ಶೀಘ್ರವೇ ಲಾಂಚ್ ಆಗಲಿದೆ ಮೊಟೊ X4 ಸ್ಮಾರ್ಟ್ ಫೋನ್
ಈ ಹಿಂದೆಯೇ ಮೊಟೊ X4 ಸ್ಮಾರ್ಟ್ ಫೋನ್ ಲಾಂಚ್ ಆಗಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ ಎನ್ನಲಾಗಿದೆ.
ಲಿನೊವೊ ಒಡೆತನಕ್ಕೆ ಸೇರಿರುವ ಮೊಟಾರೊಲಾ ಭಾರತೀಯ ಮಾರುಕಟ್ಟೆಗೆ ಹೊಸದೊಂದು ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದೆ ಮೂಲಗಳ ಪ್ರಕಾರ ಇದೇ ತಿಂಗಳ ಅಂತ್ಯದ ವೇಳೆಗೆ ಮೊಟೊ X4 ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಲಿದೆ ಎನ್ನಲಾಗಿದೆ.

ಈ ಹಿಂದೆಯೇ ಮೊಟೊ X4 ಸ್ಮಾರ್ಟ್ ಫೋನ್ ಲಾಂಚ್ ಆಗಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಈಗಾಗಲೇ ಬರ್ಲಿನ್ ನಲ್ಲಿ ಅನಾವರಣಗೊಂಡಿರುವ ಈ ಸ್ಮಾರ್ಟ್ ಫೋನ್ ಅನ್ನು ಈ ಹಿಂದೆ ಎರಡು ಭಾರಿ ಮಾರುಕಟ್ಟೆಗೆ ಪರಿಚಯಿಸುವುದಾಗಿ ಕಂಪನಿ ಹೇಳಿತ್ತಾದರು ಮಾಡಿರಲಿಲ್ಲ.
ಮೊಟೊ X4 ಸ್ಮಾರ್ಟ್ ಫೋನ್ ಮೆಟಲ್ ಯೂನಿಬಾಡಿ ಡಿಸೈನ್ ಅನ್ನು ಒಳಗೊಂಡಿದೆ ಎನ್ನಲಾಗಿದೆ. ಸುಪರ್ ಬ್ಲಾಕ್ ಮತ್ತು ಸೂಪರ್ ಬ್ಲೂ ಬಣ್ಣಗಳಲ್ಲಿ ಈ ಫೋನ್ ದೊರೆಯಲಿದೆ. ಮುಂಭಾಗದ ಹೊಮ್ ಬಟನ್ ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ.
ಯುಎಸ್ ಬಿ ಟೈಪ್ ಸಿ ಪೋರ್ಟ್ ಇದರಲ್ಲಿದ್ದು, 3.5 ಎಂ ಎಂ ಇಯರ್ ಫೋನ್ ಜಾಕ್ ಫೋನ್ ನ ಕೆಳಭಾಗದಲ್ಲಿದೆ ಎನ್ನಲಾಗಿದೆ. 5.2 ಇಂಚಿನ FHD ಡಿಸ್ ಪ್ಲೇ ಇದಾಗಿದೆ. ಕ್ವಾಲ್ಕಮ್ ಸ್ನಾಪ್ ಡ್ರಾಗನ್ 630 ಪ್ರೋಸೆಸರ್ ಹಾಗೂ 3GB RAM ಇದರಲ್ಲಿದೆ.
ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದ್ದು, 12 MP + 8 MP ಕ್ಯಾಮೆರಾವನ್ನು ಇದರಲ್ಲಿ ನೀಡಲಾಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 16 MP ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ. ಅಲ್ಲದೇ 3000mAh ಬ್ಯಾಟರಿಯನ್ನು ಕಾಣಬಹುದಾಗಿದೆ.


Click it and Unblock the Notifications








