ಮೊಟೊರೊಲಾ ಎಡ್ಜ್‌ ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಮೊಟೊರೊಲಾ ಕಂಪೆನಿ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಮೊಟೊರೊಲಾ ಎಡ್ಜ್‌ ಸರಣಿಯಲ್ಲಿ ಹೊಸದಾಗಿ ಮೊಟೊರೊಲಾ ಎಡ್ಜ್‌ 20, ಮೊಟೊರೊಲಾ ಎಡ್ಜ್ 20 ಲೈಟ್, ಮತ್ತು ಮೊಟೊರೊಲಾ ಎಡ್ಜ್ 20 ಪ್ರೊ ಅನ್ನು ಲಾಂಚ್‌ ಮಾಡಿದೆ. ಈ ಮೂರು ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ಗಳೊಂದಿಗೆ ಬರುತ್ತವೆ.

ಮೊಟರೊಲಾ

ಹೌದು, ಮೊಟರೊಲಾ ಕಂಪೆನಿ ತನ್ನ ಎಡ್ಜ್‌ ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು 108 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಮುಖ್ಯ ಕ್ಯಾಮೆರಾ ಒಳಗೊಂಡಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ರಿಫ್ರೆಶ್ ರೇಟ್‌ ಹೊಂದಿರುವ ಡಿಸ್‌ಪ್ಲೇಗಳನ್ನು ಸಹ ಹೊಂದಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೊಟೊರೊಲಾ ಎಡ್ಜ್ 20

ಮೊಟೊರೊಲಾ ಎಡ್ಜ್ 20

ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್‌ 6.4-ಇಂಚಿನ ಒಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ರೇಟ್‌, 10-ಬಿಟ್ ಕಲರ್‌, ಡಿಸಿಐ-ಪಿ 3 ಕಲರ್ ಸ್ಪೇಸ್ ಕವರೇಜ್ ಮತ್ತು ಹೆಚ್‌ಡಿಆರ್ 10+ ಪ್ರಮಾಣೀಕರಣವನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778 5G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ರ ಮೇಲೆ ಮೈ ಯುಎಕ್ಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿದೆ. ಜೊತೆಗೆ 4,000mAh ಬ್ಯಾಟರಿಯ ಸಾಮರ್ಥ್ಯವನ್ನು ಬೆಂಬಲಿಸುತ್ತದೆ.

ಮೊಟೊರೊಲಾ ಎಡ್ಜ್ 20 ಲೈಟ್

ಮೊಟೊರೊಲಾ ಎಡ್ಜ್ 20 ಲೈಟ್

ಮೊಟೊರೊಲಾ ಎಡ್ಜ್ 20 ಲೈಟ್ 6.7-ಇಂಚಿನ ಒಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಒಳಗೊಂಡಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 720 SoC ಪ್ರೊಸೆಸರ್‌ ಅನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ. ಇದು 30W ಟರ್ಬೊಪವರ್ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಮೊಟೊರೊಲಾ ಎಡ್ಜ್ 20 ಪ್ರೊ

ಮೊಟೊರೊಲಾ ಎಡ್ಜ್ 20 ಪ್ರೊ

ಮೊಟೊರೊಲಾ ಎಡ್ಜ್ 20 ಪ್ರೊ ಮೊಟೊರೊಲಾ ಎಡ್ಜ್ 20 ಸರಣಿಯ ಟಾಪ್-ಆಫ್-ದಿ-ಲೈನ್ ಕೊಡುಗೆಯಾಗಿದೆ. ಇದು 6.7-ಇಂಚಿನ OLED ಡಿಸ್ಪ್ಲೇ ಹೊಂದಿದೆ ಆದರೆ ಅಮೆಜಾನ್ HDR ಬೆಂಬಲವನ್ನು ಸೇರಿಸುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಆದರೆ 3x ಹೈ-ರೆಸ್ ಆಪ್ಟಿಕಲ್ ಜೂಮ್ ಮತ್ತು 30 ಎಕ್ಸ್ ಸೂಪರ್ ಜೂಮ್ ಟೆಲಿಫೋಟೋ ಲೆನ್ಸ್ ಅನ್ನು 5x ಹೈ-ರೆಸ್ ಆಪ್ಟಿಕಲ್ ಜೂಮ್ ಒಳಗೊಂಡಿದೆ.ಜೊತೆಗೆ 4,500mAh ಬ್ಯಾಟರಿ ಹೊಂದಿದ್ದು, ಇದು 30W ಟರ್ಬೊಪವರ್ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್‌ 8GB + 128GB ಸ್ಟೋರೇಜ್ ಮಾದರಿಗೆ EUR 499.99 (ಸುಮಾರು ರೂ. 44,100) ಬೆಲೆ ಹೊಂದಿದೆ. ಇದು ಫ್ರಾಸ್ಟೆಡ್ ಓನಿಕ್ಸ್ ಮತ್ತು ಫ್ರಾಸ್ಟೆಡ್ ಪರ್ಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಇನ್ನು ಮೊಟೊರೊಲಾ ಎಡ್ಜ್ 20 ಲೈಟ್ 8GB + 128GB ಸ್ಟೋರೇಜ್ ಮಾಡೆಲ್ EUR 349.99 (ಸುಮಾರು ರೂ. 30,900) ಬೆಲೆ ಹೊಂದಿದೆ. ಇದು ಎಲೆಕ್ಟ್ರಿಕ್ ಗ್ರಾಫೈಟ್ ಮತ್ತು ಲಗೂನ್ ಗ್ರೀನ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ.
ಮೊಟೊರೊಲಾ ಎಡ್ಜ್ 20 ಪ್ರೊ 12GB + 256GB ಸ್ಟೋರೇಜ್ ಮಾದರಿಗೆ EUR 699.99 (ಸರಿಸುಮಾರು ರೂ. 61,800) ಬೆಲೆ ಹೊಂದಿದೆ. ಇದು ಇಂಡಿಗೊ ವೆಗನ್ ಲೆದರ್ ಮತ್ತು ಮಿಡ್ನೈಟ್ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಮುಂದಿನ ತಿಂಗಳು ಯುರೋಪ್, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಏಷ್ಯಾದಲ್ಲಿ ಎಲ್ಲಾ ಮೂರು ಫೋನ್‌ಗಳು ಮಾರಾಟಕ್ಕೆ ಬರಲಿವೆ.

Best Mobiles in India

English summary
Motorola Edge 20 is backed by a 4,000mAh battery, Edge 20 Lite is backed by a 5,000mAh battery, and Edge 20 Pro has a 4,500mAh battery.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X