ಬರುತ್ತಿದೆ Motorola Edge 60; 50MP ಸೋನಿ ಕ್ಯಾಮೆರಾ.. 5500mAh ಬ್ಯಾಟರಿ.. ಫೋಟೋ, ಫೀಚರ್ಸ್ ಲೀಕ್!
ಮೊಟೊರೊಲಾ ತನ್ನ ಅಭಿಮಾನಿಗಳಿಗೆ ಡಬಲ್ ಖುಷಿ ಸುದ್ದಿ ನೀಡಿದೆ. ಶೀಘ್ರದಲ್ಲೇ ಮತ್ತೊಂದು ಹೊಸ 5G ಫೋನ್ ಭಾರತೀಯ ಗ್ರಾಹಕರ ಕೈ ಸೇರುವುದು ಖಚಿತವಾಗಿದೆ. ಹೌದು, ಕಂಪನಿಯು ಇತ್ತೀಚೆಗೆ ಬಹುನಿರೀಕ್ಷಿತ ಮೊಟೊರೊಲಾ ಎಡ್ಜ್ 60 ಫ್ಯೂಷನ್ (Motorola Edge 60 Fusion) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 22,999 ರೂ. ಆಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಹೊಂದಿರುವ ದೇಶದ ಮೊದಲ ಫೋನ್ ಇದಾಗಿದೆ. ಈ ಫೋನಿನ ಬಳಿಕ, ಇದೀಗ ಅದೇ ಸರಣಿಯ ಮತ್ತೊಂದು ಹೊಸ 5G ಮೊಬೈಲ್ ಬಿಡುಗಡೆಗೆ ಸಿದ್ಧವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಕಂಪನಿಯು ಹೊಸ ಮೊಟೊರೊಲಾ ಎಡ್ಜ್ 60 (Motorola Edge 60 Fusion) ಮೊಬೈಲ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನಿನ ಫೋಟೋಗಳು ಮತ್ತು ವಿಶೇಷತೆಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಈ ಮೂಲಕ ಮೊಟೊರೊಲಾ ಎಡ್ಜ್ 60 ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಗೆ ಬರುವ ಸುಳಿವು ನೀಡಿದೆ. ಸೋರಿಕೆಯಾದ ಫೋಟೋದಲ್ಲಿ, ಮೊಟೊರೊಲಾ ಎಡ್ಜ್ 60 5G ಮೊಬೈಲ್ ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ಕಂಡುಬಂದಿದೆ. ಈ ಫೋನಿನ ವಿನ್ಯಾಸ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಮೊಟೊರೊಲಾ ಎಡ್ಜ್ 60 ವಿನ್ಯಾಸ
ಮೊಟೊರೊಲಾ ಎಡ್ಜ್ 60 5G ಫೋನಿನ ವಿನ್ಯಾಸ ಮೊಟೊರೊಲಾ ಎಡ್ಜ್ 60 ಫ್ಯೂಷನ್‌ಗೆ ಹೋಲುತ್ತದೆ. ಮುಂಭಾಗದಲ್ಲಿ ದುಂಡಗಿನ ಅಂಚಿನ ಪಂಚ್ ಹೋಲ್ ಡಿಸ್ಪ್ಲೇ ಕಾಣಬಹುದು. ಹಾಗೆಯೇ ಹಿಂಭಾಗದಲ್ಲಿ ಚರ್ಮದ ಮುಕ್ತಾಯ ಫಲಕವಿದೆ. ಈ ಮೊಬೈಲ್‌ನ ಹಿಂಭಾಗದ ಕ್ಯಾಮೆರಾ ಸೆಟಪ್ ಗಮನ ಸೆಳೆಯುತ್ತಿದೆ. ಇದನ್ನು ಮೇಲಿನ ಬಲಭಾಗದಲ್ಲಿ ಚೌಕಾಕಾರದಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಮೂರು ಕ್ಯಾಮೆರಾಗಳು (ಲೆನ್ಸ್) ಮತ್ತು ಫ್ಲ್ಯಾಷ್ ಲೈಟ್ ಇರಿಸಲಾಗಿದೆ. ಬಲ ಭಾಗದಲ್ಲಿ (ಚೌಕಟ್ಟಿನಲ್ಲಿ) ವಾಲ್ಯೂಮ್ ಮತ್ತು ಪವರ್ ಬಟನ್‌ಗಳನ್ನು ಕಾಣಬಹುದು. ಕೆಳಗಿನ ಫ್ರೇಮ್‌ನಲ್ಲಿ ಸಿಮ್ ಸ್ಲಾಟ್, ಯುಎಸ್‌ಬಿ ಮತ್ತು ಸ್ಪೀಕರ್ ಇದೆ. ಮೇಲಿನ ಫ್ರೇಮ್‌ನಲ್ಲಿ ಡಾಲ್ಬಿ ಬ್ರ್ಯಾಂಡಿಂಗ್ ಕಾಣಬಹುದು.
ಮೊಟೊರೊಲಾ ಎಡ್ಜ್ 60 ವೈಶಿಷ್ಟ್ಯಗಳು (ಸೋರಿಕೆ)
ಫೋಟೋ ಮತ್ತು ವಿನ್ಯಾಸದ ಜೊತೆಗೆ ಮೊಟೊರೊಲಾ ಎಡ್ಜ್ 60 ಫೋನಿನ ಕೆಲವು ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಅದರಂತೆ, ಈ ಮೊಬೈಲ್ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಮೊಬೈಲ್‌ನಲ್ಲಿರುವ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್‌ನಲ್ಲಿಯೇ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಫೋನ್ 12GB RAM ಮತ್ತು 256GB ಸ್ಟೋರೇಜ್ ಆಯ್ಕೆ ಹೊಂದಿರುವ ಸಾಧ್ಯತೆಯಿದೆ. ಈ ಮೊಬೈಲ್ 5500mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಇನ್ನು ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಇದು 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿರಲಿದೆ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ ವೈಶಿಷ್ಟ್ಯಗಳು
ಮೊಟೊರೊಲಾ ಎಡ್ಜ್ 60 ಫ್ಯೂಷನ್ ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2,712 x 1,220 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 120Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರ ಬೆಂಬಲ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಸಹ ಹೊಂದಿದೆ. ಈ ಮೊಟೊರೊಲಾ ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7400 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.
ಮೊಟೊರೊಲಾ ಎಡ್ಜ್ 60 ಫ್ಯೂಷನ್ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಎಲ್‌ಇಡಿ ಫ್ಲ್ಯಾಷ್ ಲೈಟ್ ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಹಾಗೆಯೇ 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು ಮ್ಯಾಕ್ರೋ ಲೆನ್ಸ್ ಹೊಂದಿದೆ. ಇನ್ನು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಲಭ್ಯವಿದೆ. ಈ ಫೋನ್ 8GB RAM ಮತ್ತು 12GB RAM ಹೊಂದಿದೆ. ಇದರೊಂದಿಗೆ 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಮೊಟೊರೊಲಾ ಎಡ್ಜ್ 60 ಫ್ಯೂಷನ್ ಮೊಬೈಲ್ 5,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 68W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ. ಇದು IP69 ರೇಟಿಂಗ್, ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಬ್ಲೂಟೂತ್ 5.4, ವೈ-ಫೈ 6, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications