಡುವ ಮೊಟೊರೊಲಾ ಡೆಫೈ ಸ್ಯಾಟ್‌ಲೈಟ್ ಲಿಂಕ್ ಟೂಲ್ಸ್ ಬೆಲೆ $99 (ಸುಮಾರು 8,200ರೂ)ಆಗಿದೆ.


Click it and Unblock the Notifications








