Home
ಸುದ್ದಿಜಾಲ

ಇಂದು ಶುರುವಾಗಲಿದೆ ಮೊಟೊ G84 5G ಮಾರಾಟ..ಆಫರ್‌ ಬಗ್ಗೆ ಇಲ್ಲಿದೆ ಮಾಹಿತಿ!

ಮೊಟೊ ಮೊಬೈಲ್ ಕಂಪನಿಯು ಇತ್ತೀಚಿಗೆ ಮೊಟೊ G84 5G ಮೊಬೈಲ್‌ ಅನ್ನು ಬಿಡುಗಡೆ ಮಾಡಿದ್ದು, ಈ ಫೋನ್ ಅಗ್ಗದ ಬೆಲೆಯೊಂದಿಗೆ ಉತ್ತಮ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಸ್ಮಾರ್ಟ್‌ಫೋನ್ ಇಂದು (ಸೆಪ್ಟೆಂಬರ್ 8) ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಮೊದಲ ಸೇಲ್ ಆರಂಭಿಸಲಿದೆ.

ಹೌದು, ಮೊಟೊ ಕಂಪನಿಯ ಮೊಟೊರೊಲಾ G84 5G ಸ್ಮಾರ್ಟ್‌ಫೋನಿನ (12 GB RAM + 256 GB) ಮೊದಲ ಮಾರಾಟ ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ ಮೂಲಕ ಮಾರಾಟ ಪ್ರಾರಂಭವಾಗಲಿದೆ. ಆಯ್ದ ಬ್ಯಾಂಕ್‌ ಕಾರ್ಡ್‌ ಮೂಲಕ ಖರೀದಿಸಿದರೆ, ಡಿಸ್ಕೌಂಟ್‌ ಕೂಡಾ ದೊರೆಯುತ್ತದೆ.

ಇಂದು ಶುರುವಾಗಲಿದೆ ಮೊಟೊ G84 5G ಮಾರಾಟ..ಆಫರ್‌ ಬಗ್ಗೆ ಇಲ್ಲಿದೆ ಮಾಹಿತಿ!

ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಹಾಗೆಯೇ 12 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಫೋನಿನ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರುವುದು ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಇನ್ನುಳಿದಂತೆ ರಿಯಲ್‌ಮಿ C51 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮೋಟೋ G84 5G ಡಿಸ್‌ಪ್ಲೇ ಮಾಹಿತಿ :
ಮೊಟೊ G84 5G ಮೊಬೈಲ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಬೆಂಬಲಿಸಲಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ. ಜೊತೆಗೆ 1300 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಅಲ್ಲದೆ ಇದು 10-ಬಿಟ್ ಡಿಸ್‌ಪ್ಲೇ ಮತ್ತು 100% DCI-P3 ಜೊತೆಗೆ HDR10+ ಅನ್ನು ಸಹ ಸಪೋರ್ಟ್ ಪಡೆದಿದೆ.

ಮೋಟೋ G84 5G ಪ್ರೊಸೆಸರ್‌ ಕಾರ್ಯವೈಖರಿ :
ಮೋಟೋ G84 5G ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ 14 ಕ್ಕೂ ಹೆಚ್ಚು 5G ಕನೆಕ್ಟಿವಿಟಿ ಬ್ಯಾಂಡ್‌ಗಳಿಗೆ ಬೆಂಬಲಿಸಲಿದೆ ಎನ್ನಲಾಗಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಲಿದೆ.

ಮೋಟೋ G84 5G ಕ್ಯಾಮೆರಾ ಸೆನ್ಸಾರ್‌ :
ಮೋಟೋ G84 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸ್‌ಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸ್‌ಲ್‌ ಅಲ್ಟ್ರಾವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 8 ಮೆಗಾ ಪಿಕ್ಸ್‌ಲ್‌ ಮ್ಯಾಕ್ರೋ ವಿಷನ್ + ಡೆಪ್ತ್ ಸೆನ್ಸಾರ್‌ ಇದೆ.

ಮೋಟೋ G84 5G ಬ್ಯಾಟರಿ ಮತ್ತು ಇತರೆ ಫೀಚರ್ಸ್‌
ಮೋಟೋ G84 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದು 30W ವೇಗದ ವೈರ್ಡ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಫೋನ್‌ನ ಕೆಳಭಾಗದಲ್ಲಿ ಗೋಚರಿಸುವ ಸ್ಪೀಕರ್ ಗ್ರಿಲ್‌ನೊಂದಿಗೆ ಫ್ಲಾಟ್ ವಿನ್ಯಾಸವನ್ನು ಹೊಂದಿದೆ.

ಹಾಗೆಯೇ ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮಾಸ್ ಮತ್ತು ಮೋಟೋ ಸ್ಪೇಷಿಯಲ್ ಆಡಿಯೊವನ್ನು ಸಪೋರ್ಟ್ ಮಾಡುತ್ತದೆ. ಇದರ ಜೊತೆಗೆ ಮೋಟೋ ಕನೆಕ್ಟ್ ಮತ್ತು ಥಿಂಕ್‌ಶೀಲ್ಡ್ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.

ಮೋಟೋ G84 5G ಬೆಲೆ ಮತ್ತು ಲಭ್ಯತೆ
ಮೋಟೋ G84 5G ಸ್ಮಾರ್ಟ್‌ಫೋನ್‌ 12 GB RAM + 256 GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 19,999ರೂ. ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು ವಿವಾ ಮೆಜೆಂಟಾ, ಮಾರ್ಷ್‌ಮ್ಯಾಲೋ ಬ್ಲೂ ಮತ್ತು ಮಿಡ್‌ನೈಟ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Motorola G84 5G first Sale Today via Flipkart. check Offers, Price and specifications details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+