Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಟ್ಟ ಮೊಟೊ G62 5G ಸ್ಮಾರ್ಟ್‌ಫೋನ್‌!..ಬೆಲೆ ಎಷ್ಟು?

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮೊಟೊರೊಲಾ ಕಂಪೆನಿ ತನ್ನದೇ ಆದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರ ಗಮನಸೆಳೆದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಮೊಟೊ G62 ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ಭಾರತದಲ್ಲಿ ಹೊಸ ಮೊಟೊ G62 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಡಾಲ್ಬಿ ಅಟ್ಮೋಸ್‌ ಒಳಗೊಂಡ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ 17,999ರೂ. ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು? ಬೆಲೆ ಎಷ್ಟಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಮೊಟೊ G62 ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, 405ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ 20:9 ರಚನೆಯ ಅನುಪಾತದೊಂದಿಗೆ ಬರಲಿದೆ.

ಪ್ರೊಸೆಸರ್‌ ಬಲವೇನು?

ಪ್ರೊಸೆಸರ್‌ ಬಲವೇನು?

ಮೊಟೊ G62 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲವನ್ನು ಪಡೆದಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಬಲವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆಯನ್ನು ನೀಡಲಿದೆ.

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಮೊಟೊ G62 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಅಪರ್ಚರ್ ಲೆನ್ಸ್‌ ಅನ್ನು ಹೊಂದಿದೆ. ಇದು ಕ್ವಾಡ್-ಪಿಕ್ಸೆಲ್ ತಂತ್ರಜ್ಞಾನ ಮತ್ತು PDAF ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಇನ್ನು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ಗಳೇನು?

ಮೊಟೊ G62 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 20W ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, 5G, 4G LTE, ಬ್ಲೂಟೂತ್ v5.1, 3.5mm ಹೆಡ್‌ಫೋನ್ ಪೋರ್ಟ್ ಮತ್ತು USB ಟೈಪ್-C ಅನ್ನು ಒಳಗೊಂಡಿದೆ. ಇದಲ್ಲದೆ ಫಿಂಗರ್‌ಪ್ರಿಂಟ್ ರೀಡರ್, ಪ್ರಾಕ್ಸಿಮಿಟಿ ಸೆನ್ಸಾರ್‌, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌, ಗೈರೊಸ್ಕೋಪ್ ಮತ್ತು ಇ-ದಿಕ್ಸೂಚಿಯನ್ನು ಬೆಂಬಲಿಸಲಿದೆ. ಇದು Moto G62 ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಡ್ಯುಯಲ್ ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಮೊಟೊ G62 ಸ್ಮಾರ್ಟ್‌ಫೋನ್‌ ಬೇಸ್ ಮಾಡೆಲ್‌ 6GB RAM + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 17,999ರೂ. ಬೆಲೆಯನ್ನು ಹೊಂದಿದೆ. ಇನ್ನು 8GB RAM + 128GB ಸ್ಟೋರೇಜ್ ಆವೃತ್ತಿಯ ಬೆಲೆ 19,999ರೂ. ಆಗಿದೆ. ಇದು ಫ್ರಾಸ್ಟೆಡ್ ಬ್ಲೂ ಮತ್ತು ಮಿಡ್ನೈಟ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ಆಫ್‌ಲೈನ್ ಔಟ್‌ಲೆಟ್‌ಗಳಲ್ಲಿ ಇದೇ ಆಗಸ್ಟ್ 19 ರಿಂದ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿರುತ್ತದೆ.

ಲಾಂಚ್‌ ಆಫರ್‌ ಏನಿದೆ?

ಲಾಂಚ್‌ ಆಫರ್‌ ಏನಿದೆ?

ಮೊಟೊ G62 ಸ್ಮಾರ್ಟ್‌ಫೋನ್‌ ಅನ್ನು HDFC ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಗ್ರಾಹಕರು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದರಿಂದ ಮೊಟೊ G62 ಅನ್ನು 16,750ರೂ. ಮತ್ತು 18,249ರೂ. ಬೆಲೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Motorola Moto G62 5G with Snapdragon 695 launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+