ಮೊಟೊರೊಲಾ ಡಿಫೈ ರಗಡ್‌ ಸ್ಮಾರ್ಟ್‌ಫೋನ್‌ ಬಿಡುಗಡೆ! ಬಿಗ್‌ ಬ್ಯಾಟರಿ ವಿಶೇಷ!

|

ಜನಪ್ರಿಯ ಮೊಟರೊಲಾ ಕಂಪೆನಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸ ಮೊಟೊರೊಲಾ ಡಿಫೈ ರಗಡ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಐಪಿ 68 ಮತ್ತು ಮಿಲಿಟರಿ ಸ್ಟ್ಯಾಂಡರ್ಡ್ ಅನ್ನು ಒಳಗೊಂಡಿದ್ದು, ಒರಾಟದ ಪರಿಸ್ಥಿತಿಯಲ್ಲೂ ಸ್ಮಾರ್ಟ್‌ಫೋನ್‌ಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ಹೊಸ ಡಿಫೈ ರಗಡ್‌ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಈ ಫೋನ್ ಡ್ಯುಯಲ್-ಸೀಲ್ಡ್ ಹೌಸಿಂಗ್ ಹೊಂದಿದೆ ಮತ್ತು 35 ನಿಮಿಷಗಳ ಕಾಲ 5 ಅಡಿಗಳವರೆಗೆ ನೀರಿನ ಅಡಿಯಲ್ಲಿ ಇದ್ದರೂ ಸಹ ಯಾವುದೇ ರೀತಿಯ ಡ್ಯಾಮೇಜ್‌ ಆಗುವುದಿಲ್ಲ ಎನ್ನಲಾಗಿದೆ. ಇದು ಮರಳು, ಧೂಳು ಮತ್ತು ಕೊಳಕು, ಆರ್ದ್ರತೆ ಮತ್ತು ಸಾಲ್ಟ್‌ ಮಿಸ್ಟ ನಿರೋಧಕವಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಮೊಟೊರೊಲಾ ಡಿಫೈ ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಹೊಂದಿದೆ. ಇದು 270 ಪಿಪಿಐ ಪಿಕ್ಸೆಲ್‌ ಸಾಂದ್ರತೆ ಪಡೆದುಕೊಂಡಿದೆ. ಈ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ನೊಂದಿಗೆ ಬರಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಆಂಡ್ರಾಯ್ಡ್ 11 ಬೆಂಬಲವನ್ನು ಶೀಘ್ರದಲ್ಲೇ ಹೊರತರಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ 4GB RAM ಮತ್ತು 64GBಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಬೆಂಬಲದೊಂದಿಗೆ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಮೊಟೊರೊಲಾ ಡಿಫೈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌, ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಮೊಟೊರೊಲಾ ಡಿಫೈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 20W ಟರ್ಬೊಪವರ್ ಚಾರ್ಜ್‌ ಅನ್ನು ಬೆಂಬಲಿಸಲಿದೆ. ಬ್ಯಾಟರಿ ಎರಡು ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಬ್ಲೂಟೂತ್ ವಿ 5, ಎನ್‌ಎಫ್‌ಸಿ, ವೋಲ್ಟಿಇ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಸೇರಿವೆ. ಇದು ಪುಶ್-ಟು-ಟಾಕ್ (ಪಿಟಿಟಿ) ಮೋಡ್‌ನೊಂದಿಗೆ ಪ್ರೊಗ್ರಾಮೆಬಲ್ ಶಾರ್ಟ್‌ಕಟ್ ಕೀಲಿಯನ್ನು ಹೊಂದಿದೆ. ಇದಲ್ಲದೆ ಇದು ಕಂಪನ ಮತ್ತು ಟಂಬಲ್ ಪರೀಕ್ಷೆಗಳ ಮೂಲಕ ಇರಿಸಲಾಗಿದೆ. ಫೋನ್ MIL-SPEC 810H ವಿಪರೀತ ತಾಪಮಾನ ಬದುಕುಳಿಯುವ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೊಸ ಮೊಟೊರೊಲಾ ಡಿಫೈ ಏಕೈಕ 4GB RAM + 64GB ಇಂಟರ್‌ ಸ್ಟೋರೇಜ್‌ ಮಾದರಿಗೆ ಯುರೋ 329 (ಸರಿಸುಮಾರು ರೂ. 29,000) ಅಥವಾ ಜಿಬಿಪಿ 279 (ಸರಿಸುಮಾರು 28,700 ರೂ.) ಬೆಲೆಯಿದೆ. ಇದು ಕಪ್ಪು ಮತ್ತು ಖೋಟಾ ಹಸಿರು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಿದೆ. ಮೊಟೊರೊಲಾ ಡಿಫೈ ಮುಂದಿನ ವಾರಗಳಲ್ಲಿ ಆಯ್ದ ಯುರೋಪಿಯನ್ ಮತ್ತು ಲ್ಯಾಟಮ್ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ದೇಶದ ಆಧಾರದ ಮೇಲೆ ಬೆಲೆ ಬದಲಾಗಬಹುದು ಎಂದು ಮೊಟೊರೊಲಾ ಹೇಳಿದೆ. ಕಂಪನಿಯು 2 ವರ್ಷಗಳ ಖಾತರಿ, ಆಂಡ್ರಾಯ್ಡ್ ಎಂಟರ್‌ಪ್ರೈಸ್ ಬೆಂಬಲ ಮತ್ತು ಭದ್ರತಾ ನವೀಕರಣಗಳನ್ನು ಎರಡು ವರ್ಷಗಳವರೆಗೆ ನೀಡುತ್ತಿದೆ.

Most Read Articles
Best Mobiles in India

English summary
Motorola Defy rugged smartphone has gone official. The phone is IP68 and military standard certified to survive extreme conditions.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X