ಮಡಚಬಹುದಾದ ಸ್ಮಾರ್ಟ್‌ಪೋನ್ ಅತಿ ಶೀಘ್ರದಲ್ಲಿಯೇ ನಿಮ್ಮ ಕೈ ಸೇರಲಿದೆ..!

By Avinash
|

ಸ್ಮಾರ್ಟ್‌ಪೋನ್ ಲೋಕದಲ್ಲಿ ಆವಿಷ್ಕಾರಗಳು ನಡೆಯುತ್ತಲೆ ಇವೆ. ಇತ್ತೀಚೆಗಷ್ಟೇ ಗ್ಲಾಸ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಇರುವ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಿ ವಿವೋ ಬೀಗಿತ್ತು. ಆದರೆ, ಈಗಿನ ಸರದಿ ಮೊಟೋರೋಲಾ ಕಂಪನಿಯದ್ದು, ಸ್ಮಾರ್ಟ್‌ಪೋನ್ ಜಗತ್ತಿಗೆ ಹೊಸದಿಕ್ಕನ್ನು ತೋರಿಸಬಹುದಾದ ತಂತ್ರಜ್ಞಾನವನ್ನು ತನ್ನ ತೆಕ್ಕೆಗೆ ಮೊಟೋರೋಲಾ ಹಾಕಿಕೊಂಡಿದೆ.

ಇಂಟರ್‌ನೆಟ್‌ನಲ್ಲಿವೆ ಬರೋಬ್ಬರಿ 333.8 ಮಿಲಿಯನ್ ಡೋಮೈನ್ಸ್‌..!ಇಂಟರ್‌ನೆಟ್‌ನಲ್ಲಿವೆ ಬರೋಬ್ಬರಿ 333.8 ಮಿಲಿಯನ್ ಡೋಮೈನ್ಸ್‌..!

ಹೌದು ಚೀನಾದ ಸ್ಮಾರ್ಟ್‌ಪೋನ್ ತಯಾರಿಕಾ ಕಂಪನಿ ಮೊಟೋರೋಲಾ ಯುಎಸ್‌ನಲ್ಲಿ ಫ್ಲೇಕ್ಸಿಬಲ್, ಮಡಚಬಹುದಾದ ಆರ್ಗನಿಕ್ ಲೈಟ್ ಎಮಿಟ್ಟಿಂಗ್ ಡಯೋಡ್ (OLED) ಸ್ಮಾರ್ಟ್‌ಪೋನ್ ಪೇಟೆಂಟ್‌ನ್ನು ಪಡೆದಿದೆ. ಈ ಸ್ಮಾರ್ಟ್‌ಪೋನ್‌ನ್ನು ಕೆಳಮುಖವಾಗಿ ಅಥವಾ ಮೇಲ್ಮುಖವಾಗಿ ಮಡಚಬಹುದಾಗಿದೆ.

ಮಡಚಬಹುದಾದ ಸ್ಮಾರ್ಟ್‌ಪೋನ್ ಅತಿ ಶೀಘ್ರದಲ್ಲಿಯೇ ನಿಮ್ಮ ಕೈ ಸೇರಲಿದೆ..!

ಉನ್ನತ ತಂತ್ರಜ್ಞಾನ

ಉನ್ನತ ತಂತ್ರಜ್ಞಾನ

ಫೋಲ್ಡೆಬಲ್ ಸ್ಮಾರ್ಟ್‌ಪೋನ್‌ನ್ನು ಹಿಂಜ್‌ನಲ್ಲಿ ಉಷ್ಣದ ಅಂಶ ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಬಳಸಿದ ತಂತ್ರಜ್ಞಾನ ಉನ್ನತವಾಗಿದ್ದು, ತಾಪಮಾನದ ಸೆನ್ಸಾರ್ ಸ್ಮಾರ್ಟ್‌ಪೋನ್ ಆಫ್ ಇದ್ದಾಗಲೂ ಮತ್ತು ಕಾರ್ಯನಿರ್ವಹಿಸುವಾಗ ಕಾರ್ಯನಿರ್ವಹಿಸುತ್ತದೆ. ತಾಪಮಾನ ತುಂಬಾ ಕಡಿಮೆಯಾದರೆ ಸ್ಕ್ರೀನ ವಿರೂಪಗೊಳ್ಳುತ್ತದೆ. ಆಗ ಹಿಂಜ್ ಸ್ವಯಂಚಾಲಿತವಾಗಿ ಸರಿಪಡಿಸಲು ಬಿಸಿಯಾಗುತ್ತದೆ.

