ಭಾರತದಲ್ಲಿ Motorola Android 16 Beta ಆರಂಭ: ಈ 4 ಫೋನ್‌ಗಳಿಗೆ ಮೊದಲು!
ಮೋಟೊರೊಲಾ ತನ್ನ Android 16 ಬೀಟಾ ಪ್ರೋಗ್ರಾಂ ಅನ್ನು ಭಾರತದಲ್ಲಿ ವಿಸ್ತರಿಸಲು ಆರಂಭಿಸಿದೆ ಮತ್ತು ದೇಶದಲ್ಲಿ ದೇಶದಲ್ಲಿ ಇದೀಗ ಲಭ್ಯವಿರುವ ಆಯ್ದ ಮೋಟೊರೊಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅಂತಿಮ ಬಿಡುಗಡೆಗೂ ಮುನ್ನವೇ ಹೊಸ Android 16 ಅನುಭವವನ್ನು ಪರೀಕ್ಷಿಸುವ ಅವಕಾಶ ದೊರೆಯುತ್ತಿದೆ.ಈ ಹಂತದಲ್ಲಿ ಫೋಲ್ಡಬಲ್ ಫೋನ್‌ಗಳು, Edge ಸರಣಿಯ ಮಧ್ಯಮ ದರ್ಜೆಯ ಮಾದರಿಗಳು ಹಾಗೂ ಒಂದು ಬಜೆಟ್ Moto G ಫೋನ್ ಕೂಡ ಈ ಪ್ರೋಗ್ರಾಂಗೆ ಸೇರಿರುವುದು ಗಮನಾರ್ಹವಾಗಿದೆ.
ಮೋಟೊರೊಲಾ ಕಂಪನಿಯ ಅಧಿಕೃತ ಸಮುದಾಯ ಫೋರಂಗಳಲ್ಲಿ ಕಾಣಿಸಿಕೊಂಡ ಮಾಹಿತಿಯಂತೆ, ಭಾರತದಲ್ಲಿರುವ ಅರ್ಹ ಫೋನ್ ಬಳಕೆದಾರರು ಈಗಲೇ Android 16 ಬೇಟಾಗೆ ನೋಂದಾಯಿಸಬಹುದು. Android 16 ಮೂಲಕ ಬರುವ ಹೊಸ ವೈಶಿಷ್ಟ್ಯಗಳು, ಭದ್ರತಾ ಸುಧಾರಣೆಗಳು ಮತ್ತು ಕಾರ್ಯಕ್ಷಮತೆಯ ಬದಲಾವಣೆಗಳನ್ನು ಮೊದಲಿಗೆ ಅನುಭವಿಸಲು ಇದು ಉತ್ತಮ ಅವಕಾಶವಾಗಿದೆ. ಪ್ರಸ್ತುತ ಭಾರತದಲ್ಲಿ Android 16 ಬೀಟಾ ಬೆಂಬಲ ಪಡೆಯುತ್ತಿರುವ ಮೋಟೊರೊಲಾ ಫೋನ್‌ಗಳ ಪಟ್ಟಿ ಇಲ್ಲಿದೆ.
ಪ್ರಸ್ತುತ Android 16 ಬೀಟಾ ಅಪ್‌ಡೇಟ್‌ಗೆ ಅರ್ಹವಾಗಿರುವ ಮೋಟೊರೊಲಾ ಫೋನ್‌ಗಳ ಪಟ್ಟಿ ಇಲ್ಲಿದೆ:
Motorola Razr 40
Motorola Razr 40 Ultra
Motorola Edge 50 Neo
Motorola G85 5G
Edge 60 Neo ಮತ್ತು ThinkPhone 25 ಸೇರಿದಂತೆ ಕೆಲವು ಇತರ ಮೋಟೊರೊಲಾ ಮಾದರಿಗಳು ಬೇರೆ ದೇಶಗಳಲ್ಲಿ ಈ ಕಾರ್ಯಕ್ರಮದ ಭಾಗವಾಗಿವೆ. ಆದರೆ ನೀವು ಈಗ ಭಾರತದಲ್ಲಿದ್ದರೆ ಮೇಲಿನ ಫೋನ್‌ಗಳು ಮುಖ್ಯವಾಗಿವೆ.

Android 16 ಬೀಟಾಗೆ ಸೇರುವ ಮೊದಲು ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು
ಬೀಟಾ ಅಪ್‌ಡೇಟ್‌ಗೆ ನೋಂದಾಯಿಸುವ ಮುನ್ನ ನಿಮ್ಮ ಫೋನ್‌ನಲ್ಲಿ ಇತ್ತೀಚಿನ ಸ್ಥಿರ ಮೋಟೊರೊಲಾ ಸಾಫ್ಟ್‌ವೇರ್ ಇನ್‌ಸ್ಟಾಲ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ನಿಮ್ಮ ಫೋನ್‌ನ IMEI ಅಥವಾ ಸೀರಿಯಲ್ ನಂಬರ್ ಅಗತ್ಯವಿರುತ್ತದೆ, ಏಕೆಂದರೆ ಮೋಟೊರೊಲಾ ಅದನ್ನು ಅರ್ಹತೆ ಪರಿಶೀಲನೆಗಾಗಿ ಬಳಸುತ್ತದೆ. ಇದರ ಜೊತೆಗೆ Motorola Community ಖಾತೆ ಇರಬೇಕು, ಏಕೆಂದರೆ ಸಂಪೂರ್ಣ ಪ್ರಕ್ರಿಯೆ ಅಲ್ಲಿಯೇ ನಡೆಯುತ್ತದೆ.ಇದು ಪರೀಕ್ಷಾ ಹಂತದಲ್ಲಿರುವ ಸಾಫ್ಟ್‌ವೇರ್ ಆಗಿರುವುದರಿಂದ, ಕೆಲವೊಮ್ಮೆ ಬಗ್‌ಗಳು, ಅಪ್ರತೀಕ್ಷಿತ ಸಮಸ್ಯೆಗಳು ಅಥವಾ ಬ್ಯಾಟರಿ ಬಳಕೆಯಲ್ಲಿ ವ್ಯತ್ಯಾಸಗಳು ಕಂಡುಬರುವ ಸಾಧ್ಯತೆ ಇದೆ. ಆದ್ದರಿಂದ ದಿನನಿತ್ಯದ ಕೆಲಸಗಳಿಗೆ ಅವಲಂಬಿಸುವ ಮುಖ್ಯ ಫೋನ್‌ನಲ್ಲಿ ಇದನ್ನು ಇನ್‌ಸ್ಟಾಲ್ ಮಾಡುವುದನ್ನು ಯೋಚಿಸಿ ಮಾಡುವುದು ಉತ್ತಮ.
