Home
ಸುದ್ದಿಜಾಲ

Motorola Edge 60 Fusion: ಭಾರತದಲ್ಲಿ ಹೊಸ ಮೈಕೊನೊಸ್ ಬ್ಲೂ ಬಣ್ಣದಲ್ಲಿ ಬಿಡುಗಡೆ!

ಮೊಟೊರೊಲಾ ಕಂಪೆನಿಯ ಭಾರತದಲ್ಲಿ ಕಳೆದ ಏಪ್ರಿಲ್‌ನಲ್ಲಿ ಪರಿಚಯಿಸಿದ್ದ Motorola Edge 60 Fusion ಸ್ಮಾರ್ಟ್‌ಫೋನ್ ಅನ್ನು ಇದೀದ ಪ್ಯಾಂಟೋನ್ ಮೈಕೊನೊಸ್ ಬ್ಲೂ ಬಣ್ಣದ ಹೊಸ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಬಣ್ಣದ ಆಯ್ಕೆಯು ಈಗಾಗಲೇ ಲಭ್ಯವಿರುವ ಪ್ಯಾಂಟೋನ್ ಅಮೆಜಾನೈಟ್, ಪ್ಯಾಂಟೋನ್ ಸ್ಲಿಪ್‌ಸ್ಟ್ರೀಮ್, ಮತ್ತು ಪ್ಯಾಂಟೋನ್ ಜೆಫಿರ್ ಬಣ್ಣಗಳಿಗೆ ಸೇರಿಕೊಂಡಿದೆ. ಈ ಲೇಖನದಲ್ಲಿ, ಮೈಕೊನೊಸ್ ಬ್ಲೂ ರೂಪಾಂತರದ ಹೊಸ Motorola Edge 60 Fusion ಸ್ಮಾರ್ಟ್‌ಫೋನ್ ಬೆಲೆ, ಲಭ್ಯತೆ ಮತ್ತು ಫೋನ್‌ನ ಪ್ರಮುಖ ವೈಶಿಷ್ಟ್ಯಗಳನ್ನು ವಿವರವಾಗಿ ನೋಡೋಣ.

Motorola Edge 60 Fusion: ಬೆಲೆ ಮತ್ತು ಲಭ್ಯತೆ
Motorola Edge 60 Fusion ಫೋನಿನ ಹೊಸ ಪ್ಯಾಂಟೋನ್ ಮೈಕೊನೊಸ್ ಬ್ಲೂ ರೂಪಾಂತರವು ಈಗ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. 8GB RAM ಮತ್ತು 256GB ಸಂಗ್ರಹಣೆಯ ಮಾದರಿಯು ₹22,999 ಬೆಲೆಯಿಂದ ಪ್ರಾರಂಭವಾಗುತ್ತದೆ. ಇನ್ನು 12GB RAM ಮತ್ತು 256GB ಸಂಗ್ರಹಣೆಯ ರೂಪಾಂತರವು ₹24,999 ಬೆಲೆಗೆ ಲಭ್ಯವಿದೆ. ಗ್ರಾಹಕರು HDFC, IDFC, ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದರೆ ₹2,000 ರಿಯಾಯಿತಿ ಪಡೆಯಬಹುದು. ಇದರಿಂದಾಗಿ ಫೋನ್‌ನ ಆರಂಭಿಕ ಬೆಲೆ ₹20,999 ಕ್ಕೆ ಇಳಿಯುತ್ತದೆ.

Motorola Edge 60 Fusion: ಪ್ರಮುಖ ವೈಶಿಷ್ಟ್ಯಗಳು
Motorola Edge 60 Fusion ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ 'ಆಲ್-ಕರ್ವ್ಡ್ OLED ಡಿಸ್ಪ್ಲೇ ಯನ್ನು ಹೊಂದಿದೆ. ಈ ಡಿಸ್ಪ್ಲೇ 4,500 ನಿಟ್‌ಗಳ ಗರಿಷ್ಠ ಹೊಳಪನ್ನು (HBM: 1,400 ನಿಟ್‌ಗಳು) ತಲುಪಬಲ್ಲದು, ಇದು ಪ್ರಖರ ಬೆಳಕಿನಲ್ಲಿಯೂ ಉತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ Edge 60 Fusion ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 SoC ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು ಫೋನ್ ಆಂಡ್ರಾಯ್ಡ್ 15-ಆಧಾರಿತ ಹಲೋ UI ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಆಂಡ್ರಾಯ್ಡ್ 15-ಆಧಾರಿತ ಹಲೋ U, Motorola AI ಮತ್ತು Google ನ AI-ಚಾಲಿತ ವೈಶಿಷ್ಟ್ಯಗಳಾದ 'ಸರ್ಕಲ್ ಟು ಸರ್ಚ್,' 'ಮ್ಯಾಜಿಕ್ ಎರೇಸರ್,' ಮತ್ತು 'ಮ್ಯಾಜಿಕ್ ಎಡಿಟರ್' ಗಳನ್ನು ಒಳಗೊಂಡಿದೆ. Motorola ಕಂಪೆನಿಯು ಈ Edge 60 Fusion ಫೋನಿಗಾಗಿ ಮೂರು ಪ್ರಮುಖ ಆಂಡ್ರಾಯ್ಡ್ ನವೀಕರಣಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ. ದೀರ್ಘಕಾಲಿಕ ಬಳಕೆಗೆ ಬೆಂಬಲವಾಗಿ, ಇದು 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಶಕ್ತಿಯುತ 5,500mAh ಬ್ಯಾಟರಿಯನ್ನು ಒಳಗೊಂಡಿದೆ.

Motorola Edge 60 Fusion: ಭಾರತದಲ್ಲಿ ಹೊಸ ಮೈಕೊನೊಸ್ ಬ್ಲೂ ಬಣ್ಣದಲ್ಲಿ ಬಿಡುಗಡೆ

ಕ್ಯಾಮೆರಾ ವಿಭಾಗದಲ್ಲಿ, Motorola Edge 60 Fusion ಫೋನ್ ಡ್ಯುಯಲ್-ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50MP Sony LYT-700C ಪ್ರಾಥಮಿಕ ಸಂವೇದಕ ಮತ್ತು 13MP ಅಲ್ಟ್ರಾವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ, ಮುಂಭಾಗದಲ್ಲಿ 32MP ಕ್ಯಾಮೆರಾ ಇದೆ. ಫೋನ್‌ನ ಬಾಳಿಕೆ ಬಗ್ಗೆ ಹೇಳುವುದಾದರೆ, ಇದು ಮಿಲಿಟರಿ-ದರ್ಜೆಯ MIL-810H ಪ್ರಮಾಣೀಕರಣ ವನ್ನು ಪಡೆದುಕೊಂಡಿದೆ. ಡಿಸ್ಪ್ಲೇ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 7i ಅನ್ನು ಬಳಸಲಾಗಿದೆ. ಅಂತಿಮವಾಗಿ, ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68+IP69 ರೇಟಿಂಗ್ ಅನ್ನು ಹೊಂದಿದೆ.

ಇದೀಗ ಹೊಸ ಮೈಕೊನೊಸ್ ಬ್ಲೂ ಬಣ್ಣದೊಂದಿಗೆ, Motorola Edge 60 Fusion ಫೋನ್ ಆಕರ್ಷಕ ವಿನ್ಯಾಸ, ಬಲಿಷ್ಠ ಕಾರ್ಯಕ್ಷಮತೆ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ನೀಡುತ್ತಿದೆ ಎನ್ನಬಹುದು. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Motorola has launched a new color option for the Edge 60 Fusion in India, named Pantone Mykonos Blue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+