ಜೂನ್ 14ರಂದು ಪೇಟೆಂಟ್

ಜೂನ್ 14ರಂದು ಪೇಟೆಂಟ್

ಜೂನ್ 14ರಂದು ಯುನೈಟೆಡ್ ಸ್ಟೇಟ್ಸ್‌ ಪೇಟೆಂಟ್ ಅಪ್ಲಿಕೇಷನ್ ಪಬ್ಲಿಕೇಷನ್ ಪೇಟೆಂಟ್ ಪತ್ರ ನೀಡಿದೆ. ಪತ್ರದಲ್ಲಿ ವಿವರಿಸಿರುವಂತೆ ಎಲೆಕ್ಟ್ರಾನಿಕ್ ಸಾಧನ ಮತ್ತು ಕಂಪ್ಯೂಟರ್ ಪ್ರೋಗ್ರಾಂ ಉತ್ಪನ್ನವು ಮಡಚಬಹುದಾದ ಡಿಸ್‌ಪ್ಲೇ ಭಾಗದಲ್ಲಿ ತಾತ್ಕಾಲಿಕ ವಿರೂಪಗೊಳಿಸುವಿಕೆಯನ್ನು ಎದುರಿಸುವ ವಿಧಾನವಾಗಿದೆ ಎಂದು ಹೇಳಿದೆ.

2016ರಲ್ಲಿ ಅರ್ಜಿ ಸಲ್ಲಿಕೆ

2016ರಲ್ಲಿ ಅರ್ಜಿ ಸಲ್ಲಿಕೆ

ಸೆಪ್ಟೆಂಬರ್ 2016ರಲ್ಲಿ ಪೇಟೆಂಟ್‌ಗಾಗಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ವರ್ಷದ ಮೇನಲ್ಲಿ ಮಡಚಬಹುದಾದ ಸ್ಮಾರ್ಟ್‌ಪೋನ್‌ಗೆ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (World Intellectual Property Organisation) ಅನುಮೋದನೆ ನೀಡಿತು.

ಎಲ್ಲರಿಗಿಂತ ಮುಂಚೆ ಲೆನೋವೋದಿಂದ ಪ್ರಯತ್ನ

ಎಲ್ಲರಿಗಿಂತ ಮುಂಚೆ ಲೆನೋವೋದಿಂದ ಪ್ರಯತ್ನ

ಮೊಟೋರೋಲಾಕ್ಕಿಂತ ಮುಂಚೆ ಅದರ ಸಹೋದರ ಕಂಪನಿ ಲೆನೋವೋ ಎಲ್ಲರಿಗಿಂತಲೂ ಮುಂಚಿತವಾಗಿ ಮಡಚಬಹುದಾದ ಡಿವೈಸ್ ತಯಾರಿಸಲು ಮುಂದಾಗಿತ್ತು ಎಂಬುದನ್ನು ಗಮನಿಸಬೇಕಾಗಿದೆ.

ಸ್ಯಾಮಸಂಗ್‌ನಿಂದ ಮುಂದಿನ ವರ್ಷ ಬಿಡುಗಡೆ

ಸ್ಯಾಮಸಂಗ್‌ನಿಂದ ಮುಂದಿನ ವರ್ಷ ಬಿಡುಗಡೆ

ಮೊಟೋರೋಲಾ ಮಡಚಬಹುದಾದ ಸ್ಮಾರ್ಟ್‌ಪೋನ್‌ಗೆ ಪೇಟೆಂಟ್ ಪಡೆದಿದ್ದರೂ ಸ್ಯಾಮಸಂಗ್ ಮುಂದಿನ ವರ್ಷ ಮಾರುಕಟ್ಟೆಗೆ ಮಡಚಬಹುದಾದ OLED ಸ್ಮಾರ್ಟ್‌ಪೋನ್ ಬಿಡುಗಡೆಗೊಳಿಸುತ್ತೇನೆ ಎಂದಿದೆ.

Best Mobiles in India

English summary
Motorola gets foldable phone patent : Report. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X