Subscribe to Gizbot

ಮೋಟೋರೋಲಾ ಹೊರತರಲಿದೆ ಮೋಟೋ ಮ್ಯಾಕ್ಸ್ ಫೋನ್

Written By:

ಭಾರತದಲ್ಲಿ ಹೊಸ ಮೋಟೋರೋಲಾ ಸ್ಮಾರ್ಟ್‌ಫೋನ್ ಲಾಂಚ್ ಅನ್ನು ಫ್ಲಿಪ್‌ಕಾರ್ಟ್ ಅನಾವರಣಗೊಳಿಸಿದ್ದು ಇದರ ಹೆಸರನ್ನು 'ಮೋಟೋ ಮ್ಯಾಕ್ಸ್' ಎಂದಿರಿಸಿದೆ.

ಮೋಟೋ ಬಿಸ್ಟ್ ಸ್ಮಾರ್ಟ್‌ಫೋನ್ ಅನನ್ಯ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬಂದಿದ್ದು, ಇದನ್ನು ಕಂಪೆನಿ 'ಬಾಲಿಸ್ಟಿಕ್ ನೈಲಾನ್' ಎಂದು ಕರೆದಿದೆ. ಬ್ಯಾಕ್ ಪ್ಯಾನೆಲ್ ಮಹತ್ವದ ಜೊತೆಗೆ ಡಿವೈಸ್ 3,900mAh ಬ್ಯಾಟರಿಯನ್ನು ಪಡೆದುಕೊಂಡಿದ್ದು, ಇದು 48 ಗಂಟೆಗಳ ಚಾರ್ಜ್ ಅನ್ನು ನೀಡಲಿದೆ. ಮೋಟೋರೋಲಾದ ಟರ್ಬೊ ಚಾರ್ಜರ್‌ಗೆ ಬೆಂಬಲವನ್ನು ಒದಗಿಸುವ ಈ ಡಿವೈಸ್ ಬರೇ 15 ನಿಮಿಷಗಳ ಚಾರ್ಜ್‌ನಲ್ಲಿ ಎಂಟು ಗಂಟೆಗಳ ಬ್ಯಾಟರಿ ಜೀವನವನ್ನು ಒದಗಿಸಲಿದೆ.

ಮೋಟೋರೋಲಾ ಹೊರತರಲಿದೆ ಮೋಟೋ ಮ್ಯಾಕ್ಸ್ ಫೋನ್

ಇನ್ನು ಡಿವೈಸ್ ವಿಶೇಷತೆಗಳತ್ತ ಕಣ್ಣುಹಾಯಿಸಿದಾಗ ಇದು 5.2 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ ಮತ್ತು 2.7GHZ ಸ್ನ್ಯಾಪ್‌ಡ್ರಾಗನ್ 805 ಕ್ವಾಡ್ ಕೋರ್ ಪ್ರೊಸೆಸರ್ ಹಾಗೂ 3ಜಿಬಿ RAM ಫೋನ್‌ನಲ್ಲಿದೆ.

ರಿಯರ್ ಕ್ಯಾಮೆರಾ ಸಾಮರ್ಥ್ಯ 21 ಮೆಗಾಪಿಕ್ಸೆಲ್ ಆಗಿದ್ದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್, 2 ಮೆಗಾಪಿಕ್ಸೆಲ್ ಕ್ಯಾಮೆರಾ, 64 ಜಿಬಿ ಆಂತರಿಕ ಸಂಗ್ರಹ ಅಂತೆಯೇ ಸಂಪರ್ಕ ಸೌಲಭ್ಯಗಳಾದ ಎಲ್‌ಟಿಇ ಬೆಂಬಲ, ವೈಫೈ, ಬ್ಲ್ಯೂಟೂತ್, ಆಂಡ್ರಾಯ್ಡ್ ಕಿಟ್‌ಕ್ಯಾಟ್ ಇದನ್ನು ಲಾಲಿಪಪ್‌ಗೆ ಅಪ್‌ಗ್ರೇಡ್ ಕೂಡ ಮಾಡಬಹುದಾದ ವಿಶೇಷತೆ ಇದರಲ್ಲಿದೆ.

English summary
This article tells about Motorola likely to launch Moto Maxx in India exclusively on Flipkart..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot