Motorola: 32 ಇಂಚಿನ ಡಿಸ್ಪ್ಲೇ, 20W ಸ್ಪೀಕರ್.. ಅಗ್ಗದ ಬೆಲೆಗೆ ಸ್ಮಾರ್ಟ್ ಟಿವಿ ಸೇಲ್!
ಸ್ಮಾರ್ಟ್ ಟಿವಿ ಖರೀದಿಸುವವರಿಗೆ ಶುಭ ಸುದ್ದಿ ಇದೆ. 32 ಇಂಚಿನ ಟಿವಿ ಕೇವಲ 10 ಸಾವಿರ ರೂ.ಗಳಿಗೆ ಲಭ್ಯವಿದೆ. ಹೌದು, ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಉತ್ಸವದಲ್ಲಿ ಮೊಟೊರೊಲಾ ಕಂಪನಿಯ QLED ಟಿವಿಯನ್ನು 10,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈಗಾಗಲೇ ಮಾರಾಟವು ಪ್ರಾರಂಭವಾಗಿದೆ ಮತ್ತು ಭರ್ಜರಿ ರಿಯಾಯಿತಿಗಳ ಜೊತೆಗೆ, ಕಂಪನಿಯು ಬ್ಯಾಂಕ್ ಆಫರ್‌ಗಳನ್ನು ಸಹ ನೀಡುತ್ತಿದೆ. ಇದರ ಮೇಲೆ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ. ಬನ್ನಿ, ಈ ಅಗ್ಗದ ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳು ಮತ್ತು ಇನ್ನಿತರ ವಿವರಗಳನ್ನು ತಿಳಿಯೋಣ.
ಮೊಟೊರೊಲಾ ಎನ್ವಿಷನ್X 32 ಇಂಚಿನ ಕ್ಯೂಎಲ್‌ಇಡಿ ಎಚ್‌ಡಿ ರೆಡಿ ಸ್ಮಾರ್ಟ್ ಗೂಗಲ್ ಟಿವಿ (MOTOROLA EnvisionX 80 cm (32 inch) QLED HD Ready Smart Google TV) ಪ್ರಸ್ತುತ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 10,999 ರೂ.ಗಳಿಗೆ ಮಾರಾಟವಾಗುತ್ತಿದೆ. ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲದೆ ಅಗ್ಗದ ದರದಲ್ಲಿ ಈ ಟಿವಿಯನ್ನು ಖರೀದಿಸಬಹುದು. ಈ ಕ್ಯೂಎಲ್‌ಇಡಿ ಟಿವಿ ಮೀಡಿಯಾಟೆಕ್ 9216 ಕ್ವಾಡ್-ಕೋರ್ ಪ್ರೊಸೆಸಸರ್ ಹೊಂದಿದೆ. ಇದರೊಂದಿಗೆ, 20W ಸ್ಪೀಕರ್‌ಗಳನ್ನು ಒಳಗೊಂಡಿದೆ.

ಕ್ಯೂಎಲ್‌ಇಡಿ ಸ್ಮಾರ್ಟ್ ಟಿವಿಯಲ್ಲಿ ಬೆಲೆ ಮತ್ತು ಆಫರ್‌ಗಳು
ನೀವು ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ (BOB), ಯೆಸ್ ಬ್ಯಾಂಕ್ ಮತ್ತು ಆರ್‌ಬಿಎಲ್ (RBL) ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಈ ಟಿವಿ ಖರೀದಿಸಬಹುದು. 10,999 ರೂ. ಬೆಲೆಯ ಈ ಸ್ಮಾರ್ಟ್ ಟಿವಿ ಮೇಲೆ 1,750 ರೂ.ಗಳ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಡಿಸ್ಕೌಂಟ್ ಬಳಿಕ ಇದರ ಬೆಲೆ 9,249 ರೂ.ಗೆ ಇಳಿಕೆಯಾಗಲಿದೆ. 1,750 ರೂ.ಗಳ ಈ ರಿಯಾಯಿತಿಯು ಇಎಂಐ ವಹಿವಾಟುಗಳಿಗೆ ಮಾತ್ರ ಲಭ್ಯವಿರುತ್ತದೆ.
ನೀವು ಇಎಂಐ ಆಯ್ಕೆ ಬೇಡ ಅಂದ್ರೆ ಮತ್ತು ಒಂದೇ ಬಾರಿಗೆ ಸಂಪೂರ್ಣ ಹಣ ಪಾವತಿಸಲು ಬಯಸಿದರೆ, ನಿಮಗೆ ಇನ್ನೂ 1,500 ರೂ.ಗಳ ರಿಯಾಯಿತಿಯನ್ನು ಲಭ್ಯವಿದೆ. ಈ ರಿಯಾಯಿತಿಯ ನಂತರ, ಸ್ಮಾರ್ಟ್ ಟಿವಿಯ ಬೆಲೆ 9,499 ರೂ.ಗೆ ಇಳಿಕೆಯಾಗುತ್ತದೆ. ಫ್ಲಿಪ್‌ಕಾರ್ಟ್ ಕೇವಲ 899 ರೂ. ಹೆಚ್ಚುವರಿ ಶುಲ್ಕದೊಂದಿಗೆ 3 ವರ್ಷಗಳ ಸಂಪೂರ್ಣ ವಾರಂಟಿ ಕವರೇಜ್ ಅನ್ನು ನೀಡುತ್ತಿದೆ. ಟಿವಿಯನ್ನು ಮನೆಯಲ್ಲಿಯೇ ದುರಸ್ತಿ ಮಾಡಲಾಗುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಪಡೆಯಿರಿ.
