Home
ಸುದ್ದಿಜಾಲ

ಇಂದು ಎಂಟ್ರಿ ಕೊಡಲಿದೆ ಮೊಟೊರೊಲಾ ಎಡ್ಜ್‌ 40 ನಿಯೋ.. ಬೆಲೆ ಎಷ್ಟು?

ಟೆಕ್‌ ವಲಯದಲ್ಲಿ ಮೊಟೊರೊಲಾ ಸಂಸ್ಥೆಯು ಪ್ರಮುಖ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಮೊಟೊರೊಲಾ ಭಿನ್ನ ಶ್ರೇಣಿಯಲ್ಲಿ ಮೊಬೈಲ್‌ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಮುಖ್ಯವಾಗಿ ಮೊಟೊರೊಲಾ ಎಡ್ಜ್ ಸರಣಿಯ ಫೋನ್‌ಗಳು ಹೆಚ್ಚು ಸದ್ದು ಮಾಡಿವೆ. ಅದರ ಮುಂದುವರಿದ ಭಾಗವಾಗಿ ಮೊಟೊರೊಲಾ ಸಂಸ್ಥೆಯು ಇದೀಗ ಎಡ್ಜ್‌ ಸರಣಿಯಲ್ಲಿ ಹೊಸದಾಗಿ ಮೊಟೊರೊಲಾ ಎಡ್ಜ್‌ 40 ನಿಯೋ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ.

ಹೌದು, ಮೊಟೊರೊಲಾ ಸಂಸ್ಥೆಯು ಈಗ 'ಮೊಟೊರೊಲಾ ಎಡ್ಜ್‌ 40 ನಿಯೋ' ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇಂದು (ಸೆ. 21) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ ಮೂಲಕ ಲಾಂಚ್ ಮಾಡಲಿದೆ. ಈ ಫೋನ್‌ IP68 ಅಂಡರ್ ವಾಟರ್‌ ಪ್ರೊಟೆಕ್ಷನ್‌ ಸೌಲಭ್ಯ ಪಡೆದಿದ್ದು, ಇದರ ಡಿಸ್‌ಪ್ಲೇಯು 144HZ ರಿಫ್ರೆಶ್ ರೇಟ್‌ ಪಡೆದಿದೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಂದು ಎಂಟ್ರಿ ಕೊಡಲಿದೆ ಮೊಟೊರೊಲಾ ಎಡ್ಜ್‌ 40 ನಿಯೋ.. ಬೆಲೆ ಎಷ್ಟು?

ಮೊಟೊರೊಲಾ ಎಡ್ಜ್‌ 40 ನಿಯೋ ಡಿಸ್‌ಪ್ಲೇ ಮಾಹಿತಿ :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಪೋಲೆಡ್‌ ಡಿಸ್‌ಪ್ಲೇ ಅನ್ನು ನಿರೀಕ್ಷಿಸಲಾಗಿದೆ. ಈ ಮೊಬೈಲ್‌ ಡಿಸ್‌ಪ್ಲೇ 2400 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಜೊತೆಗೆ ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ನೊಂದಿಗೆ ಬರುವ ನಿರೀಕ್ಷೆ ಇದೆ. ಇದು 360Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಹೊಂದಿದ್ದು, 1,300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಸಪೋರ್ಟ್‌ ಮಾಡಲಿದೆ.

ಮೊಟೊರೊಲಾ ಎಡ್ಜ್ 40 ನಿಯೋ ಪ್ರೊಸೆಸರ್‌ ಮಾಹಿತಿ :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7030 SoC ಪ್ರೊಸೆಸರ್ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಹಾಗೆಯೇ 12GB RAM ಮತ್ತು 256GB ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆ ಪಡೆದಿರಲಿದೆ. ಇನ್ನು ಈ ಮೊಬೈಲ್‌ ಮೆಮೊರಿ ಕಾರ್ಡ್‌ ಬೆಂಬಲಿಸುವ ಬಗ್ಗೆ ಯಾವುದೇ ಮಾಹಿತಿ ಅಲಭ್ಯ.

ಮೊಟೊರೊಲಾ ಎಡ್ಜ್ 40 ನಿಯೋ ಕ್ಯಾಮೆರಾ ಮಾಹಿತಿ :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ನಲ್ಲಿ ಬರಲಿದೆ. ಇನ್ನು ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದೆ. ಇದರೊಂದಿಗೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಗಳು ಇವೆ.

ಮೊಟೊರೊಲಾ ಎಡ್ಜ್ 40 ನಿಯೋ ಬ್ಯಾಟರಿ ಮಾಹಿತಿ :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ನಲ್ಲಿ ಕಾಣಿಸಿಕೊಳ್ಳಲಿದೆ. ಜೊತೆಗೆ ಇದು 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, ಬ್ಲೂಟೂತ್, NFC, Wi-Fi ಮತ್ತು USB ಟೈಪ್-ಸಿ ಮತ್ತು ಸ್ಪೀಕರ್ ಗ್ರಿಲ್‌ನೊಂದಿಗೆ ಎಂಟ್ರಿ ಕೊಡಲಿದೆ.

ಮೊಟೊರೊಲಾ ಎಡ್ಜ್ 40 ನಿಯೋ ಬೆಲೆ ಮತ್ತು ಲಭ್ಯತೆ :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್‌ ಭಾರತದಲ್ಲಿ 24,999ರೂ. ಪ್ರೈಸ್‌ಟ್ಯಾಗ್‌ನೊಂದಿಗೆ ಲಗ್ಗೆ ಇಡುವ ನಿರೀಕ್ಷೆಯಿದೆ. ಈ ಮೊಬೈಲ್‌ ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಗೆ ಲಭ್ಯವಾಗಲಿದ್ದು, ಕ್ಯಾನೆಲ್ ಬೇ, ಬ್ಲ್ಯಾಕ್ ಬ್ಯೂಟಿ ಬಣ್ಣದ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
Motorola Edge 40 Neo launch. here's expected price and features details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+