ಮೊಟೊರೊಲಾ ಸಂಸ್ಥೆಯಿಂದ ''ಮೊಟೊರೊಲಾ ರೆವೌ'' ಸರಣಿಯ ಟಿವಿ ಬಿಡುಗಡೆಗೆ ಸಿದ್ದತೆ!
ಟೆಕ್ ವಲಯದಲ್ಲಿ ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್‌ಗಳ ಮೂಲಕ ಸೈ ಎನಿಸಿಕೊಂಡಿರುವ ಮೊಟೊರೊಲಾ ತನ್ನ ಸ್ಮಾರ್ಟ್‌ಟಿವಿಗಳಿಂದಲೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ವೈವಿಧ್ಯ,ಮಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಕಳೆದ ವರ್ಷ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದ್ದ, ಮೊಟೊರೊಲಾ ಇದೀಗ ತನ್ನ ಹೊಸ ಸ್ಮಾರ್ಟ್‌ಟಿವಿ ''ಮೊಟೊರೊಲಾ ರೆವೌ'' ಸರಣಿಯನ್ನು ಲಾಂಚ್ ಮಾಡಲು ಸಿದ್ದತೆ ನಡೆಸಿದೆ.

ಹೌದು, ಮೊಟೊರೊಲಾ ಸಂಸ್ಥೆ ತನ್ನ ಹೊಸ ಸ್ಮಾರ್ಟ್ ಟಿವಿ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಈ ಸರಣಿಯನ್ನು "ಮೊಟೊರೊಲಾ ರೆವೌ" ಸರಣಿ ಎಂದು ಹೆಸರಿಸಲಾಗಿದ್ದು, ಇದು ಆಂಡ್ರಾಯ್ಡ್ 10.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಸರಣಿ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೊಟೊರೊಲಾ ತನ್ನ ಮೊಟೊರೊಲಾ ರೆವೌ ಸರಣಿಯಲ್ಲಿ 43 ಮತ್ತು 55 ಇಂಚುಗಳಲ್ಲಿ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಲಿದೆ ಎನ್ನಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು 4K ರೆಸಲ್ಯೂಶನ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಹೊಸ ಸ್ಮಾರ್ಟ್ ಟಿವಿಗಳಲ್ಲಿ 360 ಡಿಗ್ರಿ ಸರೌಂಡ್ ಸೌಂಡ್ ಮತ್ತು ಡಾಲ್ಬಿ ಅಟ್ಮೋಸ್ 3D ಯನ್ನು ಅಳವಡಿಸಲಾಗುವುದು ಎಂದು ಮೊಟೊರೊಲಾ ಕಂಪೆನಿ ಹೇಳಿದೆ. ಇನ್ನು ಈ ಹೊಸ ಶ್ರೇಣಿಯ ಮೊಟೊರೊಲಾ ಟಿವಿಗಳು 360% ಹೆಚ್ಚು ಶಕ್ತಿಶಾಲಿ ಕ್ವಾಡ್ ಕೋರ್ ಗ್ರಾಫಿಕ್ ಪ್ರೊಸೆಸಿಂಗ್ ಎಂಜಿನ್ ನೀಡುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಮೊಟೊರೊಲಾ ಕ್ರಮವಾಗಿ 32 ಇಂಚು ಮತ್ತು 40 ಇಂಚುಗಳಲ್ಲಿ ಎಚ್‌ಡಿ ಮತ್ತು ಫುಲ್ ಎಚ್‌ಡಿ ಟಿವಿಗಳನ್ನು ನೀಡಲು ಪ್ಲ್ಯಾನ್ ರೂಪಿಸಿದೆ. ಈ ಸ್ಮಾರ್ಟ್ ಟಿವಿಗಳು Motion-blur reduction ಮತ್ತು 2.4 GHz / 5.0 GHz ಡ್ಯುಯಲ್-ಬ್ಯಾಂಡ್ ವೈಫೈ ಬೆಂಬಲದೊಂದಿಗೆ ಬರಲಿವೆ. ಈ ಹಬ್ಬದ ಅವಧಿಯಲ್ಲಿ ಮೊಟೊರೊಲಾ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಲಿದೆ. ಅಕ್ಟೋಬರ್ 16 ರಿಂದ ಪ್ರಾರಂಭವಾಗುವ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಹೊಸ ಸ್ಮಾರ್ಟ್ ಟಿವಿಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತವೆ ಎನ್ನಲಾಗಿದೆ.

ಪ್ರಸ್ತುತ ಮೊಟೊರೊಲಾ ಕಂಪೆನಿಯ 32 ಇಂಚಿನ ಎಚ್‌ಡಿ ಸ್ಮಾರ್ಟ್‌ಟಿವಿ 13,999 ರೂ ಬೆಲೆ ಹೊಂದಿದೆ. ಹಾಗೇಯೇ 43 ಇಂಚಿನ ಫುಲ್ ಹೆಚ್‌ಡಿ ಟಿವಿ ಬೆಲೆ, 24,999,ರೂ ಮತ್ತು ಯುಹೆಚ್‌ಡಿ ಮಾದರಿಯು 29,999 ರೂ ಬೆಲೆಯನ್ನು ಹೊಂದಿದೆ. ಇನ್ನು 55 ಇಂಚಿನ ಯುಹೆಚ್‌ಡಿ ಮಾದರಿಯನ್ನು 39,999 ರೂ ಬೆಲೆಯನ್ನು ಹೊಂದಿದೆ. ಅಲ್ಲದೆ ಇದರ ಟಾಪ್-ಎಂಡ್ ಮಾದರಿಯು 65 ಇಂಚಿನ ಯುಹೆಚ್‌ಡಿ ಪ್ಯಾನೆಲ್‌ನೊಂದಿಗೆ ಬರುತ್ತದೆ ಮತ್ತು ಇದರ ಬೆಲೆ, 64,999 ರೂ,ಆಗಿದೆ.


Click it and Unblock the Notifications