ಕ್ಯೂಎಲ್‌ಇಡಿ ಸ್ಮಾರ್ಟ್ ಟಿವಿಯ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಈ ಮೊಟೊರೊಲಾ ಸ್ಮಾರ್ಟ್ ಟಿವಿಯು 32 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಕ್ಯೂಎಲ್‌ಇಡಿ ಪ್ಯಾನೆಲ್ ಆಗಿದೆ. ಡಿಸ್ಪ್ಲೇ 1366 x 768 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದು 60Hz ರಿಫ್ರೆಶ್ ದರ ಮತ್ತು 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲವನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕ್ಯೂಎಲ್‌ಇಡಿ ಸ್ಮಾರ್ಟ್ ಟಿವಿ ಮೀಡಿಯಾಟೆಕ್ 9216 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದು 1.5GB RAM ಮತ್ತು 8GB ROM ಅನ್ನು ಹೊಂದಿದೆ. ಈ ಕ್ಯೂಎಲ್‌ಇಡಿ ಟಿವಿಯು ಗೂಗಲ್ ಓಎಸ್‌ನಲ್ಲಿ (Google OS) ರನ್ ಆಗುತ್ತದೆ. ಇದು ಅಂತರ್ನಿರ್ಮಿತ ಕ್ರೋಮ್‌ಕಾಸ್ಟ್ (Chromecast) ಬೆಂಬಲವನ್ನು ಸಹ ಹೊಂದಿದೆ.
ಆಡಿಯೋ ಗುಣಮಟ್ಟ
32 ಇಂಚಿನ ಮೊಟೊರೊಲಾ ಸ್ಮಾರ್ಟ್ ಟಿವಿ 20W ಸ್ಪೀಕರ್‌ಗಳನ್ನು ಹೊಂದಿದೆ. ಇದು ಅತ್ಯುತ್ತಮ ಆಡಿಯೋ ಗುಣಮಟ್ಟದ ಔಟ್‌ಪುಟ್ ಅನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ, 7 ಸೌಂಡ್ ಮೋಡ್‌ಗಳನ್ನು ಸಹ ಒದಗಿಸಲಾಗಿದೆ.
ಪೋರ್ಟ್‌ಗಳು ಮತ್ತು ನೆಟ್‌ವರ್ಕ್
ಈ ಟಿವಿ 3 HDMI ಮತ್ತು 2 ಯುಎಸ್‌ಬಿ ಜೊತೆಗೆ LAN ಮತ್ತು RF ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನು ಇಂಟರ್ನೆಟ್‌ನ ಮೂಲಕವೂ ನಿರ್ವಹಿಸಬಹುದು. ಇದು 2.4GHz + 5GHz ಡ್ಯುಯಲ್ ಬ್ಯಾಂಡ್ ವೈ-ಫೈಗೆ ಬೆಂಬಲವನ್ನು ಹೊಂದಿದೆ.
ಅಪ್ಲಿಕೇಶನ್ ಸಪೋರ್ಟ್
ಮೊಟೊರೊಲಾ ಸ್ಮಾರ್ಟ್ ಟಿವಿಯಲ್ಲಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಯೂಟ್ಯೂಬ್ ಅಪ್ಲಿಕೇಶನ್‌ಗಳನ್ನು ರನ್ ಮಾಡಬಹುದು.
ಇತರೆ ವೈಶಿಷ್ಟ್ಯಗಳು
ಮೊಟೊರೊಲಾ ಸ್ಮಾರ್ಟ್ ಗೂಗಲ್ ಟಿವಿಯಲ್ಲಿ ಧ್ವನಿ ಸಹಾಯಕವನ್ನು ಒದಗಿಸಲಾಗಿದೆ. ಮಾತನಾಡುವ ಮೂಲಕ ಟಿವಿಯನ್ನು ನಿರ್ವಹಿಸಬಹುದು. ಇದರ ಡಿಸ್ಪ್ಲೇ 178 ಡಿಗ್ರಿ ಅಗಲ ಇದೆ. ಟಿವಿ ಡಿಸ್ಪ್ಲೇಯಲ್ಲಿ 16.7 ಮಿಲಿಯನ್ ಬಣ್ಣಗಳು ಮತ್ತು 7 ಫೋಟೋ ವಿಧಾನಗಳು ಸಹ ಲಭ್ಯವಿರುತ್ತವೆ.


Click it and Unblock the Notifications