Android 16 ಬೀಟಾಗೆ ನೋಂದಾಯಿಸುವ ವಿಧಾನ
ಮೊದಲು Motorola Community ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗಿನ್ ಆಗಿ ಅಥವಾ ಹೊಸ ಖಾತೆ ತೆರೆಯಿರಿ. ನಂತರ ನಿಮ್ಮ ಪ್ರೊಫೈಲ್‌ನಲ್ಲಿ ಫೋನ್‌ನ IMEI ಅಥವಾ ಸೀರಿಯಲ್ ನಂಬರ್ ಸೇರಿಸಿ. ಅದಾದ ಬಳಿಕ Motorola Feedback Network (MFN) ಗೆ opt-in ಆಯ್ಕೆ ಮಾಡಿ. ಇದರಿಂದ ನಿಮ್ಮ ಖಾತೆ ಬೀಟಾ ಪರೀಕ್ಷಾ ವ್ಯವಸ್ಥೆಗೆ ಸೇರಿಸಲಾಗುತ್ತದೆ. ನಂತರ MFN Beta Testing Opportunities ಪುಟಕ್ಕೆ ಹೋಗಿ. ನಿಮ್ಮ ಫೋನ್ ಅರ್ಹವಾಗಿದ್ದರೆ, ಅಲ್ಲಿ Android 16 ಆಯ್ಕೆಯಾಗಿ ಕಾಣಿಸುತ್ತದೆ. ನೋಂದಣಿ ಲಿಂಕ್ ತೆರೆಯಿಸಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಅರ್ಜಿ ಅನುಮೋದನೆಯಾದ ನಂತರ ಇಮೇಲ್ ಮೂಲಕ ಮಾಹಿತಿ ಬರಲಿದೆ. ನಂತರ Settings- System updates- Check for updates ಮೂಲಕ ಅಪ್‌ಡೇಟ್ ಡೌನ್‌ಲೋಡ್ ಮಾಡಬಹುದು.
ಅಪ್‌ಡೇಟ್ ಇನ್‌ಸ್ಟಾಲ್ ಮಾಡುವ ಮುನ್ನ ಗಮನಿಸಬೇಕಾದ ವಿಷಯಗಳು
Android 16 ಬೀಟಾ ಅಪ್‌ಡೇಟ್ ಗಾತ್ರವು ಸಾಮಾನ್ಯವಾಗಿ 1GB ಕ್ಕಿಂತ ಹೆಚ್ಚು ಇರಬಹುದು. ಆದ್ದರಿಂದ ಫೋನ್‌ನಲ್ಲಿ ಸಾಕಷ್ಟು ಖಾಲಿ ಸ್ಟೋರೇಜ್ ಇರಬೇಕು. ಅಪ್‌ಡೇಟ್ ಪ್ರಾರಂಭಿಸುವ ಮೊದಲು ಕನಿಷ್ಠ 30 ಶೇಕಡಾ ಬ್ಯಾಟರಿ ಚಾರ್ಜ್ ಇರಲಿ ಎಂದು ಮೋಟೊರೊಲಾ ಶಿಫಾರಸು ಮಾಡಿದೆ. ಬೀಟಾ ಹಂತದಲ್ಲಿರುವುದರಿಂದ ಕೆಲವು ಆ್ಯಪ್‌ಗಳು ಸರಿಯಾಗಿ ಕೆಲಸ ಮಾಡದೇ ಇರಬಹುದು ಅಥವಾ ಫೋನ್ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಬಹುದು. ಇದು ಪರೀಕ್ಷಾ ಆವೃತ್ತಿಯಲ್ಲಿ ಸಹಜ. ಒಟ್ಟಾರೆಯಾಗಿ, ಹೊಸ Android ವೈಶಿಷ್ಟ್ಯಗಳನ್ನು ಮೊದಲಿಗೆ ಅನುಭವಿಸಲು ಬಯಸುವ ಮೋಟೊರೊಲಾ ಬಳಕೆದಾರರಿಗೆ Android 16 ಬೀಟಾ ಕಾರ್ಯಕ್ರಮವು ಉತ್ತಮ ಅವಕಾಶ ಎಂದು ಹೇಳಬಹುದು.


Click it and Unblock the Notifications








