Home
ಸುದ್ದಿಜಾಲ

ನಾಳೆ Motorola Edge 60 Fusion ಸೇಲ್; ಭರ್ಜರಿ ಆಫರ್ ಘೋಷಣೆ.. ಬೆಲೆ ಎಷ್ಟು? ಹೇಗಿವೆ ಫೀಚರ್ಸ್‌

Motorola Edge 60 Fusion Sale in India: ಬಹುನಿರೀಕ್ಷಿತ ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G (Motorola Edge 60 Fusion 5G) ಭಾರತದಲ್ಲಿ ಬಿಡುಗಡೆಯಾಗಿದೆ. ಕಂಪನಿಯು ಈ ಮೊಬೈಲ್‌ ಅನ್ನು ತನ್ನ Edge ಸರಣಿಯ ಅಡಿಯಲ್ಲಿ ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ, ಈ ಫೋನ್ ನಾಳೆ (ಏಪ್ರಿಲ್ 9 ರಂದು) ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಈಗಾಗಲೇ ಆರಂಭಿಕ ಮಾರಾಟದ ಪ್ರಯುಕ್ತ ಕೆಲವು ಆಫರ್ ಘೋಷಿಸಲಾಗಿದೆ. ಬನ್ನಿ, ಈ ನೂತನ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಮೊಬೈಲ್‌ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ಅಳವಡಿಸಲಾಗಿದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 5,500mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್, 256GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನಾಳೆ Motorola Edge 60 Fusion ಸೇಲ್; ವಿಶೇಷತೆಗಳೇನು? ಆಫರ್, ಬೆಲೆ ಎಷ್ಟು?

ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ವೈಶಿಷ್ಟ್ಯಗಳು

ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2,712 x 1,220 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಪಡೆದಿದೆ. ಹಾಗೆಯೇ 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 360Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಮೊಬೈಲ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 7400 ಪ್ರೊಸೆಸರ್ ಹೊಂದಿದೆ. ಇದು ಈ ಪ್ರೊಸೆಸರ್ ಹೊಂದಿರುವ ಭಾರತದಲ್ಲಿ ಮೊದಲ ಫೋನ್ ಎಂಬ ಖ್ಯಾತಿ ಪಡೆದಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G615 MC2 ಜಿಪಿಯು ಹೊಂದಿದೆ. ಈ ಫೋನ್ 8GB RAM, 12GB RAM ಹೊಂದಿದೆ. ಜೊತೆಗೆ 256GB ಸ್ಟೋರೇಜ್ ಆಯ್ಕೆ ಇದೆ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್ ಲೈಟ್ ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು ಮ್ಯಾಕ್ರೋ ಲೆನ್ಸ್ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 68W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್ ಪಡೆದಿದೆ. ಹಾಗೆಯೇ ಬ್ಲೂಟೂತ್ 5.4, ವೈ-ಫೈ 6, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಬೆಲೆ ಮತ್ತು ಆಫರ್

8GB RAM + 256GB ಸ್ಟೋರೇಜ್ = 22,999 ರೂ.
12GB RAM + 256GB ಸ್ಟೋರೇಜ್ = 24,999 ರೂ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ ಮೊಬೈಲ್ ಪ್ಯಾಂಟೋನ್ ಅಮೆಜಾನೈಟ್, ಪ್ಯಾಂಟೋನ್ ಸ್ಲಿಪ್‌ಸ್ಟ್ರೀಮ್ ಮತ್ತು ಪ್ಯಾಂಟೋನ್ ಜೆಫಿರ್ ಬಣ್ಣಗಳಲ್ಲಿ ಮಾರಾಟವಾಗಲಿದೆ. ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ ಈ ಫೋನ್ ಖರೀದಿ ಮೇಲೆ 2,000 ರೂ. ರಿಯಾಯಿತಿ ಘೋಷಿಸಿದೆ. ಡಿಸ್ಕೌಂಟ್‌ನೊಂದಿಗೆ ನೀವು ಮೂಲ ರೂಪಾಂತರವನ್ನು 20,999 ರೂ.ಗೆ ಖರೀದಿಸಬಹುದು. ಈ ಮೊಬೈಲ್ ನಾಳೆ (ಏಪ್ರಿಲ್ 9) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ರಿಲಯನ್ಸ್ ಡಿಜಿಟಲ್ ಸೇರಿದಂತೆ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿಯೂ ಈ ಫೋನನ್ನು ಖರೀದಿಸಬಹುದು.

Best Mobiles in India

English summary
Motorola Edge 60 Fusion Will Go on First Sale in India Tomorrow via Flipkart: Price, offers and Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+