Subscribe to Gizbot

ಮೋಟೋ ಎಕ್ಸ್ (ಸೆಕೆಂಡ್ ಜನರೇಶನ್) ರೂ 32,999 ಕ್ಕೆ

Written By:

ಭಾರತದಲ್ಲಿ ಮೋಟೋರೋಲಾ ಮೋಟೋ ಎಕ್ಸ್‌ನ (ಸೆಕೆಂಡ್ ಜನರೇಶನ್) 32 ಜಿಬಿ ಆವೃತ್ತಿಯನ್ನು ರೂ 32,999 ಕ್ಕೆ ಲಾಂಚ್ ಮಾಡಿದೆ. ಇನ್ನು ಈ ಮೊದಲೇ ಲಭ್ಯವಾಗಿರುವ 16ಜಿಬಿ ಆವೃತ್ತಿಯ ಮೋಟೋ ಎಕ್ಸ್ ಬೆಲೆಯನ್ನು 31,999 ರಿಂದ 29,999 ಕ್ಕೆ ಕಡಿತಗೊಳಿಸಲಾಗಿದೆ.

ಇದನ್ನೂ ಓದಿ: ಮೈಕ್ರೋಮ್ಯಾಕ್ಸ್ ವೈಯು ಯುರೇಕಾ ಭರ್ಜರಿ ಪ್ರತಿಸ್ಪರ್ಧಿಗಳು

ಕಳೆದ ವಾರ, ಮೋಟೋರೋಲಾ ಅಧಿಕೃತವಾಗಿ 32ಜಿಬಿ ಆವೃತ್ತಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಅಧಿಕೃತವಾಗಿ ಪಟ್ಟಿ ಮಾಡಿದೆ. ಇನ್ನು ಹಳೆಯ ಸ್ಮಾರ್ಟ್‌ಫೋನ್ ವಿನಿಮಯದಲ್ಲಿ ರೂ 6,000 ದವರೆಗಿನ ವಿನಾಯಿತಿಯಲ್ಲಿ ಮೋಟೋರೋಲಾ ಮೋಟೋ ಎಕ್ಸ್ 32ಜಿಬಿ ಆವೃತ್ತಿ ಲಭ್ಯವಾಗುತ್ತಿದೆ. ಮತ್ತು ಕ್ರೆಡಿಟ್ ಡೆಬಿಟ್ ಕಾರ್ಡ್‌ಗಳೊಂದಿಗೆ ಪ್ರಮಾಣಿತ ಚಾರ್ಟೆಡ್ ಬ್ಯಾಂಕ್ ಗ್ರಾಹಕರಿಗೆ 10 ಶೇಕಡಾ ವಿನಾಯಿತಿ ದೊರೆಯಲಿದೆ.

ಮೋಟೋ ಎಕ್ಸ್ 16ಜಿಬಿ ಆವೃತ್ತಿ ಮೇಲೆ ದರಕಡಿತ

ಎರಡೂ ಫೋನ್‌ಗಳು ವಿಸ್ತರಿಸಲು ಸಾಧ್ಯವಾಗದೇ ಇರುವ ಆಂತರಿಕ ಸಾಮರ್ಥ್ಯದೊಂದಿಗೆ ಬಂದಿದ್ದು ಗುರುತುಸಬಹುದಾದ ವಿಶೇಷತೆಗಳನ್ನು ಈ ಆವೃತ್ತಿಗಳು ಪಡೆದುಕೊಂಡಿದೆ. ಮೋಟೋ ಎಕ್ಸ್ (ಜನರೇಶನ್ 2) ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್‌ನೊಂದಿಗೆ ಚಾಲನೆಯಾಗುತ್ತಿದ್ದು, ಫೋನ್‌ಗೆ ಆಂಡ್ರಾಯ್ಡ್ 5.0 ಲಾಲಿಪಪ್ ಅಪ್‌ಡೇಟ್ ಅನ್ನು ಎದುರು ನೋಡಬಹುದಾಗಿದೆ.

ಮೋಟೋ ಎಕ್ಸ್ (ಜನರೇಶನ್ 2) 5.2 ಇಂಚಿನ ಓಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಗೋರಿಲ್ಲಾ ಗ್ಲಾಸ್ 3 ಸುರಕ್ಷತೆ ಡಿವೈಸ್‌ಗಿದೆ. ಮೋಟೋ ಎಕ್ಸ್ (ಜನರೇಶನ್ 2) 2.5GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ ಬಂದಿದ್ದು, 2 ಜಿಬಿ RAM ಅನ್ನು ಡಿವೈಸ್‌ನಲ್ಲಿ ಕಾಣಬಹುದಾಗಿದೆ. ಫೋನ್‌ನ ರಿಯರ್ ಕ್ಯಾಮೆರಾ ಸಾಮರ್ಥ್ಯ 13 ಮೆಗಾಪಿಕ್ಸೆಲ್ ಆಗಿದ್ದು 4 ಕೆ ವೀಡಿಯೊವನ್ನು ಇದರಲ್ಲಿ ದಾಖಲಿಸಬಹುದಾಗಿದೆ. ಇನ್ನು ಫೋನ್‌ನ ಮುಂಭಾಗ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿದ್ದು 1080ಪಿ ವೀಡಿಯೊ ರೆಕಾರ್ಡಿಂಗ್ ಅನ್ನು ಇದರಲ್ಲಿ ಮಾಡಬಹುದು.

English summary
This article tells about Motorola Moto X (Gen 2) 32GB Launched at Rs. 32,999; 16GB Gets Price Cut.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot