Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊ ಎಡ್ಜ್‌ 30 ಅಲ್ಟ್ರಾ ಫೋನ್‌ ಮೇಲೆ ಬಿಗ್‌ ಆಫರ್‌!

ಸ್ಮಾರ್ಟ್‌ಫೋನ್‌ ಖರೀದಿದಾರರಿಗೆ ಮೊಟೊರೊಲಾ ಕಂಪೆನಿ ಗುಡ್‌ನ್ಯೂಸ್‌ ನೀಡಿದೆ. ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ ಫೋನ್‌ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈ ಸ್ಮಾರ್ಟ್‌ಫೋನ್‌ 5,000ರೂ.ಗಳ ಫ್ಲಾಟ್‌ ರಿಯಾಯಿತಿಯನ್ನು ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೊಟೊ ಡೇಸ್‌ ಸೇಲ್‌ ನಡೆಸುತ್ತಿದ್ದು, ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿವೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿಯ ಮೊಟೊ ಎಡ್ಜ್‌ 30 ಅಲ್ಟ್ರಾ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್‌ ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್‌ನ ಮೊಟೊ ಡೇಸ್‌ ಪ್ರಯುಕ್ತ ಈ ಡಿಸ್ಕೌಂಟ್‌ ಅನ್ನು ಘೋಷಿಸಲಾಗಿದೆ. ಇನ್ನು ಈ ಡಿಸ್ಕೌಂಟ್‌ ಆಫರ್‌ ಇಂದು(ನ.7) ಕೊನೆಯಾಗಲಿದೆ. ಆದರಿಂದ ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ ಫೋನ್‌ ಡಿಸ್ಕೌಂಟ್‌ನಲ್ಲಿ ಖರೀದಿಸೊರಿಗೆ ಇದುವೇ ಬೆಸ್ಟ್‌ ಟೈಂ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಫರ್‌ ಏನಿದೆ?

ಆಫರ್‌ ಏನಿದೆ?

ಫ್ಲಿಪ್‌ಕಾರ್ಟ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷವಾಗಿ ಮೊಟೊ ಡೇಸ್‌ ಸೇಲ್‌ ನಡೆಸುತ್ತಿದೆ. ಇದರಲ್ಲಿ ಮೊಟೊರೊಲಾ ಕಂಪೆನಿಯ ಫೋನ್‌ಗಳಿಗೆ ಡಿಸ್ಕೌಂಟ್‌ ಘೋಷಿಸಲಾಗಿದೆ. ಅದರಂತೆ ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ ಸ್ಮಾರ್ಟ್‌ಫೋನ್‌ 5,000 ರೂಪಾಯಿಗಳ ಫ್ಲಾಟ್ ರಿಯಾಯಿತಿಯನ್ನು ಪಡೆದುಕೊಂಡಿದೆ. ಈ ಆಫರ್‌ ಈಗಾಗಲೇ ಲೈವ್ ಆಗಿದ್ದು, ನವೆಂಬರ್ 7 ರವರೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೂಲ ಬೆಲೆ 59,999ರೂ. ಆಗಿದ್ದು, 5,000ರೂ. ರಿಯಾಯಿತಿಯ ನಂತರ 54,999ರೂ. ಬೆಲೆಯಲ್ಲಿ ಲಭ್ಯವಾಗುತ್ತಿದೆ.

ಫೀಚರ್ಸ್‌ ಹೇಗಿದೆ?

ಫೀಚರ್ಸ್‌ ಹೇಗಿದೆ?

ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಪೋಲ್ಡ್‌ ಕರ್ವ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ HDR10+, DCI-P3 ಕಲರ್‌ ಪ್ಲೇಸ್‌ ಮತ್ತು 1250ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಪಡೆದಿದೆ.

ಪ್ರೊಸೆಸರ್‌ ಬಲವೇನು?

ಪ್ರೊಸೆಸರ್‌ ಬಲವೇನು?

ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ವೇಗವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ My UX ಸ್ಕಿನ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ.

ತ್ರಿವಳಿ ಕ್ಯಾಮೆರಾ

ತ್ರಿವಳಿ ಕ್ಯಾಮೆರಾ

ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಸೆನ್ಸಾರ್‌ ಹೊಂದಿದೆ. ಈ ಕ್ಯಾಮೆರಾ 16 ಪಿಕ್ಸೆಲ್‌ಗಳನ್ನು ಸಿಂಗಲ್‌ 2.56μm ಅಲ್ಟ್ರಾ ಪಿಕ್ಸೆಲ್‌ಗೆ ಸಂಯೋಜಿಸುತ್ತದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಸೆನ್ಸಾರ್‌ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೋನಿ ಸೆನ್ಸಾರ್‌ ಟೆಲಿಫೋಟೋ ಲೆನ್ಸ್‌ ಹೊಂದಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ ಅಪ್‌ ಏನಿದೆ?

ಬ್ಯಾಟರಿ ಬ್ಯಾಕ್‌ ಅಪ್‌ ಏನಿದೆ?

ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ ಸ್ಮಾರ್ಟ್‌ಫೋನ್‌ 4,610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 125W ಟರ್ಬೋಪವರ್ ವೈರ್ಡ್ ಚಾರ್ಜಿಂಗ್, 50W ವಾಯರ್‌ಲೆಸ್ ಚಾರ್ಜಿಂಗ್ ಮತ್ತು 10W ವೈರ್‌ಲೆಸ್ ಪವರ್ ಹೋಸ್ಟ್-ಅವೇರ್ ಪರ್ಫಾರ್ಮೆನ್ಸ್ ಬೂಸ್ಟರ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G (13 ಬ್ಯಾಂಡ್‌ಗಳು), 4G LTE, Wi-Fi 6E, ಬ್ಲೂಟೂತ್ v5.2, GPS/AGPS, NFC, ಡಿಸ್ಪ್ಲೇಪೋರ್ಟ್ 1.4, ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Motorola Edge 30 Ultra has received a flat discount of Rs 5,000 on Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+