Home
ಸುದ್ದಿಜಾಲ

ಭಾರತದಲ್ಲಿ ಮೊಟೊರೊಲಾ ಎಡ್ಜ್‌ 40 ಬೆಲೆ ಎಷ್ಟಿರಲಿದೆ ಗೊತ್ತಾ? ಯಾಕಿಷ್ಟು ನಿರೀಕ್ಷೆ?

ಮೊಟೊರೊಲಾ ಕಂಪೆನಿ ಭಾರತದಲ್ಲಿ ತನ್ನ ಹೊಸ ಎಡ್ಜ್‌ 40 ಫೋನ್‌ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಬಿಡುಗಡೆ ದಿನಾಂಕ ಕೂಡ ಬಹಿರಂಗವಾಗಿದ್ದು, ಮೇ 23 ರಂದು ಲಾಂಚ್‌ ಆಗೋದು ಪಕ್ಕಾ ಆಗಿದೆ. ಇದೀಗ ಈ ಸ್ಮಾರ್ಟ್‌ಫೋನ್‌ನ ಬೆಲೆ ವಿವರಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ.

ಹೌದು, ಭಾರತದಲ್ಲಿ ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್ ಬೆಲೆ ವಿವರಗಳು ಬಹಿರಂಗಗೊಂಡಿದೆ. ಈಗಾಗಲೇ ಯುರೋಪ್‌ ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿರುವ ಸ್ಮಾರ್ಟ್‌ಫೋನ್‌ ಭಾರತದ ಅಂಗಳದಲ್ಲಿಯೂ ಟ್ರೆಂಡ್‌ ಹುಟ್ಟುಹಾಕೋದು ಕನ್ಫರ್ಮ್‌ ಆಗಿದೆ. ಹಾಗಾದ್ರೆ ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ನ ಬೆಲೆ ಎಷ್ಟಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಮೊಟೊರೊಲಾ ಎಡ್ಜ್‌ 40 ಬೆಲೆ ಎಷ್ಟಿರಲಿದೆ ಗೊತ್ತಾ? ಯಾಕಿಷ್ಟು ನಿರೀಕ್ಷೆ

ಭಾರತದಲ್ಲಿ ಬಹಿರಂಗವಾಯ್ತು ಮೊಟೊರೊಲಾ ಎಡ್ಜ್‌ 40 ಬೆಲೆ ವಿವರ

ಭಾರತದಲ್ಲಿ ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ ಲ್ಯಾಂಡಿಂಗ್‌ ಪೇಜ್‌ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ. ಜೊತೆಗೆ ಆನ್‌ಲೈನ್‌ನಲ್ಲಿ ಈ ಡಿವೈಸ್‌ ಬೆಲೆ ಕೂಡ ಬಹಹಿರಂಗವಾಗಿದೆ. ಅದರಂತೆ ಭಾರತದಲ್ಲಿ ಮೊಟೊ ಎಡ್ಜ್‌ 40 ಸ್ಮಾರ್ಟ್‌ಫೋನ್‌ 27,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ಬೆಲೆ ಪ್ರಿ ಬುಕ್ಕಿಂಗ್‌ ಗ್ರಾಹಕರಿಗೆ ಇದು ಅನ್ವಯಿಸಲಿದೆ ಎನ್ನಲಾಗಿದೆ. ಇದಲ್ಲದೆ ಖರೀದಿದಾರರಿಗೆ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 2,000ರೂಪಾಯಿ ತನಕ ರಿಯಾಯಿತಿ ಲಭ್ಯವಾಗಲಿದೆ.

ಮೊಟೊರೊಲಾ ಎಡ್ಜ್ 40 ಫಿಚರ್ಸ್‌ ಹೇಗಿದೆ?

ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಫೋಲ್ಡ್‌ ಸ್ಕ್ರೀನ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್, 360 Hz ಟಚ್ ಸ್ಯಾಂಪ್ಲಿಂಗ್ ರೇಟ್, 1,200 nits ಪೀಕ್ ಬ್ರೈಟ್‌ನೆಸ್ ಮತ್ತು HDR10+ ಪ್ರಮಾಣೀಕರಣವನ್ನು ಹೊಂದಿದೆ.

ಭಾರತದಲ್ಲಿ ಮೊಟೊರೊಲಾ ಎಡ್ಜ್‌ 40 ಬೆಲೆ ಎಷ್ಟಿರಲಿದೆ ಗೊತ್ತಾ? ಯಾಕಿಷ್ಟು ನಿರೀಕ್ಷೆ

ಮೊಟೊರೊಲಾ ಎಡ್ಜ್‌ 40 ಪ್ರೊಸೆಸರ್‌ ಯಾವುದು?

ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ ಮಿಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256 GB ಇಂಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಮೊಟೊರೊಲಾ ಎಡ್ಜ್‌ 40 ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು OIS ಬೆಂಬಲವನ್ನು ಪಡೆದಿದೆ. ಇನ್ನು ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾವೈಡ್ ಮ್ಯಾಕ್ರೋ ವಿಷನ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಭಾರತದಲ್ಲಿ ಮೊಟೊರೊಲಾ ಎಡ್ಜ್‌ 40 ಬೆಲೆ ಎಷ್ಟಿರಲಿದೆ ಗೊತ್ತಾ? ಯಾಕಿಷ್ಟು ನಿರೀಕ್ಷೆ

ಮೊಟೊರೊಲಾ ಎಡ್ಜ್‌ 40 ಬ್ಯಾಟರಿ ಬ್ಯಾಕ್‌ಅಪ್‌!

ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 68W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಬ್ಲೂಟೂತ್ 5.2, ಜಿಪಿಎಸ್, ಎನ್‌ಎಫ್‌ಸಿ ಯನ್ನು ಒಳಗೊಂಡಿದೆ.

ಲಭ್ಯತೆ ಯಾವಾಗ?

ಈ ಫೋನ್ ಇದೇ ಮೇ 23 ರಂದು ಭಾರತದಲ್ಲಿ ಲಾಂಚ್ ಆಗಲಿದೆ. ಇನ್ನು ಇದು ಎಕ್ಲಿಪ್ಸ್ ಬ್ಲ್ಯಾಕ್, ಲೂನಾರ್ ಬ್ಲೂ ಮತ್ತು ನೆಬ್ಯುಲಾ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Motorola Edge 40 boasts a 6.55-inch curved OLED display with an FHD+ resolution and a punch-hole cutout positioned at the center.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+