Subscribe to Gizbot

ಬರಲಿದೆ ಮೋಟೋರೋಲಾ 4 ಜಿ ಆವೃತ್ತಿ ಶೀಘ್ರವೇ

Written By:

ಮೋಟೋ ಜಿ ಮತ್ತು ಎಲ್‌ಟಿಇ ವೇರಿಯೇಂಟ್ ಆಗಿರುವ ಮೋಟೋ ಜಿ (ಸೆಕೆಂಡ್ ಜನರೇಶನ್) ಯ 4 ಜಿ ಮಾಡೆಲ್ ಕಂಪೆನಿಯ ಅಧಿಕೃತ ಘೋಷಣೆಯಲ್ಲಿ ಹೆಸರು ಪಡೆದಿದೆ. ಇನ್ನು ಬ್ರೆಜಿಲ್‌ನಲ್ಲಿರುವ ಮೋಟೋರೋಲಾ ಸೈಟ್‌ನಲ್ಲಿ ಎಲ್‌ಟಿಇ ಸ್ಥಾನವನ್ನು ಪಡೆದುಕೊಂಡಿದೆ.

ಮೋಟೋರೋಲಾ ಮೋಟೋ ಜಿನ ಎಲ್‌ಟಿಇ ವೇರಿಯೇಂಟ್ ಈಗಾಗಲೇ ಪಟ್ಟಿಯಲ್ಲಿದ್ದು 155 ಗ್ರಾಮ್‌ಗಳ 3ಜಿ ಆವೃತ್ತಿ 2390mAh ಬ್ಯಾಟರಿಯನ್ನು ಪಡೆದುಕೊಂಡಿದೆ, ಇದು 16ಜಿಬಿ ಮಾಡೆಲ್‌ನೊಂದಿಗೆ ಬಂದಿದೆ.

ಬರಲಿದೆ ಮೋಟೋರೋಲಾ 4 ಜಿ ಆವೃತ್ತಿ ಶೀಘ್ರವೇ

ಡ್ಯುಯಲ್ ಸಿಮ್ ಆವೃತ್ತಿಯಲ್ಲಿ ಬಂದಿರುವ ಮೋಟೋರೋಲಾ ಮೋಟೋ ಜಿ ಮೈಕ್ರೋ ಸಿಮ್ ಕಾರ್ಡ್‌ಗಳನ್ನು ಹೊಂದಿದೆ. ಇನ್ನು ಉಳಿದಂತೆ ಫೋನ್‌ನ ಇತರ ವಿಶೇಷತೆಗಳತ್ತ ಗಮನಹರಿಸಿದಾಗ ಇದು 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಗೋರಿಲ್ಲಾ ಗ್ಲಾಸ್ ಅನ್ನು ಫೋನ್ ಹೊಂದಿದೆ. 1.2GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 ಅನ್ನು ಫೋನ್ ಹೊಂದಿದ್ದು 1ಜಿಬಿ RAM ಡಿವೈಸ್‌ನಲ್ಲಿದೆ. ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಫೋನ್‌ನಲ್ಲಿದೆ.

ಫೋನ್ 8 ಮೆಗಾಪಿಕ್ಸೆಲ್ ಆಟೋಫೋಕಸ್ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು, 2 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್‌ನಲ್ಲಿದೆ. ಡ್ಯುಯಲ್ ಫ್ರಂಟ್ ಸ್ಪೀಕರ್ ಅನ್ನು ಡಿವೈಸ್ ಹೊಂದಿದ್ದು, 3ಜಿ, ವೈಫೈ ಬೆಂಬಲ ಫೋನ್‌ಗಿದೆ.

English summary
This article tells about Just like the Moto G and its LTE variant, the 4G model of the Moto G (Gen 2) has been listed ahead of an official announcement by the company. This time however, the Moto G (Gen 2) LTE has been listed on Motorola's site in Brazil.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot