ಏ.15ಕ್ಕೆ ಲಾಂಚ್! ಬರಲಿದೆ Motorola Edge 60 Stylus ಫೋನ್; 50MP + 32MP ಕ್ಯಾಮೆರಾ, ಬಿಗ್ ಬ್ಯಾಟರಿ.. ಬೆಲೆ ಎಷ್ಟು?
ಮೊಟೊರೊಲಾ ತನ್ನ ಹೊಸ ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮೊಟೊರೊಲಾ ಎಡ್ಜ್ 60 ಫ್ಯೂಷನ್ ಬಳಿಕ, ಇದೀಗ ಕಂಪನಿಯು ಅದೇ ಸರಣಿಯ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ. ಹೌದು, ಮೊಟೊರೊಲಾ ಎಡ್ಜ್ 60 ಸ್ಟೈಲಸ್ (Motorola Edge 60 Stylus) ಮೊಬೈಲ್ ಭಾರತಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಫೋನಿನ ಮೈಕ್ರೋ ಸೈಟ್ ಲೈವ್ ಆಗಿದೆ. ಇಲ್ಲಿ ಫೋನಿನ ಫೋಟೋ, ವೈಶಿಷ್ಟ್ಯಗಳು ಮತ್ತು ಇನ್ನಿತರ ವಿವರಗಳನ್ನು ಬಹಿರಂಗಪಡಿಸಲಾಗಿದೆ.
ಹೌದು, ನೂತನ ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಮೊಬೈಲ್ ಏಪ್ರಿಲ್ 15 ರಂದು ಭಾರತದಲ್ಲಿ ಲಾಂಚ್ ಆಗಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯೊಂದಿಗೆ ಬರಲಿದೆ. ಇದರೊಂದಿಗೆ 8GB RAM ಮತ್ತು 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 68W ಟರ್ಬೊಪವರ್ಮೊ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಬಿಡುಗಡೆ ವಿವರಗಳು
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಮೊಬೈಲ್ ಏಪ್ರಿಲ್ 15 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಫೋನನ್ನು ಕಂಪನಿಯ ವೆಬ್‌ಸೈಟ್ ಮೂಲಕ ಅನಾವರಣಗೊಳಿಸಲಾಗುತ್ತದೆ. ಜೊತೆಗೆ ಈ ಫೋನಿನ ಬೆಲೆ ಮತ್ತು ಮಾರಾಟದ ವಿವರಗಳ ಬಗ್ಗೆ ಮಾಹಿತಿ ನೀಡಲಾಗುವುದು. ಸ್ಮಾರ್ಟ್ ಎಸ್ ಪೆನ್ ಹೊಂದಿರುವ ಈ 5G ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಎರಡು (PANTONE Surf the Web ಮತ್ತು PANTONE Gibraltar Sea) ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಮೊಟೊರೊಲಾ ಎಡ್ಜ್ 60 ಸ್ಟೈಲ್ ಸ್ಮಾರ್ಟ್‌ಫೋನ್ 6.67 ಇಂಚಿನ ಸೂಪರ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ 2.5D ಕರ್ವ್ 1.5K ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2712 x 1220 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಫೋನ್ 120Hz ರಿಫ್ರೆಶ್ ದರ, 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು ಆಕ್ವಾ ಟಚ್ ವೈಶಿಷ್ಟ್ಯವನ್ನು ಹೊಂದಿದೆ. ಈ ಮೊಬೈಲ್ ಗೊರಿಲ್ಲಾ ಗ್ಲಾಸ್ 3 ತಂತ್ರಜ್ಞಾನ ಮತ್ತು ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಮೊಟೊರೊಲಾ ಎಡ್ಜ್ 60 ಸ್ಟೈಲ್ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7S ಜೆನ್ 2 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾದ ಸಿಪಿಯು ಆಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಫೋನಿನಲ್ಲಿ ಅಡ್ರಿನೊ 710 ಜಿಪಿಯು ಸಹ ಅಳವಡಿಸಲಾಗಿದೆ.

ಕ್ಯಾಮೆರಾ ಸೆಟಪ್
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್ ಲೈಟ್ ಹೊಂದಿದೆ. ಇದರ ಜೊತೆಗೆ ದ್ವಿತೀಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 3 ಇನ್ 1 ಲೈಟ್ ಸೆನ್ಸರ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಟೊರೊಲಾ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು, ಈ ಫೋನ್ 68W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಫೋನ್ ಪೂರ್ಣ ಚಾರ್ಜ್‌ನಲ್ಲಿ 35 ಗಂಟೆಗಳ ಬ್ಯಾಕಪ್ ನೀಡುತ್ತದೆ.
ಇತರೆ ವೈಶಿಷ್ಟ್ಯಗಳು
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಮೊಬೈಲ್ MIL-STD-810H ಮಿಲಿಟರಿ ದರ್ಜೆಯ ಪ್ರಮಾಣೀಕೃತವಾಗಿದೆ. ಇದು IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಬ್ಲೂಟೂತ್ 5.4, ವೈ-ಫೈ 6 ಜೊತೆಗೆ ಎನ್‌ಎಫ್‌ಸಿ ಬೆಂಬಲ ಹೊಂದಿದೆ. ಹಾಗೆಯೇ ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮಾಸ್ ಸಹ ಲಭ್ಯವಿದೆ. ಈ ಫೋನಿನಲ್ಲಿ ಮೋಟೋ ಎಐ (AI) ಸಹ ಇರುತ್ತದೆ.


Click it and Unblock the Notifications








