Home
ಸುದ್ದಿಜಾಲ

ಭಾರತದಲ್ಲಿ ಮೋಟೋ G84 5G ಲಾಂಚ್‌ ಡೇಟ್‌ ಬಹಿರಂಗ.. ಏನಿದು ಮೋಟೋ ಕನೆಕ್ಟ್?

ಭಾರತದ ಮೊಬೈಲ್‌ ವಲಯದಲ್ಲಿ ಮೊಟೊರೊಲಾ ಕಂಪೆನಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ವಿಭಿನ್ನ ಶೈಲಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದ್ದು, ಎಲ್ಲರ ಗಮನಸೆಳೆದಿದೆ. ಇದೀಗ ತನ್ನ ಹೊಸ ಮೋಟೋ G84 5G ಸ್ಮಾರ್ಟ್‌ಫೋನ್‌ ಪರಿಚಯಿಸಲು ತಯಾರಿ ನಡೆಸಿದ್ದು, ಇದರ ಬಿಡುಗಡೆ ದಿನಾಂಕ ಇದೀಗ ಬಹಿರಂಗವಾಗಿದೆ.

ಹೌದು, ಮೋಟೋ G84 5G ಸ್ಮಾರ್ಟ್‌ಫೋನ್‌ ಇದೇ ಸೆಪ್ಟೆಂಬರ್‌ 1 ರಂದು ಭಾರತಕ್ಕೆ ಎಂಟ್ರಿ ನೀಡಲಿದೆ. ಈಗಾಗಲೇ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಬಹಿರಂಗವಾಗಿದ್ದು, ಇದು ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾದೊಂದಿಗೆ ಬರಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಮೋಟೋ G84 5G ಲಾಂಚ್‌ ಡೇಟ್‌ ಬಹಿರಂಗ.. ಏನಿದು ಮೋಟೋ ಕನೆಕ್ಟ್?

ಮೋಟೋ G84 5G ಡಿಸ್‌ಪ್ಲೇ ರಚನೆ
ಮೋಟೋ G84 5G ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಬೆಂಬಲಿಸಲಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ. ಜೊತೆಗೆ 1300 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಅಲ್ಲದೆ ಇದು 10-ಬಿಟ್ ಡಿಸ್‌ಪ್ಲೇ ಮತ್ತು 100% DCI-P3 ಜೊತೆಗೆ HDR10+ ಅನ್ನು ಸಹ ಬೆಂಬಲಿಸುತ್ತದೆ.

ಮೋಟೋ G84 5G ಪ್ರೊಸೆಸರ್‌ ಯಾವುದು?
ಮೋಟೋ G84 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ 14 ಕ್ಕೂ ಹೆಚ್ಚು 5G ಕನೆಕ್ಟಿವಿಟಿ ಬ್ಯಾಂಡ್‌ಗಳಿಗೆ ಬೆಂಬಲಿಸಲಿದೆ ಎನ್ನಲಾಗಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಲಿದೆ.

ಭಾರತದಲ್ಲಿ ಮೋಟೋ G84 5G ಲಾಂಚ್‌ ಡೇಟ್‌ ಬಹಿರಂಗ.. ಏನಿದು ಮೋಟೋ ಕನೆಕ್ಟ್?

ಮೋಟೋ G84 5G ಕ್ಯಾಮೆರಾ ವಿಶೇಷ
ಮೋಟೋ G84 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌, ಎರಡನೇ ಕ್ಯಾಮೆರಾ 8MP ಅಲ್ಟ್ರಾವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 8MP ಮ್ಯಾಕ್ರೋ ವಿಷನ್ + ಡೆಪ್ತ್ ಸೆನ್ಸಾರ್‌ ಇರಲಿದೆ ಎನ್ನಲಾಗಿದೆ. ಆದರೆ ಸೆಲ್ಫಿ ಕ್ಯಾಮೆರಾದ ವಿವರ ಇನ್ನು ಕೂಡ ಬಹಿರಂಗವಾಗಿಲ್ಲ.

ಮೋಟೋ G84 5G ಬ್ಯಾಟರಿ ಮತ್ತು ಇತರೆ ಫೀಚರ್ಸ್‌
ಮೋಟೋ G84 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 30W ವೇಗದ ವೈರ್ಡ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಫೋನ್‌ನ ಕೆಳಭಾಗದಲ್ಲಿ ಗೋಚರಿಸುವ ಸ್ಪೀಕರ್ ಗ್ರಿಲ್‌ನೊಂದಿಗೆ ಫ್ಲಾಟ್ ವಿನ್ಯಾಸವನ್ನು ಹೊಂದಿದೆ. ಇದಲ್ಲದೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮಾಸ್ ಮತ್ತು ಮೋಟೋ ಸ್ಪೇಷಿಯಲ್ ಆಡಿಯೊವನ್ನು ಬೆಂಬಲಿಸಲಿದೆ. ಜೊತೆಗೆ ಮೋಟೋ ಕನೆಕ್ಟ್ ಮತ್ತು ಥಿಂಕ್‌ಶೀಲ್ಡ್ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.

ಮೋಟೋ G84 5G ಬೆಲೆ ಮತ್ತು ಲಭ್ಯತೆ
ಮೋಟೋ G84 5G ಸ್ಮಾರ್ಟ್‌ಫೋನ್‌ 6GB RAM + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 21,499ರೂ. ಬೆಲೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಸ್ಮಾರ್ಟ್‌ಫೋನ್‌ ನಿಖರವಾದ ಬೆಲೆ ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾದ್ಯತೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು ವಿವಾ ಮೆಜೆಂಟಾ, ಮಾರ್ಷ್‌ಮ್ಯಾಲೋ ಬ್ಲೂ ಮತ್ತು ಮಿಡ್‌ನೈಟ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ನೀಡುವ ನಿರೀಕ್ಷೆಯಿದೆ.

Best Mobiles in India

English summary
Motorola Moto G84 5G set a date September 1 in India launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+