ಇಂದು Motorola Edge 60 Stylus ಲಾಂಚ್; 50MP + 32MP ಕ್ಯಾಮೆರಾಗಳು.. ಶಕ್ತಿಶಾಲಿ ಬ್ಯಾಟರಿ.. ಕಡಿಮೆ ಬೆಲೆ!
ಮೊಬೈಲ್ ಪ್ರಿಯರ ಕಾಯುವಿಕೆ ಮುಗಿಯಿತು! ಬಹುನಿರೀಕ್ಷಿತ ಮೊಟೊರೊಲಾ ಸ್ಮಾರ್ಟ್‌ಫೋನ್ ಇಂದು (ಏಪ್ರಿಲ್ 15) ಭಾರತಕ್ಕೆ ಬರಲಿದೆ. ಹೌದು, ನೂತನ ಮೊಟೊರೊಲಾ ಎಡ್ಜ್ 60 ಸ್ಟೈಲಸ್ (Motorola Edge 60 Stylus) ಮೊಬೈಲ್ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ತನ್ನ ಎಡ್ಜ್ 60 ಸರಣಿಯಲ್ಲಿ ಈ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದೆ. ವಿಶೇಷವೆಂದರೆ, ಇತ್ತೀಚೆಗೆ ಇದೇ ಸರಣಿಯಲ್ಲಿ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಅನ್ನು ಲಾಂಚ್ ಮಾಡಿದೆ. ಬನ್ನಿ, ಹೊಸ ಫೋನಿನ ನಿರೀಕ್ಷಿತ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ.
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಫೋನಿನ ಮೈಕ್ರೋ ಸೈಟ್ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ಈ ಸ್ಮಾರ್ಟ್‌ಫೋನ್ 24,000 ರೂ.ಗಿಂತ ಕಡಿಮೆ ಬೆಲೆ ಹೊಂದಿರಲಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ + 32 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಲಭ್ಯವಿರುತ್ತದೆ. ಜೊತೆಗೆ 8GB RAM + 256GB ಸ್ಟೋರೇಜ್, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಇಂದು ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಲಾಂಚ್
ಕಂಪನಿಯು ಇಂದು (ಏಪ್ರಿಲ್ 15) ಅಧಿಕೃತವಾಗಿ ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಫೋನನ್ನು ಅನಾವರಣಗೊಳಿಸುತ್ತಿದೆ. ಕಂಪನಿಯ ವೆಬ್‌ಸೈಟ್ ಮೂಲಕ ಈ ಫೋನನ್ನು ಲಾಂಚ್ ಮಾಡಲಾಗುತ್ತದೆ. ಸ್ಮಾರ್ಟ್ ಎಸ್ ಪೆನ್ ಹೊಂದಿರುವ ಈ ಮೊಬೈಲ್ ಎರಡು (PANTONE Surf the Web ಮತ್ತು PANTONE Gibraltar Sea) ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಮಧ್ಯಾಹ್ನ 12 ಗಂಟೆಯ ಬಳಿಕೆ ಈ ಫೋನಿನ ಬೆಲೆ ಮತ್ತು ಮಾರಾಟದ ವಿವರಗಳು ಲಭ್ಯವಾಗಲಿವೆ.
ಮೊಟೊರೊಲಾ ಎಡ್ಜ್ 60 ಸ್ಟೈಲಸ್: ಟಾಪ್ 5 ವೈಶಿಷ್ಟ್ಯಗಳು
1. ಡಿಸ್ಪ್ಲೇ ವಿವರ
ಮೊಟೊರೊಲಾ ಎಡ್ಜ್ 60 ಸ್ಟೈಲ್ ಮೊಬೈಲ್ 6.67 ಇಂಚಿನ ಸೂಪರ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ 2.5D ಕರ್ವ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2712 x 1220 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಈ ಫೋನ್ 120Hz ರಿಫ್ರೆಶ್ ದರ, 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಈ ಫೋನಿ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಹೊಂದಿದೆ.
2. ಪ್ರೊಸೆಸರ್ ಸಾಮರ್ಥ್ಯ
ಮೊಟೊರೊಲಾ ಎಡ್ಜ್ 60 ಸ್ಟೈಲ್ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7S ಜೆನ್ 2 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಓಎಸ್ ಜೊತೆಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ ಗ್ರಾಫಿಕ್ಸ್‌ಗಾಗಿ, ಅಡ್ರಿನೊ 710 ಜಿಪಿಯು ಸಹ ಲಭ್ಯವಿದೆ.
3. ಕ್ಯಾಮೆರಾ ಸೆಟಪ್
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್ ಲೈಟ್ ಜೊತೆಗೆ ಬರುತ್ತದೆ. ಹಾಗೆಯೇ ದ್ವಿತೀಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಮತ್ತು 3 ಇನ್ 1 ಲೈಟ್ ಸೆನ್ಸರ್ ಸಹ ಹೊಂದಿದೆ. ಈ ಮೊಟೊರೊಲಾ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

4. ಬ್ಯಾಟರಿ ಮತ್ತು ಚಾರ್ಜಿಂಗ್
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, ಈ ಫೋನ್ 68W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
5. ಇತರೆ ವೈಶಿಷ್ಟ್ಯಗಳು
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ, IP68 ರೇಟಿಂಗ್ ಪಡೆದಿದೆ. ಇದು MIL-STD-810H ಮಿಲಿಟರಿ ದರ್ಜೆಯ ಪ್ರಮಾಣೀಕೃತವಾಗಿದೆ. ಈ ಫೋನಿನಲ್ಲಿ ಮೋಟೋ ಎಐ (AI) ಸಹ ಇರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಬ್ಲೂಟೂತ್ 5.4, ವೈ-ಫೈ 6 ಜೊತೆಗೆ ಎನ್‌ಎಫ್‌ಸಿ ಬೆಂಬಲ ಹೊಂದಿದೆ. ಹಾಗೆಯೇ ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮಾಸ್ ಸಹ ಇರುತ್ತದೆ.


Click it and Unblock the Notifications








